ಕೃಷ್ಣ ಒಂದು ಕಡೆಯಲ್ಲಿ ಹೇಳುತ್ತಾನೆ "ಓಂ ತತ್ಸತ್" ಅನ್ನುವುದೂ ಭಗವಂತನ ಹೆಸರು. ‘ಓಂ’ ನ ಅರ್ಥ ಗೊತ್ತಾಯಿತು, ಆದರೆ ‘ತತ್’ ಮತ್ತು ‘ಸತ್’ ಕೂಡಾ ಭಗವಂತನೇ. ‘ತತ್’ ಅಂತ ಭಗವಂತನ ಉಪಾಸನೆ ಮಾಡಬೇಕು ಎಂದು ತಳಾವಕಾರೋಪನಿಷತ್ನಲ್ಲಿಯೂ ಹೇಳುತ್ತಾರೆ. ‘ತತ್’ ಅಂದ್ರೆ ತತ , ಎಲ್ಲಾ ಗುಣಗಳಿಂದ ತತ, ಎಲಾ ಕಡೆಗಳಲ್ಲಿ ತತ, ಅಂದ್ರೆ ಎಲ್ಲಾ ಕಡೆಗಳಲ್ಲಿ ಎಲ್ಲಾ ಗುಣಗಳಿಂದ ತುಂಬಿರುವವ ‘ತತ್’. ಅದು ಮಾತ್ರವಲ್ಲ - ಗಾಯತ್ರಿ ಎಂಬುದು its satrts from ‘ತ’, and ends with ‘ತ್’. so, ‘ತತ್’ ಅಂದರೆ ಇಡೀ ಗಾಯತ್ರಿಯ abrivation ಆಯಿತು. ಮತ್ತು ಗಾಯತ್ರಿಯ ಮೊದಲ ಶಬ್ದವು ‘ತತ್’. ‘ಸತ್’ ಅಂದ್ರೆ pure existence.ಇವೆರಡು ಗಾಯತ್ರಿಯ ಎರಡು aspects.ಗಳು. ಅದನ್ನೇ ಕೃಷ್ಣ “ಓಂ ತತ್ಸತ್ ಇತಿ ನಿರ್ದೇಶಿ” ಅಂದ – ‘ತತ್’ ಅಂದ್ರೆ ಸರ್ವಗುಣ ಪೂರ್ಣ, ಸರ್ವ ಕಾಲ , ಸರ್ವ ದೇಶ ಪೂರ್ಣ, ‘ಸತ್’ ಅಂದ್ರೆ pure existence. ಎಲ್ಲ ಗುಣಗಳಿಂದ ತುಂಬಿದೆ ಎಂದು ‘ತತ್’ ಹೇಳುತ್ತೆ. ಯಾವ ದೋಷವೂ ಇಲ್ಲ ಎಂದು ‘ಸತ್’ ಹೇಳುತ್ತೆ. - ಅದು ಯಾವುದು? ಓಂ ಅಷ್ಟೇ
ಈಗ ‘ತತ್ಸ ವಿತುರ್ವರೇಣ್ಯಂ’ ಅಂದ್ರೆ ಏನು ನೋಡೋಣ- ಇದು ಮೂಲತ ಸೂರ್ಯಮಂಡಲದಲ್ಲಿರತಕ್ಕಂತಹ, ಇಡೀ ಜಗತ್ತಿಗೆ solar energy ಯನ್ನು ಅಥವಾ ಪ್ರಾಣ ಶಕ್ತಿಯನ್ನು ಕೊಡತಕ್ಕಂತಹ, ಸೂರ್ಯನಲ್ಲಿ ಅಂತರ್ಗತನಾದ ನಾರಾಯಣನ ಉಪಾಸನೆ. ‘ತತ್’ ಅಂದರೆ ‘ಅದು’ ಎಂದರ್ಥ ಮತ್ತು ‘ಇದು’ ಎಂದರ್ಥ. ( ಅಲ್ಲಿಯೂ ಇರುವಂತಹುದು, ಇಲ್ಲಿಯೂ ಇರುವಂತಹುದು.) ‘That’ is also that ‘ತತ್’ and ‘This’ is also ‘ತತ್’. ಮತ್ತೆ ಓಂಕಾರದ ಅರ್ಥವೇ ಬಂತು. ‘ತತ್’ ಅಂದ್ರೆ ‘omnipresent’ ಅಂತಹ ಭಗವಂತನನ್ನ ನಾವು ಗಾಯತ್ರಿ ಮೂಲಕ ಉಪಾಸನೆ ಮಾಡುತ್ತೇವೆ. "ತತ್ ಧೀಮಹಿ" .
