ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 21, 2010

‘ಮಹಾಭಾರತ’ ಮತ್ತು ‘ಹದಿನೆಂಟು’ (Numerology) ಭಾಗ ೨

                          ಮಹಾಭಾರತದಲ್ಲಿ ಹದಿನೆಂಟು ಪರ್ವಗಳು, ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡದ್ದು ಹದಿನೆಂಟು ಆಕ್ಷೋಹಿನಿ ಸೇನೆ, ಮಾಹಾಭಾರತ ಯುದ್ಧ ನಡೆದದ್ದು ಹದಿನೆಂಟು ದಿವಸ, ಮಹಾಭಾರತದ ಸಾರಭೂತವಾದ ಭಗವದ್ಗೀತೆಯಲ್ಲಿರುವುದು ಹದಿನೆಂಟು ಅಧ್ಯಾಯ, ಹದಿನೆಂಟು ಪುರಾಣಗಳು, ಹಂಸಗಾಯತ್ರಿಯಲ್ಲಿ ಹದಿನೆಂಟು ಶಬ್ಧಗಳು, ಯಜುರ್ವೇದ ಪುರುಷಸೂಕ್ತದಲ್ಲಿ ಹದಿನೆಂಟು ಮಂತ್ರಗಳು, ಈಶಾವಾಸ್ಯ ಉಪನಿಷತ್ತಿನಲ್ಲಿ ಹದಿನೆಂಟು ಮಂತ್ರಗಳು, ಹದಿನೆಂಟು ಅಷ್ಟಾದಶ ಸ್ಮೃತಿಗಳು, ಹದಿನೆಂಟು ಅಷ್ಟಾದಶ ಪುರಾಣಗಳು, ಪುರಾಣ ಶ್ರೇಷ್ಟವಾದ ಭಾಗವತದಲ್ಲಿ ಹದಿನೆಂಟು ಸಾವಿರ ಶ್ಲೋಕಗಳು,- ಅಂದರೆ ಹದಿನೆಂಟು ಎಂಬುದು its not a coinsidel.  ಇದು ಬುದ್ದಿಪೂರ್ವಕವಾಗಿ ಮಾಡಿದ್ದು ಭಗವಂತ. that means ‘18’ has a spritual meaning.ಅದು ಯಾವುದು ಅಂತ ತಿಳಿಸುವುದೇ ಮಹಾಭಾರತ. ಏಳು ಮತ್ತು ಹದಿನೆಂಟು ಮಹಾಭಾರತದ ಸಂಖ್ಯೆ. ಈ ಏಳು ಏನು ಅಂದ್ರ್, ನಾವು ಮಹಾಭಾರತದಿಂದ ಕಲಿಯಬೇಕಾದ ಮಾನವೀಯ ಮೌಲ್ಯಗಳನ್ನು ನಮಗೆ ಪ್ರತಿನಿಧಿಸತಕ್ಕಂತಹ ಪಾತ್ರಗಳು charactors ಏಳು. ಪಂಚಪಾಂಡವರು , ದ್ರೌಪದಿ ಮತ್ತು ಕೃಷ್ಣ. ಇವರು ಪ್ರತಿನಿಧಿಸವ ಮೌಲ್ಯಗಳು ಹದಿನೆಂಟು. ಅದೇ ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು, ಅದೇ 'ಮನು'.  ಅದು ಯಾವುದೆಲ್ಲ ನೋಡೋಣ..
                   ಧರ್ಮರಾಜ 'ಧರ್ಮದ' ಪ್ರತಿನಿಧಿ. ನಮ್ಮ ಜೀವನದಲ್ಲಿ ಧರ್ಮವನ್ನ ಹೇಗೆ ರೂಡಿಸಿಕೊಳ್ಳಬೇಕು, ಅಳವಡಿಸಿಕೊಳ್ಳಬೇಕು? ಎಂಬುದನ್ನ ತಿಳಿಸಿಕೊಡುತ್ತದೆ 'ಧರ್ಮರಾಜ' ಎಂಬ charactor. ಭೀಮಸೇನ ಹತ್ತು  ಜೀವನ ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. "ಭಕ್ತಿಹಿ, ಜ್ಞಾನ೦ಚ, ವೈರಾಗ್ಯಂ, ಪ್ರಜ್ಞಾ, ಮೇಧಾ, ಧೃತಿಹಿ, ಸ್ಥಿಥಿಹಿ, ಯೋಗಹ, ಪ್ರಾಣಾಹ, ಬಲಂಚ" . ಅಂದರೆ ಈ ಹತ್ತು ಮೌಲ್ಯಗಳು ಲೌಕಿಕವಾಗಿಯೂ ಬೇಕು, ಆಧ್ಯಾತ್ಮಿಕವಾಗಿಯೂ ಬೇಕು. ಹಿಂದಿನ ಕಾಲದಲ್ಲಿ ಈ 'ಜ್ಞಾನ ಭಕ್ತಿ ವೈರಾಗ್ಯಕ್ಕೆ' ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು ಪ್ರ್ರಚೀನರು. ಯಾವುದಾದರೊಂದು ಹೋಮ ಹವನ ಮಾಡುವಾಗ ಸಂಕಲ್ಪದಲ್ಲಿ  ಜ್ಞಾನ ಭಕ್ತಿ ವೈರಾಗ್ಯ ಸಿದ್ದರ್ತ್ಹ್ಯಂ ಅಂತ ಸೇರಿಸುತ್ತಿದ್ದರು. ಅಂದರೆ ಜೀವನದಲ್ಲಿ ಈ ಮೂರನ್ನು ಪಡೆಯಲೇ ಬೇಕೆಂದು  ಬಹಳ ಆಸೆ ಪಡುತ್ತಿದ್ದರು ಪ್ರಾಚೀನರು. ಇದಾದ ಮೇಲೆ ನಾಲ್ಕನೇ ಗುಣ 'ಪ್ರಜ್ಞಾ'. ಪ್ರಜ್ಞೆ ಅಂದರೆ ಯಾವ ಸಂಧರ್ಭದಲ್ಲಿ ಹೇಗೆ ಸ್ಪಂದಿಸಬೇಕು ಅನ್ನುವ ವಿವೇಕ. ಜ್ಞಾನವಿದ್ದವರಿಗೆಲ್ಲ ಪ್ರಜ್ಞೆ ಇರಬೇಕಂತಿಲ್ಲ. ಕೆಲವರು bookish knowledge.