ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಡಿಸೆಂಬರ್ 19, 2010

‘ಮಹಾಭಾರತ’ ಮತ್ತು ‘ಹದಿನೆಂಟು’ (Numerology)

ಶ್ರೀಮಧ್ಭಗವತ್ ಗೀತೆಯ ಬಗ್ಗೆ ಶ್ರೀ ವೇದವ್ಯಾಸರು ಒಂದು ಮಾತು ಹೇಳ್ತಾರೆ "ಶಾಸ್ತ್ರೇಷು ಭಾರತಂ ಸಾರಹ, ಭಾರಾತೆ ಗೀತಿಕಾ ವರ, ವಿಷ್ಣೋ ಸಹಸ್ರನಾಮೆಪಿ
ದೇಯಂ ಪಟ್ಯ೦ಚ ತದ್ವಯ೦". ಅಂದ್ರೆ ಸಮಸ್ತ ಪುರಾಣ ,ವೇದ,
ಅಥವಾ ಸರ್ವ ಶಾಸ್ತ್ರಗಳಲ್ಲಿ ಅತ್ಯಂತ ಶ್ರೇಷ್ಟವಾದದ್ದು 'ಮಹಾಭಾರತ'. ಮಹಾಭಾರತದಲ್ಲಿ ಶ್ರೇಷ್ಟವಾದದ್ದು
ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ. ಅವೆರಡನ್ನ 'ದೇಯಂ ಪಟ್ಯ೦ಚ ತದ್ವಯ೦' -ತಿಳಿದು ಓದು ಎಂದು. ಅಂದರೆ ತಿಳಿದು ಓದಿದರೆ ಸಮಸ್ತ ಭಾರತದ ತತ್ವ ಶಾಸ್ತ್ರದ ಸಾರ ಸಂಗ್ರಹವನ್ನ
ತಿಳಿದ ಹಾಗಾಗುತ್ತೆ.- ಯಾಕೆ?, ಇಡೀ ಮಹಾಭಾರತದಲ್ಲಿ ಏನಿದೆ? ಅದನ್ನು ಭಗವದ್ಗೀತೆಯನ್ನು ಓದಿದಾಗಲೂ ತಿಳಿಯುವುದಿಲ್ಲ,
ಸಹಸ್ರನಾಮ ಓದಿದಾಗಲೂ ತಿಳಿಯುವುದಿಲ್ಲ. ಮಹಾಭಾರತ, ಕೌರವರ  ಪಾಂಡವರ ಒಂದು ಬದುಕಿನ ಇತಿಹಾಸ. ಹಾಗಾದರೆ ಮಹಾಭಾರತಕ್ಕೂ
ಇವೆರಡಕ್ಕೂ ಏನು ಸಂಭಂದ? ಇದು ಅನೇಕ ಜನರಿಗಿರುವ
ಗೊಂದಲ. ಇದು ಏನು ಎಂದು ತಿಳಿಯಬೇಕಾದರೆ ನಾವು ಮಹಾಭಾರತವನ್ನ ಸ್ವಲ್ಪ ಆಳವಾಗಿ ತಿಳಿಯಬೇಕಾಗುತ್ತೆ.
ಮಹಾಭಾರತದಲ್ಲಿಯೇ ವೇದವ್ಯಾಸರು ಮಹಾಭಾರತದ ಬಗ್ಗೆ
ಒಂದು ಮಾತು ಹೇಳ್ತಾರೆ. " ತ್ರಯೊರ್ಥಾಹ ಸರ್ವ ವೇದೇಶು, ದಶಾರ್ಥಾಹ ಸರ್ವ ಭಾರತೆ, ವಿಷ್ನೋರ್ಸಹಸ್ರನಾಮೇಪಿ
ನಿರಂತರ ಶಥಾರ್ಥಕಮ್". ಅಂದ್ರೆ ವೇದಕ್ಕೆ ಮೂರು ಅರ್ಥಗಳು ಅಂದ್ರು. ಮೂರು ಅಂದ್ರೆ ಬರೀ ಮೂರೇಅಲ್ಲ,minimumಮೂರು.ಮೂರು ಅರ್ಥಕಿಂತ ಕಡಿಮೆ ಅರ್ಥವಿರುವ ಮಂತ್ರ
ಯಾವ ವೇದದಲ್ಲೂ ಇಲ್ಲ. ಮಹಾಭಾರತದ ಎಲ್ಲಾ ಶ್ಲೋಕಗಳಿಗೂ minimum ಹತ್ತು ಅರ್ಥಗಳಿವೆ ಅಂದ್ರು.
