ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ಡಿಸೆಂಬರ್ 19, 2010

ಗಾಯತ್ರಿಚಿಂತನ ಭಾಗ 4

'' ಅಂದರೆ - 'ಉತ್ಕರ್ಷನ' ಅಂದ್ರೆ ಒಳಕ್ಕೆ ಎಳೆದುಕೊಳ್ಳುವುದು. ಎಲ್ಲ ಇಂದ್ರಿಯಗಳನ್ನು ಒಳಕ್ಕೆ ಎಳೆದುಕೊಂಡು ಒಳಗಿನ cinema ಪ್ರಾರಂಭ ವಾಗುತ್ತೆ. ಅದೇ ಕನಸು. ಅಂದ್ರೆ ಹೊರಗಿನ ಇಂದ್ರಿಯಗಳ switch off , ಒಳಗಿನ ಇಂದ್ರಿಯಗಳ switch on.  ಅಂದ್ರೆ ಕನಸಿನಲ್ಲಿ.  ಅಲ್ಲಿಯೂ ಎಲ್ಲವೂ ಇದೆ, ನಾದವಿದೆ, ರೂಪವಿದೆ, ಎಲ್ಲವೂ ಇದೆ ಆದ್ರೆ ಎಚ್ಚರವಿಲ್ಲ ಅಷ್ಟೇ - ಅದನ್ನು ನಿಯಂತ್ರಿಸುವವನಿಗೆ ತೈಜಸ ಅಂದ್ರು.  ಅಂದ್ರೆ ನೀನು ನೋಡುವ ಎಲ್ಲಾ ಕನಸುಗಳೂ ನೀನು ಸೃಷ್ಟಿ ಮಾಡಿದ್ದಲ್ಲ, ನಿನಗೆ ಬೇಕು ಎಂದಾಗ ಬರಲಾರದು, ನಿನಗೆ ಬೇಕಾದ್ದೇ ಬರಲಾರದು,  ನೀನು ಏನನ್ನು ನೋಡಬಯಸುವಿಯೋ ಅದು ಬಾರದು. ಅಂದ್ರೆ ನೀನು ಬಯಸಿ ಕಂಡದ್ದಲ್ಲ,  ಆದರೆ ಕಾಣುತ್ತೆ. ಅದನ್ನು ತೋರಿಸಿದವನೆ ''ಕಾರ ವ್ಯಾಚ್ಯನಾದ ತೈಜಸ .
                ಈಗ  ಇನ್ನೂ ಮುಂದಕ್ಕೆ ಹೋಗೋಣ ....... ನಿದ್ರೆ ಬಂತು. ಅದೇ '' . ‘' ಅಂದ್ರೆ 'ಮಾನ'.  ಮರ್ಜರ್. (ಅಂತರ್ಗತಿ) . ನಿದ್ದೆ ಎಂಬುವುದು ಮೋಕ್ಷದ advance stage. ಅಂದರೆ  ನಿದ್ದೆಯಲ್ಲಿಯೂ ಜೀವ ಭಗವಂತನನ್ನ ಸೇರುತ್ತಾನೆ .ಮೋಕ್ಷದಲ್ಲಿಯೂ ಜೀವ ಭಗವಂತನನ್ನ ಸೇರುತ್ತಾನೆ.  