ಸವಿತ - ಅಂದ್ರೆ ಸೂರ್ಯ. ಸವಿತುಃ ಅಂದ್ರೆ ಸೂರ್ಯನಿಗೆ ಸಂಬಂಧ ಪಟ್ಟದ್ದು. ಅಂದರೆ ಭಗವಂತನ ಪ್ರತೀಕ ಸೂರ್ಯನಲ್ಲಿ ಇದೆ ಎಂದು ಗಾಯತ್ರಿ ಹೇಳುತ್ತೆ. ಆದ್ದರಿಂದ ಗಾಯತ್ರಿ ಪತಿಸುವಾಗ ಸೂರ್ಯಮಂಡಲವನ್ನ consider ಮಾಡು, concentrate on Sooryamandala, not on Narayana ಯಾಕೆಂದರೆ ನಮಗೆ ‘ನಾರಾಯಣ’ ಹೇಗಿದ್ದಾನೆ ಎಂಬುದು ಗೊತ್ತಿಲ್ಲ ತಾನೆ? ಗೊತ್ತಿಲ್ಲದ್ದನ್ನ ಹೇಗೆ concentrate ಮಾಡೋದು? ಮತ್ತೇನು ಮಾಡಬೇಕು ಅಂದ್ರೆ ಸೂರ್ಯಮಂಡಲದಲ್ಲಿ ‘ನಾರಾಯಣ’ ಇದ್ದಾನೆ ಎಂದು ತಿಳಿದು ಧ್ಯಾನ ಮಾಡು ಅಂತಾರೆ ಶಾಸ್ತ್ರಕಾರರು. - ಭಾಗವತ ಹೇಳುತ್ತೆ " ಸ್ಥೂಲೆ ಭಾಗವತೊ ರೂಪೆ" .- ಅಂದ್ರೆ ಕಣ್ಣು ಮುಚ್ಚಿ ಧ್ಯಾನ ಮಾಡು, 'ಭಗವಂತ ಕಾಣೋಲ್ಲ ಸ್ವಾಮಿ' ಮತ್ತೇನು ಕಾಣುತ್ತೆ? "ನನ್ನ ಮನೆಯೇ ಕಾಣುತ್ತೆ. "ಸರಿ ಮನೆಯನ್ನೇ ಕಣ್ಮುಚ್ಚಿ ನೋಡು, ಆದರೆ ನನ್ನ ಮನೆ ಬರೀ ಇಟ್ಟಿಗೆ ಸಿಮೆಂಟ್‌ನಿಂದ ಆದದ್ದಲ್ಲ, ಅದರ ಗೋಡೆಯೊಳಗೂ ಭಗವಂತ ತುಂಬಿದ್ದಾನೆ ಅಂತ ತಿಳಿದು ಧ್ಯಾನ ಮಾಡು.- ಕಾಣುವುದು ಅದನ್ನೇ ಆದರೆ ಆ aspect ನ್ನ change ಮಾಡು. ಹೀಗೆ ಕ್ರಮೇಣ meditation develop ಮಾಡು ಅಂತಾರೆ .
ಸವಿತಾ ಅಂದ್ರೆ ಸೂರ್ಯ ಯಾಕೆ? - 'ಸೂತೆ ಇತಿ ಸವಿತಃ' . ಯಾರು ಜಗತ್ತನ್ನ ಹೆತ್ತ ಶಕ್ತೀಯೋ ಅದು ಸವಿತಾ. ಅಂದ್ರೆ ಅವನಲ್ಲಿ ತಂದೆಯ aspect ಇದೆ, ತಾಯಿಯ aspect ಇದೆ. ಪ್ರಳಯ ಕಾಲದಲ್ಲಿ ಜಗತ್ತು ಅವನ ಹೊಟ್ಟೆಯಲ್ಲಿ ಇತ್ತು, ನಂತರ ಹೆತ್ತ , ಆದ್ದರಿಂದ ಅವನೆ ತಾಯಿ, ಅವನೆ ತಂದೆ." ತ್ವಮೇವ ಮತಾಚ ಪೀತಾತ್ವಮೇವ" ಇದು ಸವಿತಾ ಎಂಬ ಪದದ ಮೂಲ ಅರ್ಥ. ಅವನೆ ಸವಿತು, ಸೂರ್ಯಮಂಡಲದಲ್ಲಿರುವವನು.