ಹಾಗೆಯೇ ವಿಷ್ಣು ಸಹಸ್ರನಾಮದ ಒಂದೊಂದು ನಾಮಕ್ಕೂ minimum ನೂರು ಅರ್ಥವಿದೆ. ಹೀಗೆ ಅದರ ಸಾರದ ಮಹತ್ವವನ್ನ ತಿಳಿಸಿದರು.
ವೇದವ್ಯಾಸರು ಹೇಳ್ತಾರೆ "ಮಹಾಭಾರತ ಮೂರು ವಿದದಲ್ಲಿ ತೆರೆದುಕೊಳ್ಳುತ್ತೆ. " ಅಂದ್ರೆ
ಮೂರು ಮುಖದಿಂದ ಮಹಾಭಾರತವನ್ನ ನೋಡು ಅಂದ್ರು. ಅದು ಹೇಗೆ? "ಮಾನ್ವಾದಿ ಕೇಚಿದ್ ಬ್ರೂವತೆ, ಆಸ್ಥಿಕಾದಿ ತಥಾಪರೆ, ತತೋಪಾನಿಚರಾಧನ್ಯೆ ಭಾರತಂ
ಪರಿಚಕ್ಶಥೆ". ಮೂರು ವಿದದಿಂದ ಭಾರತ ತೆರೆದುಕೊಳ್ಲುತ್ತೆ. ಯಾರ ಯಾರ ಯೋಗ್ಯತೆ ಎಷ್ಟೆಷ್ಟೋ ಅವರಿಗೆ
ಹಾಗೆ ತೆರೆಯುತ್ತೆ. ಮೊದಲನೆಯದ್ದು- "ಆಸ್ತಿಕಾದಿ" ಅಂದ್ರೆ ಆಸ್ತಿಕಾರದ ಪಾಂಡವರ ಚರಿತ್ರೆ, ನಾಸ್ತಿಕರಾದ ಕೌರವರ ವಿರುದ್ದ
ಆಸ್ತಿಕರಾದ ಪಾಂಡವರು ಧರ್ಮದಿಂದ ಹೇಗೆ ವಿಜಯವನ್ನ ಸಾಧಿಸಿದರು ಎಂದು ಒಂದು ಮುಖ. ಕೌರವ ಪಾಂಡವರ ಇತಿಹಾಸ
ರೂಪದ ಕಥೆ. ಅದಕ್ಕೆ ಅದನ್ನ ಮಹಾಭಾರತ ಅನ್ದ್ರು.ಇದು ಮಹಾಭಾರತದ ಐತಿಹಾಸಿಕ ಮುಖ. ಇದನ್ನ ನಾವು ತಿಳಿಯಬೇಕಾದರೆ
ಮಹಾಭಾರತವನ್ನೇ ಓದಬೇಕು. ಎರಡನೆಯದು "ಮಾನ್ವಾದಿ ಕೇಚಿದ್ ಬ್ರೂವತೆ" -ನಾವು ಮನನ ಮಾಡಿ
ತಿಳಿದುಕೊಳ್ಳಬೇಕಾದ ಮಾನಸಿಕವಾದ, ಅಧ್ಯಾತ್ಮಿಕವಾದ ಒಂದು ಮುಖವಿದೆ ಅಂದ್ರು  ಅಂದ್ರೆ
ಮನನದಿಂದ ತಿಳಿದುಕೊಳ್ಳಬೇಕಾದ ಮಾನವೀಯ ಮೌಲ್ಯಗಳ ಕಥೆ ಅಂದ್ರು. ಇದು ಮನೋವೈಜ್ಞಾನಿಕ ಮುಖ. ಮಹಾಭಾರತ
ಅಂದ್ರೆ ೫೦೦೦ ವರುಷಗಳ ಹಿಂದೆ ಉತ್ತರಭಾರತದ ಅರಸು ಮನೆತನದ,ದಾಯಾದಿಗಳಾದ ಅಣ್ಣತಮ್ಮಂದಿರು ಅರಸ್ವತ್ತಿಗೆಯ ಒಡೆತನಕ್ಕೆ