ಆದರೆ ಮೋಕ್ಷದಲ್ಲಿ ಭಗವಂತನ ಜತೆಗೆ ಇದ್ದೇನೆ ಎನ್ನುವ ಅರಿವಿದೆ, ಅದು ನಿದ್ದೆಯಲ್ಲಿಲ್ಲ. ಇದು ಅರಿವಿಲ್ಲದ ಭವಂತನ ಸಾಮೀಪ್ಯ. ಹಾಗಾದರೆ ನಿದ್ದೆ ಅಂದರೆ ಏನು? ಎಂದು ನಾವು ತಿಳಿದುಕೋಬೇಕು. - ನಾವು ತಿಳಿದುಕೊಂಡಿದ್ದೇವೆ..... ನಿದ್ದೆ ಅಂದರೆ  ಏನೂ ಗೊತ್ತಿಲ್ಲದಿರುವುದು ಎಂದು.  ಅಲ್ಲ , ನಿದ್ದೆಯಲ್ಲಿಯೂ ಕೆಲವೊಂದು ಸಂಗತಿಗಳು ನಮಗೆ ಗೊತ್ತಿವೆ. ಒಮ್ಮೆ ಯೋಚಿಸಿ ನೋಡಿ, ಬೆಳಗಾತ ಎದ್ದಾಗ ಯಾರೋ ಕೇಳ್ತಾರೆ ' ನಿಮಗೆ ಗೊತ್ತಾ ಅಲ್ಲೊಂದು ಅವಘಡ  ಸಂಭವಿಸಿತು ನಿನ್ನೆ ರಾತ್ರಿ'  ಅಂದಾಗ ನೀವು ಹೇಳ್ತೀರಿ  ಅಯ್ಯೋ ನನಗೊಂದೊ ಗೊತ್ತಿಲ್ಲ , ನೆನ್ನೆ ರಾತ್ರಿ ಮಲಗಿದವನಿಗೆ ಒಳ್ಳೇ ನಿದ್ದೆರೀ, ಆನಂದವಾದ ನಿದ್ದೆ ಅಂತೀರೀ, ಹಾಗಾದರೆ  'ಆನಂದವಾದ' ನಿದ್ದೆ ಬಂತು ಎಂದು ಗೊತ್ತುಂಟು ಎಂದಾಯ್ತು. ಅದಕ್ಕಿಂತಲೂ ಮುಖ್ಯವಾಗಿ ನಮಗೆ ಎಚ್ಚರದಲ್ಲಿ ಗೊತ್ತಿಲ್ಲದ್ದು ನಿದ್ದೆಯಲ್ಲಿ ಗೊತ್ತಾಯಿತು ಅದುವೇ "ಏನೂ ಗೊತ್ತಿಲ್ಲ" ಎಂಬುದು, He knows that he knows not, ಎಚ್ಚರದಲ್ಲಿ ಈ ಅರಿವು ಬಂದರೆ ಏನು ಕ್ಷೇಮ ಅಲ್ಲವೇ?  ನಿಜವಾಗಿಯೂ ನಮಗೆ ಏನೂ ಗೊತ್ತಿಲ್ಲ, ಆದರೆ ಎಲ್ಲ ಗೊತ್ತಿದೆ ಅಂತ ಹಾರಾಡುತ್ತೇವೆ. ಗೀತೆಯಲ್ಲಿ ಕೃಷ್ಣ ಅದನ್ನೇ ಹೇಳಿದ್ದು "'ಪ್ರಜ್ಞಾ ವಾದಾಂಶ ಭಾಷಾಷೆ...." ( ಎಲ್ಲ ಗೊತ್ತಿದ್ದವರಂತೆ ಮಾತಾಡುತ್ತಿರುವೆ) .  ಅದು ಮಾತ್ರವಲ್ಲ He knows the continues the time. 'ರಾತ್ರಿ ಮಲಗಿದವನಿಗೆ ಬೆಳಗಿನ ತನಕ' ಎಂಬುದು ಗೊತ್ತಿದೆ.  