'ವರೆನಿಯಮ್' - "ವರ್ಣೀಯೊ ಗುಣಾನ್ವಥೆ" ಅಂದ್ರೆ ಅದು ಎಲ್ಲರೂ ಆಶ್ರಯಿಸ ಬೇಕಾದಂತಹ ಬೆಳಕು. ‘ವರೆನಿಯಮ್’ ಅಂದರೆ ದೊಡ್ಡದು ಎಂದರ್ಥ. ಆದ್ದರಿಂದಲೇ ಅದರ ನೆರಳಿನ ಅಡಿಯಲ್ಲಿ ಎಲ್ಲರೂ ಆಶ್ರಯಿಸ ಬೇಕು ಎಂದರ್ಥ. ವರ, ವರಾಹ, ವರೇಣ್ಯಾ ಇವೆಲ್ಲವೂ ಅದೇ ಅರ್ಥ. ಎಲ್ಲಕಿಂತಲೂ ಶ್ರೇಷ್ಟ ಬೆಳಕು. ಅದು ಯಾವ ತರದ ಬೆಳಕು ಅಂದ್ರೆ " ಭರ್ಗಹ" ಅಂದ್ರು. - "ಭ ರತಿ ಜ್ಞಾನ ರೂಪತ್ವ" ಅಂದರೆ ನಮಗೆ ಗೊತ್ತಿರುವುದು ಎರಡು ಬಗೆಯ ಬೆಳಕು. ೧. ಬೆಂಕಿ ಕಡ್ಡಿಯಿಂದ ಬರುವ ಬೆಳಕು. ೨. ವಿದ್ಯುತ್ನಿಂದ ಬರುವ ಬೆಳಕು. ಆದರೆ ಭರ್ಗಹ ಅಂದರೆ ನಾವು ತಿಳ್ಕೊಂಡ ಈ ಬೌತಿಕವಾದ ಬೆಳಕಲ್ಲ, it is not material light. ಬೌತಿಕವಾದ ಬೆಳಕು ಒಂದು ದಿನ ನಾಶವಾಗಲೇ ಬೇಕು. ಯಾಕೆಂದರೆ ಯಾವುದು meterial , ಅದು ನಾಶವಾಗಲೇ ಬೇಕು. ಆದರೆ ಇದು ಯಾವುದರಿಂದ ಮಾಡಿದ ಬೆಳಕು ಅಂದರೆ 'ಭರ್ಗಹ' ಅಂದರು. 'ಭ'ಅಂದ್ರೆ ಬೆಳಕು, 'ರ' ಅಂದ್ರೆ 'ರತಿ',ಆನಂದ, 'ಗ' ಅಂದರೆ 'ಜ್ಞಾನ' ಅಂದರೆ ಜ್ಞಾನಾನಂದಮಯ ಬೆಳಕು. ಜ್ಞಾನಂದವೇ ಬೆಳಕಾಗಿ ನಿಂತಿದೆ ಹೊರತು ಬೆಂಕಿ ಕಡ್ಡಿಯಿಂದಾಗಲಿ, ವಿದ್ಯುತ್ತಿನಿಂದಾಗಲಿ, ಸೂರ್ಯ ಚಂದ್ರರಿಂದಾಗಲಿ ಆದ ಬೆಳಕಲ್ಲ. .......ಅಜ್ಞಾನ ಅಂದರೆ ಕತ್ತಲೆ. ಜ್ಞಾನ ಅಂದರೆ ಬೆಳಕು. "ತಮಸೋಮ ಜ್ಯೋತೀರ್ಗಮಯ". ಅದು ಯಾವತ್ತೂ ನಂದದ ದೀಪ. ಜಗತ್ತಿನ ಎಲ್ಲಾ ಬೆಳಕು ಯಾವುದರ ಪ್ರತಿಫಲನವೋ ಅಂತಹ ಬೆಳಕನ್ಣ ಧ್ಯಾನ ಮಾದೊನ.ಯಾಕೆ ಧ್ಯಾನ ಮಾಡಬೇಕು ಅಂದ್ರೆ "ದಿಯೋ ಯೋನ ಪ್ರಚೋದಯಾತ್" ನಮ್ಮ 'ಧೀ' ಶಕ್ತಿಯನ್ನು ಅಂದರೆ ನಮ್ಮ ಎಲ್ಲಾ ಚಿಂತನ ಪ್ರಕಾರಗಳನ್ನು, ಮನೋವೃತ್ತಿಗಳನ್ನು ಅವನು ಒಳ್ಳೆಯದರ ಕಡೆಗೆ ಪ್ರೇರೇಪಿಸಬೇಕು. ಅಂದರೆ ನಮಗೆಲ್ಲರಿಗೂ ಒಳ್ಳೆಯದನ್ನ ನೋಡುವ, ಒಳ್ಳೆಯದನ್ನ ಕೇಳುವ, ಒಳ್ಳೆಯದನ್ನ ಆಡುವ, ಒಳ್ಳೆಯದನ್ನ ಯೋಚಿಸುವಂತೆ ಅವನು ಪ್ರೇರೇಪಿಸಲಿ- ಇಷ್ಟೇ ನಮ್ಮ ಪ್ರಾರ್ಥನೆ.ಇದುವೆ "ದಿಯೋ ಯೋನ ಪ್ರಚೋದಯಾತ್".