ಬರೀ ಪುಸ್ತಕದ ಬದನೇಕಾಯಿ. ಅಂಥವರಿಗೆ ಜ್ಞಾನವಿರುತ್ತದೆ ಪ್ರಜ್ಞೆ ಇರುವುದಿಲ್ಲ. it is a different qualitiy. ಪ್ರಜ್ಞೆ ಗೆ ಕೋಶಕವಾಗಿ 'ಮೇಧಾ' ಇರಬೇಕು, ಮೇಧಾ ಅಂದ್ರೆ memory, ಸ್ಮರಣ ಶಕ್ತಿ. ನಾವು ಯಾವುದಾದರೊಂದು ಗ್ರಂಥವನ್ನು ಓದಿದಾಗ ಅದನ್ನ ನಾವು 'ಆಥ್ಮಸಾಥ್' ಮಾಡುವುದು ಅಂದರೇನು? ಅದನ್ನ ನೆನಪಿಟ್ಟು ಕೊಳ್ಳುವುದು. ಅಂದರೆ ಪುಸ್ತಕದಲ್ಲಿದ್ದದ್ದು ನಮ್ಮ ಮಸ್ತಕಕ್ಕೆ ಬಂದು ಸೇರಿಕೊಂಡಾಗಲೇ ಅದು ನಮ್ಮದಾಯಿತು. ಯಾವತ್ತು ನಾವು ಬರೆಯಲಿಕ್ಕೆ ಪ್ರಾರಂಬಿಸಿದೇವೆಯೋ ಅಂದಿನಿಂದ ನಮ್ಮ್ ಅಸ್ಮರಣ ಶಕ್ತಿ ಕಡಿಮೆ ಯಾಯ್ತು. ಅದನ್ನ ನೆನಪಿಡುವ ಶಕ್ತೀಯೇ ಮೇಧಾ. ಪುಸ್ಥಕದಲ್ಲಿದ್ದದು ನಿನ್ನದಲ್ಲ, ನೀನು ಏನನ್ನ ನೆನಪಿಟ್ಟುಕೊಂಡಿದ್ದಿಯಾ ಅದು ಮಾತ್ರ ನಿನ್ನದು. ಇದು ಜೀವನದಲ್ಲಿ ಇರಬೇಕಾದಂತಹ  ಮುಖ್ಯ ಸಂಗತಿ. ಹಿಂದಿನ ಕಾಲದಲ್ಲಿ ಯಾರೂ ಗ್ರಂಥ ಬರೆಯುತ್ತಿರಲಿಲ್ಲ. only mental composition ಶ್ರುತಿ ಮತ್ತು ಸ್ಮೃತಿ,ಕೇಳುವುದು ಕೇಳಿದ್ದನ್ನ ನೆನಪಿಟ್ಟುಕೊಳ್ಳುವುದು. ಇವೆರಡರಲ್ಲಿಯೇ ನಡೆಯುತ್ತಿತ್ತು ಜ್ಞಾನ ಪರಂಪರೆ. ಯಾವತ್ತು ನಾವು ಬರೆಯಲಿಕ್ಕೆ ಪ್ರಾರಂಬಿಸಿದೇವೆಯೋ ಅಂದಿನಿಂದ ನಮ್ಮ ಸ್ಮರಣ ಶಕ್ತಿ ಕಡಿಮೆ ಯಾಯ್ತು. ಆದ್ದರಿಂದ ಮೊದಲು ಮೇಧಾ ಶಕ್ತಿಯನ್ ಬೆಳೆಸಿಕೊ. ನಂತರ ಧೃತಿಹಿ, ಸ್ಥಿಥಿಹಿ - ಧೃತಿ ಅಂದರೆ confidence. ಸ್ಥಿಥಿಹಿ ಅಂದರೆ ಸ್ಥಿರತೆ. ಮನುಷ್ಯನಿಗೆ ಜೀವನದಲ್ಲಿ ಏನಾದರೂ achive ಮಾಡಬೇಕಾದರೆ ಇದು ಎರಡು ಇರಲೇಬೇಕು ಅಂತಾರೆ ಪ್ರಾಚೀನರು. confidence ಇಲ್ಲದಿದ್ದರೆ ಯಾವುದೂ ಮಾಡಲಿಕ್ಕೆ ಆಗೋದಿಲ್ಲ, ಯಾರಿಗೆ ಸ್ಥಿರತೆ ಇಲ್ಲವೋ ಅವರಿಗೂ ಏನನ್ನು ಸಾದಿಸಲಿಕ್ಕೆ ಬರೋಲ್ಲ,. ಇಂದು ಹೆಚ್ಚಿನವರು ತಮ್ಮ ತಲೆಯಿಂದ ಯೋಚಿಸುವುದೇ ಇಲ್ಲ. ಯಾರ್‍ಯಾರ ತಲೆಯಿಂದಲೇ ಯೋಚಿಸುವುದು. ಯಾರದ್ದೋ ಮಾತು ಕೇಳುವುದು ಅದು ಹೌದು ಅಂತಾಗುವುದು,  ಮರುದಿನ ಮತ್ಯಾರದ್ದೋ ಮಾತು ಕೇಳುವುದು ಆವಾಗ ಅದು ಹೌದು ಅಂತಾಗುವುದು. ಯಾರು ಏನು ಹೇಳಿದರೂ ಅದೇ ಸರಿ ಅಂತ ಅನಿಸುವುದು. ಅಂದರೆ ಸ್ವಂತ  ತಲೆಯನ್ನು ನಾವು ಬಳಸುವುದೇ ಮರೆತ್ಟಿದ್ದೇವೆ. ಸ್ಥಿಥಿಹಿ ಅಂದರೆ - ಎಲ್ಲವನ್ನೂ ಕೇಳು, ಅದನ್ನ ಸರಿದೂಗಿಸಿ ಯಾವುದು ಸರಿ ಯಾವುದು ತಪ್ಪುಅಂತ ತೀರ್ಮಾನಿಸಿ ಜೀವನದ ದಾರಿಯಲ್ಲಿ ಮುನ್ನಡೆ, ಅಂತ ಹೇಳುತ್ತಾನೆ ಭೀಮ. 
              ಆಮೇಲೆ 'ಯೋಗಹ,ಪ್ರಾಣಾಹ,ಬಲಮ್'.  ಯೋಗ೦ ಅಂದ್ರೆ  ಕೃಷ್ಣ ಗೀತೆಯಲ್ಲಿ ಹೇಳ್ತಾನೇ " ಸಮತ್ವಂ ಯೋಗ ಮುಚ್ಯತೆ"  ಜೀವನದಲ್ಲಿ ಸುಖ ಬರುತ್ತೆ, ದುಖ ಬರುತ್ತೆ. ಸೋಲು ಬರತ್ತೆ, ಗೆಲುವು ಬರತ್ತೆ, ಲಾಭ ಬರತ್ತೆ, ನಷ್ಟ ಬರತ್ತೆ,  ಕೇವಲ ಒಂದು ಮಾತ್ರ ಯಾರ ಜೀವನದಲ್ಲಿಯೂ ಇಲ್ಲ. ಇದು ಎರಡಾಗಿಯೇ ಇರುವುದು. ಒಂದಿದ್ದದ್ದರೆ ಇನ್ನೊನ್ದಿದೆ. ಅದು ಅನಿವಾರ್ಯ ಅಂತ ತಿಳಿದು ಎರಡನ್ನೂ ಸಮಾತೂಕವಾಗಿ , ಸುಖ ಬಂದಾಗ balance ತಪ್ಪಿ ಹಾರಡಬೇಡ , ದುಖ ಬಂದಾಗ ಕುಸಿಯಬೇಡ, ಯಾಕೆಂದರೆ ಸುಖ ಬೇಕು ಅಂತ ಆಸೆ ಇದೆಯಲ್ವಾ ನಿನಗೆ,  ಸುಖ ಬೇಕು ಅಂದ್ರೆ ದುಖ ಅದರ ಜೊತೆಗೆ ಇದೆ ಎಂದು ನೆನಪಿರಲಿ. ಯಾರಿಗೂ ಜೀವನದಲ್ಲಿ ಕೇವಲ ಸುಖ ಅಂತ ಇರಲ್ಲ, ಕೇವಲ ದುಖ ಅಂತ ಇರಲ್ಲ. ಅದು ಎಷ್ಟೇ ಶ್ರೀಮಂತನಾದರೂ, ಎಷ್ಟೇ ಬಡವನಾದರೂ ಸರಿ, ಜೀವನ ಅಂದ್ರೆ ದ್ವಂದ್ವ, ಹಗಲಾದ ಕೂಡಲೇ ನಾವು ಹಾರಡಲ್ಲ, ಕತ್ತಲಾದಾಗ ದುಖಪಡಲ್ಲ, ಹಾರಾಡಿದ್ರೂ ದುಖಪಟ್ಟರೂ ಹಗಲಾಗುತ್ತೆ, ಕತ್ತಲಾಗುತ್ತೆ. ಕತ್ತಲಾಯಿತು ಅಂದ್ರೆ ಬೆಳಕಾಗುತ್ತೆ ಅನ್ನೋ ಭರವಸೆ, ಬೆಳಗಾಯಿತು ಅಂದ್ರೆ ಕಾತ್ತಾಲಾಗುತ್ತೆ ಅನ್ನೋ ಒಂದು warning. ಆದ್ದರಿಂದ ಸುಖ ಬಂದಾಗ what is next change ದುಖ. so ಈ ಎಚ್ಚರವಿರಲಿ. ಎಲ್ಲವನ್ನೂ ಸಮದೃಷ್ಟಿ೦ದ ನೋಡುವ ರೀತಿಯೇ ಯೋಗ. ಆಮೇಲೆ ಪ್ರಾಣ ಮತ್ತು ಬಲ. ಪ್ರಾಣ ಅಂದರೆ- ನಮ್ಮ ದೇಹದಲ್ಲಿ ಒಂದು ಅಸಾಧಾರಣ ಶಕ್ತಿಯಿದೆ. ಅದು ಇರುವುದರಿಂದಲೇ ನಾವು ಬದುಕಿರುವುದು. ಆ ಪ್ರಾಣ ಶಕ್ತಿ ನಿರಂತರವಾಗಿ ನಮ್ಮ ಅಂಗೈ ಮೂಲಕ ಹೊರಗೆ ಹೋಗುತ್ತಿರುತ್ತದೆ, ಆದ್ದರಿಂದಲೇ ಅಂಗೈಯಲ್ಲಿ ರೋಮಗಳು ಬೆಳೆಯುವುದಿಲ್ಲ. ಅದನ್ನೇ touch heel ಅನ್ನುವುದು.ಬಲ ಅಂದ್ರೆ ಆತ್ಮಬಲ -ಆತ್ಮನ ಯೋಗ್ಯತೆ. ಒಬ್ಬನಿಗೆ ಏನು ಇದ್ದರೂ ಕೂಡ ಯೋಗ್ಯತೆ ಅಥವಾ ಅರ್ಹತೆ ಇಲ್ಲದಿದ್ದರೆ ಏನನ್ನೂ ಪಡೆಯಲಿಕ್ಕೆ ಆಗೋಲ್ಲ. ಏನು ಪ್ರಯತ್ನ ಮಾಡಿದರೂ ಅವನು ಯಶಸ್ವಿಯಾಗೊಲ್ಲ. ಜೀವನ ಯೋಗ್ಯತೆ ಬೇಕು. " ನಾಯ ಅಥ್ಮಬಲಹೀನ ಲಬ್ಯಹ" ಅಂತಾರೆ ಆಚಾರ್ಯ ಮಧ್ವರು ಬಲವಿಲ್ಲದವನಿಗೆ ಭಗವಂತನ ಅರಿವು ದೊರೆಯುವುದಿಲ್ಲ ಅಂದ್ರು , ಇದೆ ಬಲ ಅಂದ್ರೆ ಆಥ್ಮಬಲ. ಎಂಥಾ ಕಷ್ಟ ಬಂದರೂ ಈ ದಾರಿಯನ್ನು ಬಿಡಲಾರೆ ಅನ್ನುವ ಛಲ. "ಯೋಗ್ಯತಾಯ ಸ್ವಭಾವಚ, ಯೋಗ್ಯತಾಯ ಹಟಸ್ಚ". ಏನನ್ನಾದರೂ ಮಾಡಿಯೇ ಸಿದ್ಧ. ಅಂತಹ ಗುಣಗಳು ಎಲ್ಲರಲ್ಲಿಯೂ ಇರಬೇಕು ಅಂತಾನೆ ಭೀಮ. ಇಲ್ಲಿಗೆ 11 ಗುಣಗಳಾದವು. ಇದರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಇವು ಮೂರನ್ನು ನಾವು ಸ್ವಲ್ಪ ಹೆಚ್ಚು ತಿಳಿದುಕೊಳ್ಳಬೇಕಾಗುತ್ತೆ. ವಾಸ್ತವಿಕವಾಗಿ ಈ ಜ್ಞಾನ ಭಕ್ತಿ ವೈರಾಗ್ಯ ಎಂಬುದು ಒಟ್ಟಿಗೆ ಇರತಕ್ಕಂತಹು. ಜ್ಞಾನ ಒಂದು ಹಕ್ಕಿಯಾದರೆ ಭಕ್ತಿ ವೈರಾಗ್ಯ ಎಂಬುದು ಅದರ ರೆಕ್ಕೆಗಳು. ಭಕ್ತಿ ವೈರಾಗ್ಯ ಇಲ್ಲದ ಜ್ಞಾನ ಅನ್ನುವುದಕ್ಕೆ  ಅರ್ಥವೇ ಇಲ್ಲ. ಒಂದು ವಸ್ತುವಂನ ನಾವು ಹೆಚ್ಚು ಹೆಚ್ಚು ತಿಳಿದುಕೊಂಡಾಗ ಆ ವಸ್ತುವಿನ ಬಗ್ಗೆ ನಮಗೆ ಗೌರವ ಬರುತ್ತೆ, ಪ್ರೀತಿ ಬೆಳೆಯುತ್ತದೆ. ಅದುವೇ ಭಕ್ತಿ. ಆ ವಸ್ತುವಿನ ಮೇಲೆ ಪ್ರೇತಿ ಬೆಳೆದಾಗ ಆ ವಸ್ತುವಿಗಿಂತ infeerior ಆದ ಆದ ವಸ್ತುವಿನ ಬಗ್ಗೆ, ಅದರ  limitation ಗೊತ್ತಾದಾದಾಗ ಉಂಟಾಗುವುದೇ ವೈರಾಗ್ಯ. 
                  ಭಗವಂತನ ಕಡೆಗೆ  ನಮ್ಮ ಮನಸ್ಸು ಹೆಚ್ಚು ಹೆಚ್ಚು tune ಆದಾಗ ಭಗವಂತನ ಅರಿವಿನ ಮುಂದೆ  ಈ ಪ್ರಪಂಚ ಏನೂ ಅಲ್ಲ ಅಂತ ಅದರ limitation ಗೊತ್ತಾಗುತ್ತೆ. ವೈರಾಗ್ಯ ಅಂದರೆ ಎಲ್ಲವನ್ನೂ ಬಿಡುವುದಲ್ಲ, ಒಂದು ವಸ್ತುವಿನ limitation ತಿಳಿಯುವುದು. ಇವೆರಡೂ ಜ್ಞಾನದಿಂದಲೇ ಬರಲು ಸಾಧ್ಯ. ಆದ್ದರಿಂದ ನಮಗೆ ಯಾವಾಗ ಜ್ಞಾನ ಬಂತೋ, ಆವಾಗ ಆ ವಸ್ತುವಿನ ಮಹತ್ವ ಗೊತ್ತಾಯ್ತು. ಉಳಿದ್ದದ್ದಕ್ಕೆ ಮಹತ್ವ ಇಲ್ಲ ಅಂತ ಗೊತ್ತಾಯ್ತು. ಪ್ರಪಂಚದ ಬಗ್ಗೆ ಇದ್ದ attachment ಭಗವಂತನ ಕಡೆಗೆ ಬಂತು. ಇದುವೇ ಜ್ಞಾನ ಭಕ್ತಿ ವೈರಾಗ್ಯ.
ಮುಂದುವರಿಯುತ್ತದೆ...............

