ಗಾಯತ್ರಿ ಹೇಗೆ ಬೆಳೆಯಿತು? ವೈದಿಕ ಪರಂಪರೆಯಲ್ಲಿ ಅದು ಬೆಳೆದು ಬಂದ ವಿದಾಣ ಅದಕ್ಕೂ ವೇದವಾವಂಗ್‌ಮಾಯಕ್ಕೂ ಇರತಕ್ಕಂತಹ ಸಂಬಂಧ, ಮತ್ತು ಅದನ್ನು ನಾವು ಅನುಸಂಧಾನ ಮಾಡುವ ಅಥವಾ ಮಾಡಬೇಕಾದ ರೀತಿ ಮತ್ತು ನಾವು ಕಂಡುಕೊಳ್ಳಬಹುದಾದ ಅರ್ಥವಿಶೇಷಗಳು-
ನಮ್ಮಲ್ಲಿ ಈಗ ಆಚರಣೆಯಲ್ಲಿ ಇರತಕ್ಕಂತಹುದು "ವಿಶ್ವಾಮಿತ್ರ" ಗಾಯತ್ರಿ. ವೇದದಲ್ಲಿ ಸಾವಿರಾರು ಗಾಯತ್ರಿಗಳಿವೆ. ಗಾಯತ್ರಿ ಅಂದ್ರೆ ಒಂದು ಛಂದಸ್ಸಿನ ಹೆಸರು . ಎಂಟು ಅಕ್ಷರದ ಮೂರು ಪಾದಾಗಳಿರುವ, ಅಂತ ಮೂರು ಚರಣಗಳಿರುವ ಯಾವುದೇ ಮಂತ್ರಕ್ಕೂ ಗಾಯತ್ರಿ ಅಂತ ಹೆಸರು.ಋಗ್ವೇದದಲ್ಲಿ ಇರುವ ಗಾಯತ್ರಿಯ ಮೊದಲ ಮಂತ್ರ
"ಅಗ್ನಿಮೀಳೆ ಪುರೂಹಿತಂ" –ಎಂಟು ಅಕ್ಷರ [ಅರ್ಧ ಅಕ್ಷರ ಲೆಕ್ಕಕ್ಕಿಲ್ಲ]
"ಯಜ್ಜ್ನ್ಹಸ್ಯ ದೇವ ಮೃತ್ಯ್ಜಂ" – ಎಂಟು ಅಕ್ಷರ
“ಹೋತಾರಂ ರಥ್ನ ಧಾತರಮ್" – ಎಂಟು ಅಕ್ಷರ. - ಹೀಗೆ ಎಂಟು ಅಕ್ಷರಗಳುಳ್ಳ ಮೂರು ಚರಣಗಳ ಯಾವೂದೆ ಮಂತ್ರಕ್ಕೂ ಗಾಯತ್ರಿ ಎಂದು ಕರೆಯುತ್ತಾರೆ. ಆದರೆ ಅವುಗಳನ್ನು ಗಾಯತ್ರಿ ಮಂತ್ರ ಅಂತ ಕರೆಯೋದಿಲ್ಲ. ಯಾಕೆಂದರೆ ಗಾಯತ್ರಿ ಸಾವಿರಾರು ಇದ್ದರೂ ಕೂಡ ಅವುಗಳಲ್ಲಿ ಶ್ರೇಷ್ಟವಾದ ಒಂದು ಮಂತ್ರಕ್ಕೆ ‘ಗಾಯತ್ರಿ ಮಂತ್ರ’ ಅಂತ ಕರೆಯುತ್ತಾರೆ. . "ಮುಖ್ಯೇನ ಸಂಪ್ರತ್ಯೆಹ" ಅಂತಾರಲ್ಲ ಹಾಗೆ-ಅದರ ನಂತರ "ಪ್ರಚೋದಯಾತ್" ಎಂಬ ಪದ ಇರತಕ್ಕಂತಹ ಮಂತ್ರಗಳ ಒಂದು ಮಾಲಿಕೆ ನಿರ್ಮಾಣವಾಯಿತು, ಆದರೆ ಒಂದನೆ ಪಾದದಲ್ಲಿ "ವಿದ್ಮಹೇ" ಎರಡನೆ ಪಾದದಲ್ಲಿ "ಧೀಮಹಿ" ಮೂರನೇ ಪಾದದಲ್ಲಿ "ಪ್ರಚೋದಯಾತ್" ಅದು ಶ್ರೇಷ್ಟವಾದ ಗಾಯತ್ರಿ ಮಂತ್ರ ಎಂದು ಪರಿಗಣಿಸಲ್ಪಟ್ಟಿತು. ಅದು ಯಾಕೆ ಅಂದರೆ "ವಿದ್ಮಹೇ" ಅಂದರೆ ಯಾವ ದೇವತಾ ಶಕ್ತಿಯನ್ನು ಪೂಜಿಸುತ್ತಿದ್ದೇನೆ ಅಂತ ತಿಳಿದುಕೊಳ್ಳೂವುದು. ಅಂದರೆ ತಿಳಿದುಕೊಳ್ಳುವ ಪ್ರೋಸೆಸ್ಸ್‌ಗೆ "ವಿದ್ಮಹೇ" ಅಂತಾರೆ.ಅದನ್ನು ತಿಳಿದು ಧ್ಯಾನ ಮಾಡುವುದು. ತಿಳಿಯದೇ ಧ್ಯಾನ ಮಾಡೋಕೆ ಬರೋಲ್ಲ. ನಮಗೆ ಯಾವ ವಸ್ತು ಗೊತ್ತಿಲ್ಲವೂ ಅದರ ಬಗ್ಗೆ ಏನು ಧ್ಯಾನ ಮಾಡಲಿಕ್ಕೆ ಬರುತ್ತೆ? ಆದ್ದರಿಂದ ಮೊದಲು ಸರಿಯಾಗಿ ತಿಳಿದುಕೊಳ್ಳುವುದು, ತಿಳಿದು ಧ್ಯಾನ ಮಾಡುವುದು. ಆದರೆ ತಿಳಿದುಕೊಳ್ಳಬೇಕು ಅಂತ ಇಚ್ಛೆ ಬರಬೇಕಲ್ಲ – ಅಯ್ಯೋ ಯಾರಿಗೆ ಬೇಕು ಇದು ಇನ್ನೊಂದು ದಿವಸ ನೋಡೋಣ ಅಂತ postpone ಮಾಡುತ್ತಲೇ ಇರುತ್ತೇವೆ. ಆದ್ದರಿಂದ ತಿಳಿದುಕೊಳ್ಳುವಂತೆ, ತಿಳಿದು ಧ್ಯಾನ ಮಾಡುವಂತೆ ಬುದ್ದಿಗೆ ಪ್ರೇರಣೆಬೇಕು, ನಮ್ಮ ಸ್ವಂತ ಶಕ್ತಿಯಿಂದ ಆಗುವ ಮಾತಲ್ಲ. ಅದಕ್ಕೋಸ್ಕರ ಕೊನೆಯಲ್ಲಿ "ಪ್ರಚೋದಯಾತ್" – ಇದು ಗಾಯತ್ರಿ ಮಂತ್ರದ ಮೂರು ಮುಖಗಳು.