ಇಲ್ಲಿಯವರೆಗೆ ಗಾಯತ್ರಿ ಮಂತ್ರದ ಉಪಾಸನೆಯ ಹಲವು ಹಂತಗಳನ್ನು ನಾವು ನೋಡಿದೆವು. ಮೊದಲು ಓಂಕಾರ ಆಮೇಲೆ ವ್ಯಾಹೃತಿ ಆಮೇಲೆ ತಾತ್ಸಾವಿತುರ್ವರೇಣ್ಯಂ........................ಪ್ರಚೋದಯಾತ್. ಇನ್ನೂ ಮುಂದಕ್ಕೆ ಹೋಗೋಣ. ಅದು ಅಲ್ಲದೇ ಭಗವ್ಂತನ ಪರಿಪೂರ್ಣವಾದ ಹತ್ತು ಹಲವು ರೂಪಗಳನ್ನು ಗಾಯತ್ರಿ ಹೇಳುತ್ತದೆ. ಅದರಲ್ಲಿ ಮುಖ್ಯವಾಗಿ ದಶಾವತಾರ ಮತ್ತು ಭಗವಂತನ ೨೪ ರೂಪ. ಈಗ ಗಾಯತ್ರಿಯಲ್ಲಿ ದಶಾವತಾರದ ಚಿಂತನೆ ಹೇಗೆ ಎಂದು ನೋಡೋಣ- ಗಾಯತ್ರಿಯಲ್ಲಿ ಪದಗಳು ಹತ್ತು,- ತತ್, ಸವಿತುಃ, ವರೆನಿಯಮ್,ಭರ್ಗಹ, ದೇವಸ್ಯ,ಧೀಮಹಿ,ದಿಯ, ಯಹ, ನಹ,ಪ್ರಚೋದಯಾತ್.- ಈ ಹತ್ತು ಪದಗಳಿಗೂ ಭಗವಂತನ ಹತ್ತು ಅವತಾರಗಳಿಗೂ ಸಂಬಂದ ಹೇಗೆ ಅಂದರೆ- ಮೊದಲನೆಯದ್ದು 'ಮತ್ಸ್ಯರೂಪ'. ಮತ್ಸ್ಯರೂಪವನ್ಣ ತತ್ ಅಂದ್ರು. ತತ್ ಅಂದ್ರೆ ಹಬ್ಬುವುದು. ವೈವ್ವಸುಥ ಮನು ಸೂರ್ಯನಿಗೆ ಅರ್ಘ್ಯ ಕೊಡಲಿಕ್ಕೆ ಅಂತ ಬೊಗಸೆಯಲ್ಲಿ ನೀರೆತ್ತಿದಾಗ ಭಗವಂತ ಒಂದು ಪುಟ್ಟ ಮೀನಾಗಿ ಕಾಣಿಸಿಕೊಂಡ. ಪುಟ್ಟ ಮೀನಾಗಿ ಕಾಣಿಸಿಕೊಂಡವ ಕೈಯಿಂದ ಕೆಳಕ್ಕೆ ಬಿದ್ದು ತತನಾದ, ತತನಾದ, ತತನಾದ, ಬೆಳೆದ, ಬೆಳೆದ ಬಾವಿಯಲ್ಲಿ ತುಂಬಿದ, ಕೆರೆಯಲ್ಲಿ ತುಂಬಿದ, ನದಿಯಲ್ಲಿ ತುಂಬಿದ,ಸಮುದ್ರದಲ್ಲಿ ತುಂಬಿ ವೈವಸುತ ಮನುವನ್ನ ಕರೆದುಕೊಡು ಹೋದ. ಆದ್ದರಿಂದ ಬಹಳ ಸ್ಪಷ್ಟವಾಗಿ ಮತ್ಸ್ಯರೂಪದ ವಿವರಣೆ ಕೊಟ್ಟರು.
ನಂತರ ಸವಿತು:- ಸವಿತಾ ಅಂದರೆ 'ಸವನ'- ಯಜ್ಞದಲ್ಲಿ ಸೋಮ ಸವನ ಅಂತಾರೆ. ಸೊಮ ರಸವನ್ನ ಜಜ್ಜಿ ರಸ ತೆಗೆಯುವುದಕ್ಕೆ ಸವನ ಅಂತಾರೆ. ಇಲ್ಲೂ ಅದೇ ಆದದ್ದು. ಮಂದಾರ ಪರ್ವತಕ್ಕೆ ಬೆನ್ನು ಕೊಟ್ಟು ಅಮೃತದ ಸವನವಾಯ್ತು. ಅಂದರೆ ಅಮೃತದ ರಸದ ಸವನಕ್ಕೆ ಕಾರಣನಾದವನೆ ಸವಿತಾ - ಬಹಳ ಸಹಜವಾಗಿ ಕೂರ್ಮ ರೂಪದ ಕಥೆಯನ್ನ ಹೇಳಿದರು.