ಅಂದ್ರೆ ಒಳಗಿನಿಂದ the time is counted, ಅದು ಮಾತ್ರವಲ್ಲ  He knows the Self, 'ನಾನು' ಅನ್ನುವುದು ಗೊತ್ತಿದೆ.  ನಿನ್ನೆ ರಾತ್ರಿ ನಿದ್ದೆ ಮಾಡಿದ್ದು ಯಾರು? ಬೆಳಗಾತ ಎದ್ದದ್ದು ಯಾರು? ಎಂಬ ಸಂಶಯ ಬರೋಲ್ಲ ಯಾರಿಗೂ.  ಅದಲ್ಲದೇ ನಾನು ಮಲ್ಕೊಂಡು ಎಷ್ಟು ದಿವಸ ಆಯಿತೂರೀ ಎಂದು ಯಾರೂ ಕೇಳುವುದಿಲ್ಲ.  so, ಕಾಲ ಗೊತ್ತಿದೆ, ನಾನು ಅನ್ನುವುದು ಗೊತ್ತಿದೆ, ಆನಂದದ ಅರಿವಿದೆ. ಏನೂ ಗೊತ್ತಿಲ್ಲ ಎನ್ನುವುದು ಗೊತ್ತಿದೆ. ಆದರೆ........... ನಿದ್ದೆಯಲ್ಲಿ ಕಾಲ ಗೊತ್ತಿದೆ, ಗೊತ್ತಿದೆ ಅನ್ನುವುದು ಗೊತ್ತಿಲ್ಲ ಎಚ್ಚರವಾದ ಮೇಲೆ ಗೊತ್ತಾಗುವುದು. ನಿದ್ದೆಯಲ್ಲಿ ಆನಂದವಿದೆ ಅನ್ನುವುದು ಗೊತ್ತಿದೆ, ಗೊತ್ತಿದೆ ಅನ್ನುವುದು ಗೊತ್ತಿಲ್ಲ ಎಚ್ಚರವಾದ ಮೇಲೆ ಗೊತ್ತಾಗುವುದು. ನಿದ್ದೆಯಲ್ಲಿ ನಾನು ಅನ್ನುವುದು ಗೊತ್ತಿದೆ , ಗೊತ್ತಿದೆ ಅನ್ನುವುದು ಗೊತ್ತಿಲ್ಲ ಎಚ್ಚರವಾದ ಮೇಲೆ ಗೊತ್ತಾಗುವುದು. Its all very interesting.
ನಿದ್ದೆಯಲ್ಲಿ ಹಾಗಾದರೆ ಆನಂದ ಯಾಕೆ ಬಂತು? ಮನುಷ್ಯನಿಗೆ ದುಖವಿಲ್ಲದ ಆನಂದ ಅಂತ ಇರುವುದು ನಿದ್ದೆಯಲ್ಲಿ ಮಾತ್ರ. ಕನಸಿನಲ್ಲಿಯೂ ಇಲ್ಲ. ಕನಸಿನಲ್ಲಿ ಕೆಟ್ಟ ಕನಸು, ಭಯಾನಕ ಕನಸು ಎಲ್ಲಾ ಇರುತ್ತದೆ. ಆದರೆ ನಿದ್ದೆಯಲ್ಲಿ ದುಖ ಎನ್ನುವುದು ಯಾರಿಗೂ ಆಗೋದಿಲ್ಲ. ರೋಗಿಗೆ ಕೂಡ ರೋಗದ ವೇದನೆ ನಿದ್ದೆಯಲ್ಲಿಲ್ಲ. ದುಖವಾಗಿ ನಿದ್ದೆ ಬಂತು ಎಂದು ಯಾರೂ ಹೇಳೋಲ್ಲ ಸರಿ ತಾನೆ?