ಸೋಮವಾರ, ಡಿಸೆಂಬರ್ 20, 2010

BMW MADE IN WHITE GOLD


ಹೀಗೊಂದು ಕಾರ್........ಅಪ್ಪಟ ಚಿನ್ನದ್ದು, ಬಂಗಾರದ ಬೆಲೆ ಗಗನಕ್ಕೇರುವಾಗ.....
ಎಂಥಾ ವಿಪರ್ಯಾಸ

ಭಾನುವಾರ, ಡಿಸೆಂಬರ್ 19, 2010

ದೇವರು ........


ತನ್ನ ಹೊಸ ಕಾರಿನ ನೋಟಕ್ಕೆ, ಅದರ ವೇಗಕ್ಕೆ ತಾನೆ ಮರುಳಾಗುತ್ತಾ, ಆ ಯುವಕ ಇನ್ನಿಲ್ಲದ ವೇಗದೊಂದಿಗೆ ಇಳುಕಲು ಓಣಿಯನ್ನು ಪ್ರವೇಶಿಸಿದ. ಎದುರುಗದೆ ಪಾರ್ಕ್ ಮಾಡಿದ್ದ ಕಾರುಗಳ ಸಂದಿ ಇಂದ ಯಾರಾದರೂ ಹುಡುಗರು ದಿಢೀರನೆ ಕಾರಿಗೆ ಅಡ್ಡ ಬಂದಾರು ಎಂಬ ಅಳುಕಿನಿಂದಲೇ ಆಕ್ಸಿಲಿಟರ್ ಒತ್ತಿದವನ ಕಣ್ಣಿಗೆ ಯಾರೋ ಕಂಡಂತಾಯಿತು.ಆದರೆ ಕಾರು ಮುಂದೆ ಬಂದಂತೆ ಯಾರು ಕಣ್ಣಿಗೆ ಬೀಳಲಿಲ್ಲ ಬದಲಾಗಿ ಇಟ್ಟಿಗೆಯೊಂದು ರಭಸದಿಂದ ಕಾರಿನ ಎಡ ಬಾಗಿಲಿಗೆ ಅಪ್ಪಳಿಸಿತು. ಸಿಟ್ಟಿಗೆದ್ದ ಯುವಕ ಕಾರು ನಿಲ್ಲಿಸಿದವನೆ ಕೆಳಗಿಳಿದ. ಇಟ್ಟಿಗೆ ಏಟು ತಿಂದ ಕಾರಿನ ಭಾಗ ಜಜ್ಜಿ ಹೋಗಿತ್ತು. ರೇಗಿದ ಯುವಕ ಅತ್ತಿತ್ತ ನೋಡಿದಾಗ ಹುಡುಗನೊಬ್ಬ ಅವನ ಕಣ್ಣಿಗೆ ಬಿದ್ದ. ಅವನ ಕಾಲರ್ ಹಿಡಿದೆಳೆದ ಯುವಕ " ಏಕೆ ಇಟ್ಟಿಗೆ ಎಸೆದೆ ಹೊಸ ಕಾರಿದು,ರೇಪೇರಿಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ" ಎಂದು ಅಬ್ಬರಿಸಿದ ಹುಡುಗನ ಮುಖದಲ್ಲಿ ಅಪರಾಧಿ ಭಾವ. " ಸಾರೀ ಸರ್ ದಯವಿಟ್ಟು ಕ್ಷಮಿಸಿ, ಆದರೆ ನನಗೆ ಬೇರೆ ದಾರಿಯೇ ಇರಲಿಲ್ಲ. ಇಟ್ಟಿಗೆ ಎಸೆಯದಿದ್ದರೆ ನೀವು ಕೂಡ ಕಾರ್ ನಿಲ್ಲಿಸುತಿರಲಿಲ್ಲ. ಅಲ್ಲಿ ಬಿದ್ದಿರುವಾತ ನನ್ನ ಅಣ್ಣ, ತುಂಬಾ ಭಾರ, ನಾನೊಬ್ಬನೇ ಅವನನ್ನು ಎತ್ತಲಾ ರೇ...... ಅದಕ್ಕೆ ಅಂದ. ಅವನ ಕಣ್ಣುಗಳು ಹನಿಗೂಡಿದ್ದವು.    
       ಹುಡುಗ ತೋರಿಸಿದ ಕಡೆ ನೋಡಿದ ಯುವಕನಿಗೆ ಗಾಲೀ ಕುರ್ಚಿಯಿಂದ ಉರುಳಿ ಬಿದ್ದಿರುವ ಅಂಗವಿಕಲ ಹುಡುಗ ಕಾಣಿಸಿದ, ಸರ ಸರ ನೇ ಅತ್ತ ನಡೆದ ಯುವಕ ಹುಡುಗನನ್ನು ಎತ್ತಿ ಗಾಲಿ ಕುರ್ಚಿ ಮೇಲೆ ಕೂರಿಸಿದ. ತನ್ನ ಬಿಳಿ ಕರ್ಚೀಫೀನಿಂದ ತರಚಿದ ಗಾಯದ ಮೇಲಿದ್ದ ಮಣ್ಣನ್ನು ಒರಸಿದ. ಏಕೋ ಅವನಿಗೆ ನಾಚಿಕೆಯಾಗತೊಡಗಿತ್ತು.      "ಥ್ಯಾಂಕ್ ಯೂ ಸರ್" ಎಂದ ಹುಡುಗ ಅಣ್ಣ ಕೂತಿದ್ದ ಗಾಲಿ ಕುರ್ಚಿ ತಳ್ಳಿಕೊಂಡು ಮನೆಯಾತ್ತ ಹೊರಟ.ಯುವಕನಿಗೆ ಏನೂ ತೋಚಲ್ಲಿಲ್ಲ. ಆತ ಕೊಂಚ ಹೊತ್ತು ಆ ದೃಶ್ಯವನ್ನೇ ನೋಡುತ್ತಲೇ ನಿಂತ. ನಂತರ ನಿಧಾನವಾಗಿ ತನ್ನ ಕಾರಿನತ್ತ ಬಂದ. ಇಟ್ಟಿಗೆಯ ಏಟು ಕಾರಿಗೆ ಉಂಟುಮಾಡಿದ ಕಲೆ ಎದ್ದು ಕಾಣುತಿತ್ತು. ಆದರೆ ಯುವಕ ಯಾವತ್ತೂ ಆ ಕಲೆಯನ್ನು ರೇಪೇರಿ ಮಾಡಿಸಲು ಹೋಗಲಿಲ್ಲ, ಅದು ಒಂದು ಜೀವನದ ಸಂದೇಶವಾಗಿ ಇಲ್ಲೇ ಇರಲಿ ಎಂದು ಅಶಿಷಿದ

