ತನ್ನ ಹೊಸ ಕಾರಿನ ನೋಟಕ್ಕೆ, ಅದರ ವೇಗಕ್ಕೆ ತಾನೆ ಮರುಳಾಗುತ್ತಾ, ಆ ಯುವಕ ಇನ್ನಿಲ್ಲದ ವೇಗದೊಂದಿಗೆ ಇಳುಕಲು ಓಣಿಯನ್ನು ಪ್ರವೇಶಿಸಿದ. ಎದುರುಗದೆ ಪಾರ್ಕ್ ಮಾಡಿದ್ದ ಕಾರುಗಳ ಸಂದಿ ಇಂದ ಯಾರಾದರೂ ಹುಡುಗರು ದಿಢೀರನೆ ಕಾರಿಗೆ ಅಡ್ಡ ಬಂದಾರು ಎಂಬ ಅಳುಕಿನಿಂದಲೇ ಆಕ್ಸಿಲಿಟರ್ ಒತ್ತಿದವನ ಕಣ್ಣಿಗೆ ಯಾರೋ ಕಂಡಂತಾಯಿತು.ಆದರೆ ಕಾರು ಮುಂದೆ ಬಂದಂತೆ ಯಾರು ಕಣ್ಣಿಗೆ ಬೀಳಲಿಲ್ಲ ಬದಲಾಗಿ ಇಟ್ಟಿಗೆಯೊಂದು ರಭಸದಿಂದ ಕಾರಿನ ಎಡ ಬಾಗಿಲಿಗೆ ಅಪ್ಪಳಿಸಿತು. ಸಿಟ್ಟಿಗೆದ್ದ ಯುವಕ ಕಾರು ನಿಲ್ಲಿಸಿದವನೆ ಕೆಳಗಿಳಿದ. ಇಟ್ಟಿಗೆ ಏಟು ತಿಂದ ಕಾರಿನ ಭಾಗ ಜಜ್ಜಿ ಹೋಗಿತ್ತು. ರೇಗಿದ ಯುವಕ ಅತ್ತಿತ್ತ ನೋಡಿದಾಗ ಹುಡುಗನೊಬ್ಬ ಅವನ ಕಣ್ಣಿಗೆ ಬಿದ್ದ. ಅವನ ಕಾಲರ್ ಹಿಡಿದೆಳೆದ ಯುವಕ " ಏಕೆ ಇಟ್ಟಿಗೆ ಎಸೆದೆ ಹೊಸ ಕಾರಿದು,ರೇಪೇರಿಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ" ಎಂದು ಅಬ್ಬರಿಸಿದ ಹುಡುಗನ ಮುಖದಲ್ಲಿ ಅಪರಾಧಿ ಭಾವ. " ಸಾರೀ ಸರ್ ದಯವಿಟ್ಟು ಕ್ಷಮಿಸಿ, ಆದರೆ ನನಗೆ ಬೇರೆ ದಾರಿಯೇ ಇರಲಿಲ್ಲ. ಇಟ್ಟಿಗೆ ಎಸೆಯದಿದ್ದರೆ ನೀವು ಕೂಡ ಕಾರ್ ನಿಲ್ಲಿಸುತಿರಲಿಲ್ಲ. ಅಲ್ಲಿ ಬಿದ್ದಿರುವಾತ ನನ್ನ ಅಣ್ಣ, ತುಂಬಾ ಭಾರ, ನಾನೊಬ್ಬನೇ ಅವನನ್ನು ಎತ್ತಲಾ ರೇ...... ಅದಕ್ಕೆ ಅಂದ. ಅವನ ಕಣ್ಣುಗಳು ಹನಿಗೂಡಿದ್ದವು.
ಹುಡುಗ ತೋರಿಸಿದ ಕಡೆ ನೋಡಿದ ಯುವಕನಿಗೆ ಗಾಲೀ ಕುರ್ಚಿಯಿಂದ ಉರುಳಿ ಬಿದ್ದಿರುವ ಅಂಗವಿಕಲ ಹುಡುಗ ಕಾಣಿಸಿದ, ಸರ ಸರ ನೇ ಅತ್ತ ನಡೆದ ಯುವಕ ಹುಡುಗನನ್ನು ಎತ್ತಿ ಗಾಲಿ ಕುರ್ಚಿ ಮೇಲೆ ಕೂರಿಸಿದ. ತನ್ನ ಬಿಳಿ ಕರ್ಚೀಫೀನಿಂದ ತರಚಿದ ಗಾಯದ ಮೇಲಿದ್ದ ಮಣ್ಣನ್ನು ಒರಸಿದ. ಏಕೋ ಅವನಿಗೆ ನಾಚಿಕೆಯಾಗತೊಡಗಿತ್ತು. "ಥ್ಯಾಂಕ್ ಯೂ ಸರ್" ಎಂದ ಹುಡುಗ ಅಣ್ಣ ಕೂತಿದ್ದ ಗಾಲಿ ಕುರ್ಚಿ ತಳ್ಳಿಕೊಂಡು ಮನೆಯಾತ್ತ ಹೊರಟ.ಯುವಕನಿಗೆ ಏನೂ ತೋಚಲ್ಲಿಲ್ಲ. ಆತ ಕೊಂಚ ಹೊತ್ತು ಆ ದೃಶ್ಯವನ್ನೇ ನೋಡುತ್ತಲೇ ನಿಂತ. ನಂತರ ನಿಧಾನವಾಗಿ ತನ್ನ ಕಾರಿನತ್ತ ಬಂದ. ಇಟ್ಟಿಗೆಯ ಏಟು ಕಾರಿಗೆ ಉಂಟುಮಾಡಿದ ಕಲೆ ಎದ್ದು ಕಾಣುತಿತ್ತು. ಆದರೆ ಯುವಕ ಯಾವತ್ತೂ ಆ ಕಲೆಯನ್ನು ರೇಪೇರಿ ಮಾಡಿಸಲು ಹೋಗಲಿಲ್ಲ, ಅದು ಒಂದು ಜೀವನದ ಸಂದೇಶವಾಗಿ ಇಲ್ಲೇ ಇರಲಿ ಎಂದು ಅಶಿಷಿದ
." ದೇವರು ಯಾವಾಗಲು ನಮ್ಮಲ್ಲಿ ಪಿಸುಮಾತಲ್ಳಿ ಮಾತಾಡೂತಿರುತ್ತಾನೆ. ಆದರೆ ನಮಗೆ ಅದನ್ನು ಕೇಳಿಸಿ ಕೊಳ್ಳುವ ವ್ಯವದಾನವಿಲ್ಲ. ಯಾರಾದರೂ ನಮ್ಮ ಗಮನ ಸೆಲೆಯ ಬೇಕೆಂದರೆ ಇಟ್ಟಿಗೆ ತೂರಿಯೇ ನಿಲ್ಲಿಸುವಷ್ಟು ವೇಗವಾಗಿ ನಾವು ಹೊರಟಿದ್ದೇವೆ ಅದು ತಪ್ಪು"
ಎಂಬ ಸಂದೇಶವನ್ನು ಇದು ನೆನಪಿಸಲಿ ಎಂದು ಬಯಸಿದ.
ಎರಡನೆ ಬಾರಿ ಇಟ್ಟಿಗೆ ಏಟು ತಿನ್ನುವ ಅವಕಾಶ ಅವನಿಗೆ ಬರಲೇ ಇಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