ವರೇಣ್ಯಂ :ವರೇಣ್ಯಂ ಅಂದರೆ ದೊಡ್ಡದು ಎಂದರ್ಥ. ವರಾಹ ಅಂದ್ರೂ ಅದೇ ಅರ್ಥ.(ವರಾಹ ಅಂದ್ರೆ ಹಂದಿಯಲ್ಲ.) ವರಾಹ ನಾಮಕ ಭಗವಂತ ಹಂದಿಯ ರೂಪದಲ್ಲಿ ಕಾಣಿಸಿಕೊಂಡನಾದ್ದರಿಂದ ಹಂದಿಗೆ ವರಾಹ ಎಂಬ ಅರ್ಥ ಬಂತು. ವರಾಹ ಎಂಬ ಶಬ್ದಕ್ಕೆ ಹಂದಿ ಎಂಬ ಅರ್ಥವಿಲ್ಲ. ವರ,ವರಾಹ,ವರೇಣ್ಯಂ, ಇವೆಲ್ಲದರ ಅರ್ಥ ಎತ್ತರದಲ್ಲಿರುವವ ಎಂದು. ಅದಕ್ಕೆ ಪ್ರಾಚೀನ ಸಂಸ್ಕೃತದಲ್ಲಿ ವರಾಹ ಅಂದ್ರೆ 'ಮೋಡ' ಎಂಬರ್ಥವೂ ಇದೆ.
ಭರ್ಗಹ : - ಭರ್ಜನೆ, ಸುಟ್ಟು ಬಿಡುವವ ಎಂದರ್ಥ. ನಮ್ಮಲ್ಲಿರತಕ್ಕಂತಹ ದುಖ ದುರಿತಾದಿಗಳನ್ನು ಸುಟ್ಟು ಬಿಡುವಂಥ ಶಕ್ತಿ ಅವನೆ ನರಸಿಂಹಾಗ್ನಿ ಅಂದರು. ಎಲ್ಲವನ್ನೂ ಸುಟ್ಟು ಬಿಡುವಂತಹ ಮಹಾನ್ ಶಕ್ತಿ ನರಸಿಂಹನದು. ಕೆಟ್ಟವರಿಗೆ ಅವನು ಭಯಂಕರ, ಸಜ್ಜನರಿಗೆ ಅವನು ಕರುಣಾ ಮೂರ್ತಿ. That is Narasimha.
ದೇವಸ್ಯ :- ದೇವ ಅಂದರೆ ವಾಮನ. ಯಾಕೆಂದರೆ 'ಬಲಿಯಲ್ಲಿ' ಹೋಗಿ ಮೂರು ಹೆಜ್ಜೆಯ ವ್ಯಾಪಾರ ಮಾಡಿ, 'ಬಲಿ'ಯನ್ನು ಯಾರು ಪಾತಾಳಕ್ಕೆ ತಳ್ಳಿದನೋ ಅವನೇ 'ದೇವಹ'. "ದಿವು ವ್ಯವಹಾರೆ" ಮೂರು ಹೆಜ್ಜೆಯನ್ನು ಕೇಳಿ 'ಬಲಿ' ಯನ್ನು ಸೋಲಿಸಿದವನು. 'ಬಲಿ' ಹೇಳ್ತಾನೇ " ಮಗು ನಿನಗೆ ಬುದ್ದಿಯಿಲ್ಲ. ಕೇವಲ ಮೂರು ಹೆಜ್ಜೆಯನ್ನಿಟ್ಟು ಕೊಂಡು ಏನು ಮಾಡುತ್ತಿಯಾ? ನನ್ನಲ್ಲಿ ಬೇಕಾದಷ್ಟಿದೆ. ಬೇಕಾದಷ್ಟು ಕೇಳು" ಆಗ ವಾಮನ ಹೇಳ್ತಾನೇ "ನೋಡು ಅಗತ್ಯಕ್ಕಿಂತ ಯಾರೂ ಬಯಸಬಾರದು. ನನಗೆ ಬೇಕಾಗಿರುವುದು ಅಷ್ಟೇ. ಅಷ್ಟು ಕೊಡು ಎಂದು ಹೇಳಿ ಬಲಿಯನ್ನು ಸೋಲಿಸಿದವ ದೇವ.