." ದೇವರು ಯಾವಾಗಲು ನಮ್ಮಲ್ಲಿ ಪಿಸುಮಾತಲ್ಳಿ ಮಾತಾಡೂತಿರುತ್ತಾನೆ. ಆದರೆ ನಮಗೆ ಅದನ್ನು ಕೇಳಿಸಿ ಕೊಳ್ಳುವ ವ್ಯವದಾನವಿಲ್ಲ. ಯಾರಾದರೂ ನಮ್ಮ ಗಮನ ಸೆಲೆಯ ಬೇಕೆಂದರೆ ಇಟ್ಟಿಗೆ ತೂರಿಯೇ ನಿಲ್ಲಿಸುವಷ್ಟು ವೇಗವಾಗಿ ನಾವು ಹೊರಟಿದ್ದೇವೆ ಅದು ತಪ್ಪು"
ಎಂಬ ಸಂದೇಶವನ್ನು ಇದು ನೆನಪಿಸಲಿ ಎಂದು ಬಯಸಿದ.
 ಎರಡನೆ ಬಾರಿ ಇಟ್ಟಿಗೆ ಏಟು ತಿನ್ನುವ ಅವಕಾಶ ಅವನಿಗೆ ಬರಲೇ ಇಲ್ಲ.

‘ಮಹಾಭಾರತ’ ಮತ್ತು ‘ಹದಿನೆಂಟು’ (Numerology)