ವಿಶ್ವಾಮಿತ್ರ ಗಾಯತ್ರಿಯಲ್ಲಿ ಓಂಕಾರ ಅನಂತರ ಮೂರು ವ್ಯಾಹೃತಿಗಳು ಆಮೇಲೆ ಗಾಯತ್ರಿ- ಇಷ್ಟೂ ಸೇರಿ "ವಿಶ್ವಾಮಿತ್ರ ಗಾಯತ್ರಿ" ಅಂದರೆ ವಿಶ್ವಾಮಿತ್ರ ತಪಸ್ಸು ಮಾಡಿ ಸಿದ್ದಿ ಪಡೆದ ಮಂತ್ರ. ಗಾಯತ್ರಿ ವಿಶ್ವಾಮಿತ್ರನು ಕಂಡು ಕೊಂಡದ್ದಲ್ಲ. ಈ ಕಾಂಬಿನೇಶನ್ವಿಶ್ವಾಮಿತ್ರನದ್ದು. – ಅಂದರೆ ಓಂ ಭೂ ರ್ಭುವ ಸ್ವ್ಹಹಾದ ಜೊತೆಗೆ ತಾತ್ಸಾವಿತುರ್ವರೇಣ್ಯಂ........................ಪಟಿಸುವ ಈ ವಿಶಿಷ್ಟ ಕ್ರಮ ವಿಶ್ವಾಮಿತ್ರನ ದರ್ಶನದಿಂದ ಕಂಡು ಬಂದದ್ದು . ಈ ಸಂಯೋಜನೆಯ ಹಿಂದೆ ಅವನ ಅನುಸಂದಾನಏನು? ಅದರ ಹಿನ್ನಲೆಯಲ್ಲಿ ನಾವೀಗ ಗಾಯತ್ರಿಯನ್ನು ನೋಡೋಣ..........ವಿಶ್ವಾಮಿತ್ರನು ಒಬ್ಬ ಕ್ಷತ್ರಿಯನಾಗಿದ್ದು 'ದಿಗ್ಬಲಮ್ ಕ್ಷತ್ರಿಯ ಬಲಮ್, ಬ್ರಹ್ಮ ತೇಜೋ ಬಲಮ್ ಬಲಮ್' ವಾಶಿಷ್ಟರ ಬ್ರಹ್ಮ ತೇಜಸ್ಸಿನ ಮುಂದೆ ಅವನ ಕ್ಷಾತ್ರ ಯಾವುದೇ ನಡೆಯದೆ ಇದ್ದಾಗ ಈ ಪೌರುಷ, ಇದು ಬೇಡ .ವಾಶಿಷ್ಟರಂತೆ ನಾನೂ ಬ್ರಹ್ಮ ವರ್ಚಸ್ಸು ಬೆಳೆಸಿಕೂಬೇಕು ಆ ಬ್ರಹ್ಮ ಬಲವೆ ಬಲ ಅಂತ ಅನ್ನಿಸಿ ತಪಸ್ಸಿಗೆ ನಿಂತು ವನು ಕಂಡುಕೊಂಡ ಮಂತ್ರ. ಇದರ ಒಂದು Pprocess ಗೋ ತ್ತಾಗಬೇಕಾದರೆ ನಾವು ಮೊದಲಿಗೆ ಓಂ ಕಾರದಿಂದ ಪ್ರಾರಂಭ ಮಾಡಬೇಕು
ಓಂ .... ಇದನ್ನು ಒಡೆದಾಗ ನಮಗೆ ಮೂರು ಸ್ವರಗಳು ಸಿಗುತ್ತವೆ. ಅದುವೇ...ಅ, ಉ, ಮ.. ಇವು ಮೂರು ಸೇರಿದಾಗ ಓಂ ಆಗುತ್ತೆ. ಹಾಗಾದರೆ ಅ ಉ ಮ ಅಂದರೆ ಏನು? ಇದು ಏನನ್ನು ಹೇಳುತ್ತೆ? ನೋಡೋಣ.
ಗಾಯತ್ರಿಚಿಂತನ ಮುಂದುವರಿಯುತ್ತದೆ.................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