ಧೀಮಹಿ:- ಆರನೆ ರೂಪವೇ 'ಪರಶುರಾಮ'. ಧೀ ಅಂದರೆ ಅರಿವು, ಎಚ್ಚರ, ಪುಷ್ಟಿ, ಸಮೃದ್ದಿ. ಮಹಿ ಅಂದರೆ ಭೂಮಿ. ೨೧ ಬಾರಿ ಪ್ರಪಂಚ ಪರ್ಯಟನೆ ಮಾಡಿ ದುಷ್ಟರನ್ನು ಸಂಹಾರ ಮಾಡಿ ದುಷ್ಟರಿಗೆ ಯಾವತ್ತೂ ದೌಸ್ತ್ಯದಿಂದ ಮೆರೆದಾಡುವುದು ಸಾದ್ಯವಿಲ್ಲ, ಸಜ್ಜನಿಕೆ , ಧರ್ಮ,ಮಾತ್ರ ಯಾವತ್ತೂ ಗೆಲ್ಲುವುದು ಎಂದು ಭೂಮಿಗೆ ಎಚ್ಚರ ಕೊಟ್ಟವ ಪರಶುರಾಮ. ಆದ್ದರಿಂದ ಅವನು ಧೀಮಹಿ ಎಂಬ ಶಬ್ದದಿಂದ ವ್ಯಾಚ್ಯನಾಗಿದ್ದಾನೆ.
ಧಿಯಹ: - ಯ೦,ರಂ, ವ೦, ಳ೦,- 'ಯ೦' ಅಂದರೆ ಪ್ರಾಣ ದೇವರು. ವಾಯುಬೀಜ. ಅಂತಹ ವಾಯುಬೀಜವಾಚ್ಯನಾದ, 'ಯ'ಕಾರವಾಚ್ಯನಾದ ವಾಯುದೇವರಿಗೆ 'ರಂ' ಅಂದ್ರೆ ಜ್ಞಾನರೂಪದಿಂದ ಜ್ಞಾನವನ್ನು ಕರುಣಿಸಿದವ, ಪುಷ್ಟಿ ಕೊಟ್ಟವ. ಆದ್ದರಿಂದ ಅವನೆ 'ಧಿಯಹ', ಅವನೆ ರಾಮ.
ಯಹ:- ಯಹ ಅಂದ್ರೆ "ಯ ಗಥೋ" ಗತಿ ಅಥವಾ ಅವಗತಿ to go ಅಥವಾ to know ಸಂಸ್ಕೃತದಲ್ಲಿ ಯಾವುದು ಯಾವುದಕ್ಕೆ to go ಎಂಬ ಅರ್ಥವಿದೆಯೋ ಅದೆಲ್ಲಕ್ಕೂ to know ಎಂಬರ್ಥವಿದೆ. ಹೋಗುವುದು ಅಂದ್ರೆ ತಿಳಿಯುವುದು ಅಲ್ವಾ? ಹೋಗುತ್ತಾ ಹೋಗುತ್ತಾ ತಿಳಿಯುವುದು. ನಿಲ್ಲುವುದು ಅಂದರೆ ದಡ್ದನಾಗುವುದು. ಹರಿಯಯಬೇಕು, ನಿಂತಲ್ಲಿ ನಿಂತ ನೀರಾಗಬಾರದು. ಊರುರು ತಿರುಗಬೇಕು. ಆಗ ಜ್ಞಾನ ಬೆಳೆಯುತ್ತೆ. ಹೀಗೆ ಜಗತ್ತಿಗೆ ಜ್ಞಾನದ ಪ್ರವಾಹವನ್ನ, ಅರಿವನ್ನ ಕೊಟ್ಟವ ಕೃಷ್ಣ ರೂಪ. ಗೀತೆಯ ೧೫ನೇ ಅಧ್ಯಾಯದ ೨೦ ಶ್ಲೋಕಗಳು ಭಾರತದ ತತ್ವಜ್ಞಾನದ ಸಾರ ಸಂಗ್ರಹ. ಶಂಕರಾಚಾರ್ಯರು ೧೫ನೇ ಅಧ್ಯಾಯಕ್ಕೆ ವ್ಯಾಖ್ಯಾನ ಬರೆದಾಗ "ನ ಕೇವಲ೦ ಗೀತಾರ್ಥಹ , ಕಿಂತು ಸರ್ವೋಪಿ ಶಾಸ್ತ್ರಹ ಅತ್ರ ಪರಿಸಮಾಪ್ತಿ ಹೇ" – “ಇದು ಕೇವಲ ಗೀತೆಯ ಸಾರ ಅಲ್ಲ. 'ಕಿಂತು ಸರ್ವೋಪಿ ಶಾಸ್ತ್ರಹ' ಎಲ್ಲಾ ಶಾಸ್ತ್ರಗಳು (ವೇದಗಳು, ಪುರಾಣಗಳು, ಇತಿಹಾಸಗಳು) ಏನನ್ನು ಹೇಳುತ್ತವೆಯೋ ಅದೆಲ್ಲವೂ ಈ ೨೦ ಶ್ಲೊಕದಲ್ಲಿ ಮುಗಿದು ಹೋಯ್ತು” ಅಂತಾರೆ ಶಂಕರಾಚಾಯರು. ಭಾರತ ಒಂದು ಪಾರಿಜಾತ ವೃಕ್ಷವಾದರೇ ಆ ಪಾರಿಜಾತದ ಮಧುರಸವೇ ಈ ಗೀತೆ. ಇಡೀ ಗೀತೆಯಲ್ಲಿ ೧೫ನೇ ಅಧ್ಯಾಯ ಅನ್ನುವುದು ಸಮಸ್ತ ವೇದ ವಾನ್ಗ್ಮಯದ ಸಾರ. ಅದನ್ನ ಈ ಜಗತ್ತಿಗೆ ಕೊಟ್ಟವ ಕೃಷ್ಣ. ಆದ್ದರಿಂದ ಅವನನ್ನ 'ಯಹ' ಅಂದ್ರೂ.