ಶ್ರೀಮಧ್ಭಗವತ್ ಗೀತೆಯ ಬಗ್ಗೆ ಶ್ರೀ ವೇದವ್ಯಾಸರು ಒಂದು ಮಾತು ಹೇಳ್ತಾರೆ "ಶಾಸ್ತ್ರೇಷು ಭಾರತಂ ಸಾರಹ, ಭಾರಾತೆ ಗೀತಿಕಾ ವರ, ವಿಷ್ಣೋ ಸಹಸ್ರನಾಮೆಪಿ
ದೇಯಂ ಪಟ್ಯ೦ಚ ತದ್ವಯ೦". ಅಂದ್ರೆ ಸಮಸ್ತ ಪುರಾಣ ,ವೇದ,
ಅಥವಾ ಸರ್ವ ಶಾಸ್ತ್ರಗಳಲ್ಲಿ ಅತ್ಯಂತ ಶ್ರೇಷ್ಟವಾದದ್ದು 'ಮಹಾಭಾರತ'. ಮಹಾಭಾರತದಲ್ಲಿ ಶ್ರೇಷ್ಟವಾದದ್ದು
ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ. ಅವೆರಡನ್ನ 'ದೇಯಂ ಪಟ್ಯ೦ಚ ತದ್ವಯ೦' -ತಿಳಿದು ಓದು ಎಂದು. ಅಂದರೆ ತಿಳಿದು ಓದಿದರೆ ಸಮಸ್ತ ಭಾರತದ ತತ್ವ ಶಾಸ್ತ್ರದ ಸಾರ ಸಂಗ್ರಹವನ್ನ
ತಿಳಿದ ಹಾಗಾಗುತ್ತೆ.- ಯಾಕೆ?, ಇಡೀ ಮಹಾಭಾರತದಲ್ಲಿ ಏನಿದೆ? ಅದನ್ನು ಭಗವದ್ಗೀತೆಯನ್ನು ಓದಿದಾಗಲೂ ತಿಳಿಯುವುದಿಲ್ಲ,
ಸಹಸ್ರನಾಮ ಓದಿದಾಗಲೂ ತಿಳಿಯುವುದಿಲ್ಲ. ಮಹಾಭಾರತ, ಕೌರವರ  ಪಾಂಡವರ ಒಂದು ಬದುಕಿನ ಇತಿಹಾಸ. ಹಾಗಾದರೆ ಮಹಾಭಾರತಕ್ಕೂ
ಇವೆರಡಕ್ಕೂ ಏನು ಸಂಭಂದ? ಇದು ಅನೇಕ ಜನರಿಗಿರುವ
ಗೊಂದಲ. ಇದು ಏನು ಎಂದು ತಿಳಿಯಬೇಕಾದರೆ ನಾವು ಮಹಾಭಾರತವನ್ನ ಸ್ವಲ್ಪ ಆಳವಾಗಿ ತಿಳಿಯಬೇಕಾಗುತ್ತೆ.
ಮಹಾಭಾರತದಲ್ಲಿಯೇ ವೇದವ್ಯಾಸರು ಮಹಾಭಾರತದ ಬಗ್ಗೆ
ಒಂದು ಮಾತು ಹೇಳ್ತಾರೆ. " ತ್ರಯೊರ್ಥಾಹ ಸರ್ವ ವೇದೇಶು, ದಶಾರ್ಥಾಹ ಸರ್ವ ಭಾರತೆ, ವಿಷ್ನೋರ್ಸಹಸ್ರನಾಮೇಪಿ
ನಿರಂತರ ಶಥಾರ್ಥಕಮ್". ಅಂದ್ರೆ ವೇದಕ್ಕೆ ಮೂರು ಅರ್ಥಗಳು ಅಂದ್ರು. ಮೂರು ಅಂದ್ರೆ ಬರೀ ಮೂರೇಅಲ್ಲ,minimumಮೂರು.ಮೂರು ಅರ್ಥಕಿಂತ ಕಡಿಮೆ ಅರ್ಥವಿರುವ ಮಂತ್ರ
ಯಾವ ವೇದದಲ್ಲೂ ಇಲ್ಲ. ಮಹಾಭಾರತದ ಎಲ್ಲಾ ಶ್ಲೋಕಗಳಿಗೂ minimum ಹತ್ತು ಅರ್ಥಗಳಿವೆ ಅಂದ್ರು.
ಹಾಗೆಯೇ ವಿಷ್ಣು ಸಹಸ್ರನಾಮದ ಒಂದೊಂದು ನಾಮಕ್ಕೂ minimum ನೂರು ಅರ್ಥವಿದೆ. ಹೀಗೆ ಅದರ ಸಾರದ ಮಹತ್ವವನ್ನ ತಿಳಿಸಿದರು.
ವೇದವ್ಯಾಸರು ಹೇಳ್ತಾರೆ "ಮಹಾಭಾರತ ಮೂರು ವಿದದಲ್ಲಿ ತೆರೆದುಕೊಳ್ಳುತ್ತೆ. " ಅಂದ್ರೆ
ಮೂರು ಮುಖದಿಂದ ಮಹಾಭಾರತವನ್ನ ನೋಡು ಅಂದ್ರು. ಅದು ಹೇಗೆ? "ಮಾನ್ವಾದಿ ಕೇಚಿದ್ ಬ್ರೂವತೆ, ಆಸ್ಥಿಕಾದಿ ತಥಾಪರೆ, ತತೋಪಾನಿಚರಾಧನ್ಯೆ ಭಾರತಂ
ಪರಿಚಕ್ಶಥೆ". ಮೂರು ವಿದದಿಂದ ಭಾರತ ತೆರೆದುಕೊಳ್ಲುತ್ತೆ. ಯಾರ ಯಾರ ಯೋಗ್ಯತೆ ಎಷ್ಟೆಷ್ಟೋ ಅವರಿಗೆ
ಹಾಗೆ ತೆರೆಯುತ್ತೆ. ಮೊದಲನೆಯದ್ದು- "ಆಸ್ತಿಕಾದಿ" ಅಂದ್ರೆ ಆಸ್ತಿಕಾರದ ಪಾಂಡವರ ಚರಿತ್ರೆ, ನಾಸ್ತಿಕರಾದ ಕೌರವರ ವಿರುದ್ದ
ಆಸ್ತಿಕರಾದ ಪಾಂಡವರು ಧರ್ಮದಿಂದ ಹೇಗೆ ವಿಜಯವನ್ನ ಸಾಧಿಸಿದರು ಎಂದು ಒಂದು ಮುಖ. ಕೌರವ ಪಾಂಡವರ ಇತಿಹಾಸ
ರೂಪದ ಕಥೆ. ಅದಕ್ಕೆ ಅದನ್ನ ಮಹಾಭಾರತ ಅನ್ದ್ರು.ಇದು ಮಹಾಭಾರತದ ಐತಿಹಾಸಿಕ ಮುಖ. ಇದನ್ನ ನಾವು ತಿಳಿಯಬೇಕಾದರೆ
ಮಹಾಭಾರತವನ್ನೇ ಓದಬೇಕು. ಎರಡನೆಯದು "ಮಾನ್ವಾದಿ ಕೇಚಿದ್ ಬ್ರೂವತೆ" -ನಾವು ಮನನ ಮಾಡಿ
ತಿಳಿದುಕೊಳ್ಳಬೇಕಾದ ಮಾನಸಿಕವಾದ, ಅಧ್ಯಾತ್ಮಿಕವಾದ ಒಂದು ಮುಖವಿದೆ ಅಂದ್ರು  ಅಂದ್ರೆ
ಮನನದಿಂದ ತಿಳಿದುಕೊಳ್ಳಬೇಕಾದ ಮಾನವೀಯ ಮೌಲ್ಯಗಳ ಕಥೆ ಅಂದ್ರು. ಇದು ಮನೋವೈಜ್ಞಾನಿಕ ಮುಖ. ಮಹಾಭಾರತ
ಅಂದ್ರೆ ೫೦೦೦ ವರುಷಗಳ ಹಿಂದೆ ಉತ್ತರಭಾರತದ ಅರಸು ಮನೆತನದ,ದಾಯಾದಿಗಳಾದ ಅಣ್ಣತಮ್ಮಂದಿರು ಅರಸ್ವತ್ತಿಗೆಯ ಒಡೆತನಕ್ಕೆ
ಮಾಡಿಕೊಂಡ ಯುದ್ದದ ಕಥೆಯಲ್ಲ. ಅದರಾಚೆಗೂ ಇನ್ನೊಂದು ಮುಖವಿದೆ, ಇದು ನಮ್ಮ ನಿಮ್ಮ ಕಥೆ.
ನಮ್ಮ ನಮ್ಮ ಜೀವನ ಸಂಘರ್ಷದ ಕಥೆ. ನಮ್ಮ ಹೃದಯವೆಂಬ ಕುರುಕ್ಷೇತ್ರದಲ್ಲಿ ನಡೆಯುವ ನ್ಯಾಯಾನ್ಯಾಯಗಳ
ಕಥೆ. ಆದ್ದರಿಂದ ಇದು ಯಾರ್‍ಯಾರ ಕಥೆಯಲ್ಲ, ಇದು ನಮ್ಮ ನಿಮ್ಮ ಕಥೆ ಅಂದ್ರು.  ಮೂರನೆಯದ್ದು "ತಥಾ ಉಪನಿಚರಾಧನ್ಯೆ"- ಅಂದ್ರೆ