ಮಾಡಿಕೊಂಡ ಯುದ್ದದ ಕಥೆಯಲ್ಲ. ಅದರಾಚೆಗೂ ಇನ್ನೊಂದು ಮುಖವಿದೆ, ಇದು ನಮ್ಮ ನಿಮ್ಮ ಕಥೆ.
ನಮ್ಮ ನಮ್ಮ ಜೀವನ ಸಂಘರ್ಷದ ಕಥೆ. ನಮ್ಮ ಹೃದಯವೆಂಬ ಕುರುಕ್ಷೇತ್ರದಲ್ಲಿ ನಡೆಯುವ ನ್ಯಾಯಾನ್ಯಾಯಗಳ
ಕಥೆ. ಆದ್ದರಿಂದ ಇದು ಯಾರ್‍ಯಾರ ಕಥೆಯಲ್ಲ, ಇದು ನಮ್ಮ ನಿಮ್ಮ ಕಥೆ ಅಂದ್ರು.  ಮೂರನೆಯದ್ದು "ತಥಾ ಉಪನಿಚರಾಧನ್ಯೆ"- ಅಂದ್ರೆ
ಇದು ಯಾರ ಕಥೆಯೂ ಅಲ್ಲ, ಇದು (ಉಪನಿಚರ) ಮೇಲೆ ಇರುವವನ ಕಥೆ. ಅಂದ್ರೆ ಭಗವಂತನ ಕಥೆ. ಎಲ್ಲಾ ಉಪನಿಷತ್ತುಗಳು ಭಗವಂತನನ್ನ
"ಊರ್ದ್ವ ಮೂಲಂ ಮಧ ಶಾಖಂ" -ಊರ್ದ್ವ ಅಂದ್ರೆ ಮೇಲೆ ಇರುವವನು. ಇದು ಪಾಂಡವರ ಕಥೆಯಲ್ಲ, ನಮ್ಮ ನಿಮ್ಮ ಕಥೆಯಲ್ಲ, ಇದು ಮೂಲಭೂತವಾಗಿ ಭಗವಂತನ
ಕಥೆ.- ಇದು ಮೂರನೆಯ ಆಧ್ಯಾತಿಕ ಮುಖ. ಮಹಾಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. 32 ಅಕ್ಷರಗಳಿಗೆ
ಒಂದು ಶ್ಲೋಕ ಅಂತ ಹೆಸರು. ಅಂದರೆ 32 ಲಕ್ಷ ಅಕ್ಷರಗಳು ಭಗವಂತನ 32 ಲಕ್ಷ ನಾಮಗಳು. ಒಂದುಂದು ಅಕ್ಷರವೂ
ಭಗವಂತನ ಒಂದೊಂದು ನಾಮ. ಈ ಪರಂಪರೆ ಎಲ್ಲಿಂದ ಬಂತು ಅಂದ್ರೆ ವೇದದಿಂದ ಬಂತು. "ಯಾವಂತಿ ಪಟಿಥಾನಿ
ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಹ". ಋಗ್ವೇದದಲ್ಲಿ ಪ್ರಾಚೀನರ ಪ್ರಕಾರ 4 ಲಕ್ಷದ 32 ಸಾವಿರ
ಅಕ್ಷರಗಳಿವೆ. ಆದ್ದರಿಂದ ಒಮ್ಮೆ ಋಗ್ವೇದ ಓದಿದರೆ 4ಲಕ್ಷದ 32 ಸಾವಿರ ಹರಿನಾಮ ಹೇಳಿದ ಹಾಗಾಯಿತು.