ನಹ:- ಬುದ್ಧ. ನಹ ಅನ್ನುವುದು its a epithet of Budda. ಯಾಕೆ ಅಂದ್ರೆ 'ನಾ' 'ನ' ಎಲ್ಲವೂ ಶೂನ್ಯ, ನಹ ನಹ ಅಂದ್ರೆ ‘ಯಾವುದೂ ಇಲ್ಲ’ ಅಂದವ ಬುದ್ಧ. ನಿಜವಾಗಿಯೂ ಅವನು ಯಾವುದು ಇಲ್ಲ ಎಂದಲ್ಲ ಹೇಳಿದ್ದು, ನಮಗೆ ಅರ್ಥ ಆದದ್ದು ಹಾಗೆ ಅಷ್ಟೇ. ಸರ್ವಮ್ ಶೂನ್ಯಂ ಎಂದ ಬುದ್ಧ. ಶೂನ್ಯ ಎಂದರೇನು? "ತುಚ್ಛ್ಯೆನ ಭವಿತಂ" - ವೇದದಲ್ಲೂ ಈ ಮಾತು ಬರುತ್ತೆ. ಶೂನ್ಯ ಅಂದರೆ ಏನೂ ಇಲ್ಲ ಎಂದರ್ಥ ಅಲ್ಲ. ಈಗ ನಾವು 'ಸೊನ್ನೆ' ಅಂತೇವೆ ಸೊನ್ನೆಗೆ ಶೂನ್ಯ ಅಂತ ಮಾತ್ರ ಅರ್ಥವಲ್ಲ. ಸ್ವರ್ಣವೂ ಶೂನ್ಯವೇ. ಅದಕ್ಕೆ ಚಿನ್ನದ ಕೆಲಸಗಾರರನ್ನ ಸೊನ್ನೆಗಾರರು ಅಂತ ಕರೆಯುವುದು. ಹಾಗಾದರೆ ಸೊನ್ನೆ ಅಂದ್ರೆ ಅಪ್ಪಟ ಚಿನ್ನ ಅಂತ ಆಯಿತು ಅಲ್ವಾ? ಶೂನ್ಯವನ್ಣ ಸೊನ್ನೆ ಅಂತ ತಿಳಿದದ್ದು ನಮ್ಮ ನಿಮ್ಮ ತಪ್ಪು ಬುದ್ಧನದ್ದಲ್ಲ. ಅದು ಮಾತ್ರ ಅರ್ಥವಲ್ಲ 'ಶೂನ' ಅಂದರೆ -'ಶಂ' ಅಂದರೆ "ಶಂನೋ ಮಿತ್ರಸ್ಯ ವರುಣಹ" ಶಂ ಅಂದ್ರೆ ಆನಂದ, ಸುಖ, inner bless. ಶೂನ ಅಂದರೆ ಅಲ್ಪ ಸುಖಿಗಳು. ದುಖವನ್ನೇ ಸುಖವೆಂದು ಬ್ರಮಿಸುವವರು,ಅಂಥವರನ್ನ 'ಯಮಯತಿ' ನಿಯಂತ್ರಿಸುವವನು ಶೂನ್ಯ. ಹಾಗಾದರೆ ಭಗವಂತ ಇದ್ದೂ ಶೂನ್ಯನಾಗಬಹುದು. ಈ 'ಶೂನ್ಯವಾದ' ವನ್ನ ಪ್ರಶಾಂತ ವಿದ್ಯೆ ಅನ್ನುತ್ತಾರೆ. ಅದನ್ನು ಜಗತ್ತಿಗೆ ಕೊಟ್ಟವ ಬುದ್ಧ.