ಇದು ಯಾರ ಕಥೆಯೂ ಅಲ್ಲ, ಇದು (ಉಪನಿಚರ) ಮೇಲೆ ಇರುವವನ ಕಥೆ. ಅಂದ್ರೆ ಭಗವಂತನ ಕಥೆ. ಎಲ್ಲಾ ಉಪನಿಷತ್ತುಗಳು ಭಗವಂತನನ್ನ
"ಊರ್ದ್ವ ಮೂಲಂ ಮಧ ಶಾಖಂ" -ಊರ್ದ್ವ ಅಂದ್ರೆ ಮೇಲೆ ಇರುವವನು. ಇದು ಪಾಂಡವರ ಕಥೆಯಲ್ಲ, ನಮ್ಮ ನಿಮ್ಮ ಕಥೆಯಲ್ಲ, ಇದು ಮೂಲಭೂತವಾಗಿ ಭಗವಂತನ
ಕಥೆ.- ಇದು ಮೂರನೆಯ ಆಧ್ಯಾತಿಕ ಮುಖ. ಮಹಾಭಾರತದಲ್ಲಿ ಒಂದು ಲಕ್ಷ ಶ್ಲೋಕಗಳಿವೆ. 32 ಅಕ್ಷರಗಳಿಗೆ
ಒಂದು ಶ್ಲೋಕ ಅಂತ ಹೆಸರು. ಅಂದರೆ 32 ಲಕ್ಷ ಅಕ್ಷರಗಳು ಭಗವಂತನ 32 ಲಕ್ಷ ನಾಮಗಳು. ಒಂದುಂದು ಅಕ್ಷರವೂ
ಭಗವಂತನ ಒಂದೊಂದು ನಾಮ. ಈ ಪರಂಪರೆ ಎಲ್ಲಿಂದ ಬಂತು ಅಂದ್ರೆ ವೇದದಿಂದ ಬಂತು. "ಯಾವಂತಿ ಪಟಿಥಾನಿ
ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಹ". ಋಗ್ವೇದದಲ್ಲಿ ಪ್ರಾಚೀನರ ಪ್ರಕಾರ 4 ಲಕ್ಷದ 32 ಸಾವಿರ
ಅಕ್ಷರಗಳಿವೆ. ಆದ್ದರಿಂದ ಒಮ್ಮೆ ಋಗ್ವೇದ ಓದಿದರೆ 4ಲಕ್ಷದ 32 ಸಾವಿರ ಹರಿನಾಮ ಹೇಳಿದ ಹಾಗಾಯಿತು.
ಆದಕ್ಕೋಸ್ಕರವೇ ವೇದ ಪಟನ ಪ್ರಾರಂಬಿಸುವಾಗ ‘ಹರಿ: ಓಂ’ ಅನ್ನುತ್ತಾರೆ. ಹರಿನಾಮವನ್ನೇ ನಾವು ಪಟನೆ ಮಾಡುತ್ತಿದ್ದೇವೆ  ಎಂದು ಅನುಸಂದಾನ ಮಾಡಿ ವೇದ ಓದುತ್ತಿದ್ದರು. ಹಾಗಾದರೆ ಮಹಾಭಾರತ
ಓದಿದರೆ 32 ಲಕ್ಷ ಹರಿನಾಮ ಓದಿದ ಹಾಗಾಯ್ತು, ಅಂದರೆ ಪ್ರತಿಯೊಂದು ಅಕ್ಷರವನ್ನೂ ಭಗವಂತನ ನಾಮವಾಗಿ
ಕಾಣುವಂತ ಸ್ಥಿತಿ. ಇದು ಆಧ್ಯಾತ್ಮಿಕ ಮುಖ.
 ಇಲ್ಲಿ ಭಗವಂತನನ್ನ 'ಉಪನಿಚರ'
ಅಥವಾ ಮೇಲೆ ಇರುವವನು ಅಂತ ಯಾಕೆ ಅಂತಾರೆ ಅಂದ್ರೆ ಭಗವಂತ ಎಲ್ಲಾ ಕಡೆಯೂ
ಇದ್ದಾನೆ, ಆದರೆ ಎಲ್ಲಕ್ಕಿಂತ ಎತ್ತರದಲ್ಲಿದ್ದಾನೆ. above all.ಇದು
ನಮ್ಮ ಸುಪ್ತ ಮನಸ್ಸಿಗೂ ಗೊತ್ತಿದೆ. ಆದ್ದರಿಂದ ನಾವು ದೇವರಿಗೇ ಗೊತ್ತು ಅನ್ನುವಾಗ ಕೈ ಮೇಲಕ್ಕೆ ಎತ್ತುತ್ತೇವೆ, -ಈ ಸಂಕೇತಗಳು ನಮಗೆ ಗೊತ್ತಿಲ್ಲದೆಯೇ ಗೊತ್ತಿರುತ್ತವೆ. ಅದಕ್ಕೆ ಸುಪ್ತಪ್ರಜ್ಞೆ ಅನ್ನುತ್ತಾರೆ.
ಭಗವಂತ ಎಲ್ಲಾ ಕಡೆ ಇದ್ದಾನೆ ಎಲ್ಲಕ್ಕಿಂತ ಎತ್ತರದಲ್ಲಿದ್ದಾನೆ. ಆ feelings ನಮಗೆ ಬೇಕು. ಅವನು ಸರ್ವೋತೃಷ್ಟನಾಗಿದ್ದಾನೆ.
ಅದಕ್ಕೋಸ್ಕರವೇ ಅವನ್ನನ್ನು ‘ಉಪನಿಚರ’ ಅನ್ನುವುದು. ಇಲ್ಲಿ ಮಾನಸಿಕವಾಗಿ ಮಹಾಭಾರತ ಹೇಗೆ ತೆರೆದುಕೊಳ್ಳುತ್ತೆ ಎಂಬುದು ನಾವು ನೋಡಬೇಕಾದ ಅಂಶ.
ಮಹಾಭಾರತಕ್ಕೆ ಪ್ರಾಚೀನರು ಕೊಟ್ಟ ಹೆಸರು
"ಜಯೋ ನಾಮ ಇತಿಹಾಸ್ವಯಂ", ಅಂದ್ರೆ ಮಹಾಭಾರತದ ಅತ್ಯಂತ
ಪ್ರಾಚೀನ ಹೆಸರು 'ಜಯ' ಎಂದು.ಅಂದರೆ ಹಿಂದಿನ ಕಾಲದಲ್ಲಿ ಯಾವುದೇ ಸಂಖ್ಯೆಯನ್ನು ಅಕ್ಷರಗಳ
ಮೂಲಕ ಹೇಳುತ್ತಿದ್ದರು. 'ಜ'ಎನ್ನುವುದು '8'ನ್ನು represent ಮಾಡುವ ಅಕ್ಷರ. {ಕ.ಖ,ಗ,ಘ,....,ಚ, ಛ, 'ಜ'.}. 'ಯ'.ಅಂದ್ರೆ ಒಂದು {ಯ,ರ,ಲ,ವ.......}.
ಹಾಗಾದರೆ ಎಂಟು ಮತ್ತು ಒಂದು ಅಂದ್ರೆ ಎಂಬತ್ತೊಂದು ಅಲ್ಲ, ಹದಿನೆಂಟು. ಯಾಕೆಂದರೆ "ಅಂಕಾನಾಮ್ ವಾಮೊಗತಿಹಿ" ಯಾವುದೇ ಸಂಖ್ಯೆಯನ್ನ ಕೂಡಿಸುವಾಗ
ಅಥವಾ ಗುಣಿಸುವಾಗ ಉತ್ತರವನ್ನ ಎಡಡಿಂದ ಬಲಕ್ಕೆ ಬರೆಯುತ್ತೆವೆ. ಆದ್ದರಿಂದ ಎಂಟು ಅದರ ಎಡಕ್ಕೆ ಒಂದು
ಹೀಗಾಗಿ "ಹದಿನೆಂಟು". ಆದ್ದರಿಂದ 'ಜಯ' ಅಂದರೆ ಹದಿನೆಂಟು"..ಅದು ಮಾತ್ರವಲ್ಲ, ಕೌರವ ಪಾಂಡವರ ಯುದ್ಧದಲ್ಲಿ
ಆಸ್ತಿಕರಾದ ಪಾಂಡವರ 'ಜಯ'. ಆದ್ಯಾತ್ಮದ ಸಾಧನೆಯಿಂದ
ಸಂಸಾರವೆಂಬ ತಾಪತ್ರಯದಿಂದ 'ಜಯ'. ಅಂದರೆ ಮೋಕ್ಷ ಸಾಧನೆಗೆ
ಉಪಯುಕ್ತವಾದ ಗ್ರಂಥ, ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹದಿನೆಂಟು ಅಂದರು.
ಅಂದ್ರೆ ಒಟ್ಟಿನಲ್ಲಿ ಮೋಕ್ಷ ಸಾಧನೆಗೆ ಮುಖ್ಯವಾಗಿ ತಿಳಿಯ ಬೇಕಾಗಿರುವುದು  'ಹದಿನೆಂಟು'. ಆದ್ದರಿಂದಲೇ 'ಮಹಾಭಾರತಕ್ಕೂ' 'ಹದಿನೆಂಟಿಗೂ'
ಗಾಢವಾದ ಸಂಭಂದವಿದೆ. ಅದರ ಬಗ್ಗೆ ಮುಂದೆ ತಿಳಿಯೋಣ
ಮುಂದುವರಿಯುತ್ತದೆ....................