ಆದಕ್ಕೋಸ್ಕರವೇ ವೇದ ಪಟನ ಪ್ರಾರಂಬಿಸುವಾಗ ‘ಹರಿ: ಓಂ’ ಅನ್ನುತ್ತಾರೆ. ಹರಿನಾಮವನ್ನೇ ನಾವು ಪಟನೆ ಮಾಡುತ್ತಿದ್ದೇವೆ  ಎಂದು ಅನುಸಂದಾನ ಮಾಡಿ ವೇದ ಓದುತ್ತಿದ್ದರು. ಹಾಗಾದರೆ ಮಹಾಭಾರತ
ಓದಿದರೆ 32 ಲಕ್ಷ ಹರಿನಾಮ ಓದಿದ ಹಾಗಾಯ್ತು, ಅಂದರೆ ಪ್ರತಿಯೊಂದು ಅಕ್ಷರವನ್ನೂ ಭಗವಂತನ ನಾಮವಾಗಿ
ಕಾಣುವಂತ ಸ್ಥಿತಿ. ಇದು ಆಧ್ಯಾತ್ಮಿಕ ಮುಖ.
 ಇಲ್ಲಿ ಭಗವಂತನನ್ನ 'ಉಪನಿಚರ'
ಅಥವಾ ಮೇಲೆ ಇರುವವನು ಅಂತ ಯಾಕೆ ಅಂತಾರೆ ಅಂದ್ರೆ ಭಗವಂತ ಎಲ್ಲಾ ಕಡೆಯೂ
ಇದ್ದಾನೆ, ಆದರೆ ಎಲ್ಲಕ್ಕಿಂತ ಎತ್ತರದಲ್ಲಿದ್ದಾನೆ. above all.ಇದು
ನಮ್ಮ ಸುಪ್ತ ಮನಸ್ಸಿಗೂ ಗೊತ್ತಿದೆ. ಆದ್ದರಿಂದ ನಾವು ದೇವರಿಗೇ ಗೊತ್ತು ಅನ್ನುವಾಗ ಕೈ ಮೇಲಕ್ಕೆ ಎತ್ತುತ್ತೇವೆ, -ಈ ಸಂಕೇತಗಳು ನಮಗೆ ಗೊತ್ತಿಲ್ಲದೆಯೇ ಗೊತ್ತಿರುತ್ತವೆ. ಅದಕ್ಕೆ ಸುಪ್ತಪ್ರಜ್ಞೆ ಅನ್ನುತ್ತಾರೆ.
ಭಗವಂತ ಎಲ್ಲಾ ಕಡೆ ಇದ್ದಾನೆ ಎಲ್ಲಕ್ಕಿಂತ ಎತ್ತರದಲ್ಲಿದ್ದಾನೆ. ಆ feelings ನಮಗೆ ಬೇಕು. ಅವನು ಸರ್ವೋತೃಷ್ಟನಾಗಿದ್ದಾನೆ.
ಅದಕ್ಕೋಸ್ಕರವೇ ಅವನ್ನನ್ನು ‘ಉಪನಿಚರ’ ಅನ್ನುವುದು. ಇಲ್ಲಿ ಮಾನಸಿಕವಾಗಿ ಮಹಾಭಾರತ ಹೇಗೆ ತೆರೆದುಕೊಳ್ಳುತ್ತೆ ಎಂಬುದು ನಾವು ನೋಡಬೇಕಾದ ಅಂಶ.