ಪ್ರಚೋದಯಾತ್: - ಧರ್ಮ ದಾರಿ ತಪ್ಪಿದಾಗ ಯಾರು ಧರ್ಮ ಪ್ರಚೋದನೆ ಮಾಡಲಿಕ್ಕೆ ಕುದುರೆಯನ್ನು ಪ್ರಚೋದನೆ ಮಾಡಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ಬರುತ್ತಾನೋ ಅವನೆ 'ಕಲ್ಕಿ'.
ಹೀಗೆ ಸಹಜವಾಗಿ ಏನೂ ಎಳೆಯದೆ ಜಗ್ಗದೆ ಭಗವಂತನ ಹತ್ತು ಅವತಾರಗಳನ್ನ ಹೇಳುತ್ತದೆ ಗಾಯ್‌ತ್ರಿ. ಅದು ಮಾತ್ರವಲ್ಲ, ಭಗವಂತನ ೨೪ ರೂಪಗಳನ್ನೂ ಗಾಯತ್ರಿ ಹೇಳುತ್ತೆ. ಭಗವಂತನನ್ನ ಪ್ರಪಂಚವನ್ಣ, ನಮ್ಮ ಮೂರು ಅವಸ್ಥೆಗಳನ್ನ, ಎಲ್ಲವನ್ನೂ ಹೇಳಿ ಇವೆಲ್ಲವನ್ನೂ ನಿಯಂತ್ರಿಸುವ ಪರಾಶಕ್ತಿಯ ಕಡೆಗೆ ನಮ್ಮನ್ನ ಕೊಂಡೊಯ್ಯುವ ಮಹಾಮಂತ್ರ ಗಾಯತ್ರಿ ಮಂತ್ರ. ಅದಕ್ಕಾಗಿಯೇ ಗಾಯತ್ರಿ ಮಂತ್ರಕ್ಕೆ ಸಾಟಿಯಾದ ಮಂತ್ರ ಬೇರೆ ಇಲ್ಲ. ಹಿಂದೆ ಬ್ರಹ್ಮಾಸ್ತ್ರ ಬಿಡಲಿಕ್ಕೆ ಹೇಳುತ್ತಿದ್ದ ಮಂತ್ರ ಗಾಯತ್ರಿ. ಬ್ರಹ್ಮ ಶಿರೋ ಅಸ್ತ್ರ ಗಾಯತ್ರಿ. ದಿವ್ಯವಾದ ಹೆಚ್ಚಿನ ಮಹಾ ಅಸ್ತ್ರಗಳಿಗೆ ಅವರು ಉಪಯೋಗಿಸುತ್ತಿದ್ದದ್ದು ಇದೆ ಗಾಯತ್ರಿ ಮಂತ್ರವನ್ನ. - ಇಂತಹ ಒಂದು ಸಂಪತ್ತು ಪ್ರಾಚೀನರು ನಮಗೆ ಕೊಟ್ಟು ಹೋಗಿದ್ದಾರೆ. ನಾವೂ ಮುಂದಿನ ತಲೆಮಾರಿಗೆ ಕೊಟ್ಟು ಹೋಗಬೇಕು. ಇಲ್ಲದೇ ಇದ್ದರೆ ನಾವು ಈ ಅಪೂರ್ವ ವಿದ್ಯೆಯನ್ನ , ಈ ಸಂಪತ್ತಿನ ಕೊಂಡಿಯನ್ನ ಕಳಚಿದ, ಈ ದೇಶಕ್ಕೆ ದ್ರೋಹ ಮಾಡಿದ, ಮುಂದಿನ ಪರಂಪರೆಗೆ ಈ ಸಂಪತನ್ನ ಕೊಡರೆ ಹೋದ ಪಾಪಿಗಳಾಗುತ್ತೇವೆ. ಆ ಎಚ್ಚರದಿಂದ ಈ ಸಂಪತನ್ನ ಉಳಿಸೋಣ, ಬೆಳೆಸೋಣ, ಮುಂದಿನ ತಲೆಮಾರಿಗೂ ಹಂಚೋಣ ಎಂದು ಪ್ರಾರ್ಥಿಸಿ - ಈ ಗಾಯತ್ರಿ ಚಿಂತನೆಯನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ.
ನಿಮಗೆಲ್ಲರಿಗೂ ಮಂಗಳವಾಗಲಿ
ಧನ್ಯವಾದಗಳು.
gayathri ammana ending point ondu odide
ಪ್ರತ್ಯುತ್ತರಅಳಿಸಿshree ram anjaneya saibaba ivara bagge baritira
nange ivaru anndre ista
ivara nenapilde nanu iralare