 ನಿದ್ದೆ ಅನ್ನುವುದೇ ಒಂದು experience of bless,  ಅದಕ್ಕೆ ಶಾಸ್ತ್ರಕಾರರು ಹೇಳ್ತಾರೆ 'ಅಪ್ಪಾ ನಿದ್ದೆಯಲ್ಲಿ ದುಖವಿಲ್ಲದ ಯಾವುದೋ ಒಂದು ಇದೆ ಎಂದು ಗೊತ್ತಾಯಿತಲ್ಲ, ಅದು ಎಚ್ಚರದಲ್ಲಿಯೂ permanent ಆಗಿ ಬೇಕು ಅನ್ನುವುದೇ ಮೋಕ್ಷದ ಬಯಕೆ. ಹಾಗಾದರೆ ನಿದ್ದೆಯಲ್ಲಿ ಯಾಕೆ ದುಖ ಆಗಲಿಲ್ಲ. ಯಾಕೆಂದರೆ ನಿದ್ದೆಯಲ್ಲಿ ನೀನು ಭಗವಂತನ ಜೊತೆಗೆ ಇದ್ದೇ. ಭಗವಂತನ ಜೊತೆಗೆ ಇದ್ದೇ ಅನ್ನುವುದು ಗೊತ್ತಿಲ್ಲದೇ ಪುನಃ  ಎಚ್ಚರವಾದಾಗ  ಈ ದುಖಕ್ಕೆ ಒಳಗಾದೆ.  ಅಂದರೆ ಭಗವಂತನ ಜೊತೆಗೆ ಇದ್ದು ಬಿಡುವುದು ಆನಂದಮಯ ಸ್ಥಿತಿ.  ಅದಕ್ಕೆ ಭಗವಂತನ ತಿಳಿದುಕೋ, ಇದೆಲ್ಲ '' ದಲ್ಲಿ ತಿಳಿದುಕೊಳ್ಳುವಂತಹುದು. - ಅದು ಮಾತ್ರವಲ್ಲ ಎಚ್ಚರವಾದಾಗ ದುಖವಾಗಲಿಕ್ಕೆ ಇನ್ನೊಂದು ಬಹಳ ಮುಖ್ಯ ಕಾರಣವೆಂದರೆ ಎಚ್ಚರದಲ್ಲಿ 'ನಾನು' ಎಂಬುದಿದೆ, ನಿದ್ದೆಯಲ್ಲೂ ಇದೆ, ಆದರೆ  ನಿದ್ದೆಯಲ್ಲಿ 'ನಾನು' ಎಂಬುದಕ್ಕೆ ವಿಭಕ್ತೀಯೇ ಇಲ್ಲ. ಕೇವಲ 'ನಾನು'. 'ನನಗೆ ಇಲ್ಲ, ನನ್ನಿಂದ ಇಲ್ಲ, ನನ್ನದು ಇಲ್ಲ, ಇದು ಯಾವುದೂ ಇಲ್ಲ. ಬರೀ ' ನಾನು'. ಆದ್ರೆ ಎಚ್ಚರವಾದ ಕೂಡಲೇ ಎಲ್ಲ ಶುರುವಾಗುತ್ತೆ.  ನಾನು ನನ್ನದು ನನ್ನಿಂದ ಬರೀ ಹಾರಾಟ. ಇದನ್ನೇ ಭಗವಾನ್ ಬುದ್ಧ ಹೇಳಿದ್ದು " when nannadu is not there sorrow is not there” ಆದ್ದರಿಂದ  pure ನಾನು is pure bless. ಆದ್ದರಿಂದ ಈ ದುಖಕ್ಕೆ ಕಾರಣವಾದ  ಅಹಂಕಾರ ಮಾಮಕಾರವನ್ನು ಬಿಡು pure bless ನಿನಗೆ ಸಿಗುತ್ತೆ.  ಇದುವೇ ಓಂಕಾರದಲ್ಲಿ ಭಗವಂತನ ಅನುಸಂಧಾನ.  ಇದೇ ಓಂಕಾರ ಮುಂದಕ್ಕೆ ಬೆಳೆದು ಮೂರು ಅಕ್ಷರವಿದ್ದದ್ದು ಮೂರು ಶಬ್ದಗಳಾದವು.  ಅದೇ ಗಾಯತ್ರಿಯ ಎರಡನೆ ಮಜಲು.  ಭೂ, ಭುವ, ಸ್ವಹ’.
ಗಾಯತ್ರಿಚಿಂತನ  ಮುಂದುವರಿಯುತ್ತದೆ.............

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