ಮಹಾಭಾರತಕ್ಕೆ ಪ್ರಾಚೀನರು ಕೊಟ್ಟ ಹೆಸರು
"ಜಯೋ ನಾಮ ಇತಿಹಾಸ್ವಯಂ", ಅಂದ್ರೆ ಮಹಾಭಾರತದ ಅತ್ಯಂತ
ಪ್ರಾಚೀನ ಹೆಸರು 'ಜಯ' ಎಂದು.ಅಂದರೆ ಹಿಂದಿನ ಕಾಲದಲ್ಲಿ ಯಾವುದೇ ಸಂಖ್ಯೆಯನ್ನು ಅಕ್ಷರಗಳ
ಮೂಲಕ ಹೇಳುತ್ತಿದ್ದರು. 'ಜ'ಎನ್ನುವುದು '8'ನ್ನು represent ಮಾಡುವ ಅಕ್ಷರ. {ಕ.ಖ,ಗ,ಘ,....,ಚ, ಛ, 'ಜ'.}. 'ಯ'.ಅಂದ್ರೆ ಒಂದು {ಯ,ರ,ಲ,ವ.......}.
ಹಾಗಾದರೆ ಎಂಟು ಮತ್ತು ಒಂದು ಅಂದ್ರೆ ಎಂಬತ್ತೊಂದು ಅಲ್ಲ, ಹದಿನೆಂಟು. ಯಾಕೆಂದರೆ "ಅಂಕಾನಾಮ್ ವಾಮೊಗತಿಹಿ" ಯಾವುದೇ ಸಂಖ್ಯೆಯನ್ನ ಕೂಡಿಸುವಾಗ
ಅಥವಾ ಗುಣಿಸುವಾಗ ಉತ್ತರವನ್ನ ಎಡಡಿಂದ ಬಲಕ್ಕೆ ಬರೆಯುತ್ತೆವೆ. ಆದ್ದರಿಂದ ಎಂಟು ಅದರ ಎಡಕ್ಕೆ ಒಂದು
ಹೀಗಾಗಿ "ಹದಿನೆಂಟು". ಆದ್ದರಿಂದ 'ಜಯ' ಅಂದರೆ ಹದಿನೆಂಟು"..ಅದು ಮಾತ್ರವಲ್ಲ, ಕೌರವ ಪಾಂಡವರ ಯುದ್ಧದಲ್ಲಿ
ಆಸ್ತಿಕರಾದ ಪಾಂಡವರ 'ಜಯ'. ಆದ್ಯಾತ್ಮದ ಸಾಧನೆಯಿಂದ
ಸಂಸಾರವೆಂಬ ತಾಪತ್ರಯದಿಂದ 'ಜಯ'. ಅಂದರೆ ಮೋಕ್ಷ ಸಾಧನೆಗೆ
ಉಪಯುಕ್ತವಾದ ಗ್ರಂಥ, ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹದಿನೆಂಟು ಅಂದರು.
ಅಂದ್ರೆ ಒಟ್ಟಿನಲ್ಲಿ ಮೋಕ್ಷ ಸಾಧನೆಗೆ ಮುಖ್ಯವಾಗಿ ತಿಳಿಯ ಬೇಕಾಗಿರುವುದು  'ಹದಿನೆಂಟು'. ಆದ್ದರಿಂದಲೇ 'ಮಹಾಭಾರತಕ್ಕೂ' 'ಹದಿನೆಂಟಿಗೂ'
ಗಾಢವಾದ ಸಂಭಂದವಿದೆ. ಅದರ ಬಗ್ಗೆ ಮುಂದೆ ತಿಳಿಯೋಣ
ಮುಂದುವರಿಯುತ್ತದೆ....................

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