ಅವನೂ.... ಅವಳೂ......


ತನ್ನೆದೆಯ ಮೇಲೆ ನಡೆದಾಡುವ ಸಾವಿರಾರು ಹೆಜ್ಜೆಗಳನ್ನು ಗುರುತಿಟ್ತು ಕೊಳ್ಳದೇ ನಿರ್ಲಿಪ್ತವಾಗಿ ಮಲಗಿತ್ತು ದಾರಿ. ಇಬ್ಬರೂ ಸಾಗುತಿದ್ದರು ಒಬ್ಬ ಓಡುತಿದ್ದ ಒಬ್ಬಳು ನಡೆಯುತಿದ್ದಳು,       ದಿನವೂ ಹೀಗೆ..........ಮುಂಜಾವು ತೊಳೆದಿಟ್ಟ ಹಾದಿಯಲ್ಲಿ ಅವನು ಉತ್ಸಾಹದಿಂದ ಓಡುತಿದ್ದರೆ, ಅವಳು ಕನಸುಗಳ ಮೂಟೆಯನ್ನು ತಲೆಯಲ್ಲಿ ಹೊತ್ತವಳಂತೆ ಮಂದವಾಗಿ ನಡೆಯುತಿದ್ದಳು,   ಅಂದು ಕೂಡ ಅವನು ಹತ್ತಾರು ಗಾವುದ ಮುಂದೆ ಇದ್ದ ಬಂಡೆಯನ್ನು ಮೊದಲೇ ತಲುಪಿ ಹಿಂತಿರುಗಿ ನೋಡಿದಾಗ ಅವಳಿನ್ನೂ ಮರದಡಿಯಲ್ಲಿ ವಿಶ್ರಮಿಸುತಿದ್ದಳು.ಅವಳ ಮುಖವನ್ನು ನೋಡುತ್ತಾ ಅವನು ಕೂಗಿ ಹೇಳಿದ" ಯಾಕೋ ನಿನ್ನ ಬಗ್ಗೆ ನನಗೆ ಕನಿಕರ. ನೀನು ನನ್ನಷ್ಟು ವೇಗವಾಗಿ ನಡೆಯಲಾರೆಯಲ್ಲಾ?"
"  ನಿನ್ನ ಬಗ್ಗೆಯೂ ನನಗೆ ಅನುಕಂಪ ಗೆಳೆಯ.................ಯಾಕೆಂದರೆ ನೀನು ಹಾದಿಬದಿಯ ಅನಾಮಿಕ ಹೂವಿನ ಕೆಂಪಿನೊಳಗಿನ ನಿರ್ವರ್ಣವನ್ನು,ಮೌನವಾಗಿ ಬಿದ್ದಿರುವ ಕಲ್ಲುಗಳ ಎದೆಯೊಳಗಿನ ನೋವನ್ನು, ಹುಲ್ಲು ಹೂವಿನ ಮೇಲಿನ ಇಬ್ಬನಿಯ ಆತಂಕವನ್ನು ನನ್ನಷ್ಟು ಚೆನ್ನಾಗಿ ತಿಳಿದಿರಲಾರೆ. ಮತ್ತು ಸಾವಿರಾರು ಪಾದಾಗಳಿಗೇ    ಎದೆಯೊಡ್ಡಿ ಮಲಗಿರುವ ಈ ಹಾದಿಯಲ್ಲಿ ಅಡಗಿರುವ ನೂರಾರುಕತೆಗಳನ್ನ ನನ್ನಂತೆ ಆಲಿಸಲಾರೆ"    
ಆತನಿಗೆ ಪಿಚ್ಚೆನಿಸಿತು, ಅಂದಿನಿಂದ ಅವನೂ ಮೆಲ್ಲಗೆ ನಡೆಯಲಾರಂಬಿಸಿದ, ಕನಸುಗಳ ಮೂಟೆಯನ್ನು ಹೊತ್ತವನಂತೆ.

ಗಾಯತ್ರಿಚಿಂತನ ಭಾಗ 6

ಕೃಷ್ಣ ಒಂದು ಕಡೆಯಲ್ಲಿ ಹೇಳುತ್ತಾನೆ "ಓಂ ತತ್ಸತ್"  ಅನ್ನುವುದೂ ಭಗವಂತನ ಹೆಸರು. ಓಂ  ನ ಅರ್ಥ ಗೊತ್ತಾಯಿತು,  ಆದರೆ ತತ್ ಮತ್ತು ಸತ್  ಕೂಡಾ ಭಗವಂತನೇ. ತತ್ ಅಂತ ಭಗವಂತನ ಉಪಾಸನೆ ಮಾಡಬೇಕು ಎಂದು ತಳಾವಕಾರೋಪನಿಷತ್ನಲ್ಲಿಯೂ ಹೇಳುತ್ತಾರೆ.  ತತ್ ಅಂದ್ರೆ ತತ , ಎಲ್ಲಾ ಗುಣಗಳಿಂದ ತತ, ಎಲಾ ಕಡೆಗಳಲ್ಲಿ ತತ, ಅಂದ್ರೆ ಎಲ್ಲಾ ಕಡೆಗಳಲ್ಲಿ ಎಲ್ಲಾ ಗುಣಗಳಿಂದ ತುಂಬಿರುವವ ತತ್. ಅದು ಮಾತ್ರವಲ್ಲ - ಗಾಯತ್ರಿ ಎಂಬುದು its satrts from ‘, and ends with ‘ತ್. so, ‘ತತ್  ಅಂದರೆ ಇಡೀ ಗಾಯತ್ರಿಯ abrivation ಆಯಿತು. ಮತ್ತು ಗಾಯತ್ರಿಯ ಮೊದಲ ಶಬ್ದವು ತತ್. ಸತ್ ಅಂದ್ರೆ pure existence.ಇವೆರಡು ಗಾಯತ್ರಿಯ ಎರಡು aspects.ಗಳು. ಅದನ್ನೇ ಕೃಷ್ಣ ಓಂ ತತ್ಸತ್ ಇತಿ ನಿರ್ದೇಶಿ ಅಂದ – ತತ್ ಅಂದ್ರೆ ಸರ್ವಗುಣ ಪೂರ್ಣ, ಸರ್ವ ಕಾಲ , ಸರ್ವ ದೇಶ ಪೂರ್ಣ,  ಸತ್ ಅಂದ್ರೆ pure existence. ಎಲ್ಲ ಗುಣಗಳಿಂದ ತುಂಬಿದೆ ಎಂದು ತತ್ ಹೇಳುತ್ತೆ. ಯಾವ ದೋಷವೂ ಇಲ್ಲ ಎಂದು ಸತ್ ಹೇಳುತ್ತೆ. - ಅದು ಯಾವುದು? ಓಂ  ಅಷ್ಟೇ
ಈಗ ತತ್ಸ ವಿತುರ್ವರೇಣ್ಯಂ ಅಂದ್ರೆ ಏನು ನೋಡೋಣ-  ಇದು ಮೂಲತ ಸೂರ್ಯಮಂಡಲದಲ್ಲಿರತಕ್ಕಂತಹ, ಇಡೀ ಜಗತ್ತಿಗೆ solar energy ಯನ್ನು ಅಥವಾ ಪ್ರಾಣ ಶಕ್ತಿಯನ್ನು ಕೊಡತಕ್ಕಂತಹ, ಸೂರ್ಯನಲ್ಲಿ ಅಂತರ್ಗತನಾದ ನಾರಾಯಣನ ಉಪಾಸನೆ. ತತ್ ಅಂದರೆ ಅದು ಎಂದರ್ಥ ಮತ್ತು ಇದುಎಂದರ್ಥ. (  ಅಲ್ಲಿಯೂ ಇರುವಂತಹುದು, ಇಲ್ಲಿಯೂ ಇರುವಂತಹುದು.)  ‘That’ is also that ‘ತತ್ and ‘This’ is also ‘ತತ್. ಮತ್ತೆ  ಓಂಕಾರದ ಅರ್ಥವೇ ಬಂತು. ತತ್ ಅಂದ್ರೆ ‘omnipresent’ ಅಂತಹ  ಭಗವಂತನನ್ನ ನಾವು ಗಾಯತ್ರಿ ಮೂಲಕ ಉಪಾಸನೆ ಮಾಡುತ್ತೇವೆ. "ತತ್ ಧೀಮಹಿ" .
ಸವಿತ - ಅಂದ್ರೆ ಸೂರ್ಯ. ಸವಿತುಃ ಅಂದ್ರೆ ಸೂರ್ಯನಿಗೆ ಸಂಬಂಧ ಪಟ್ಟದ್ದು.  ಅಂದರೆ ಭಗವಂತನ ಪ್ರತೀಕ ಸೂರ್ಯನಲ್ಲಿ ಇದೆ ಎಂದು ಗಾಯತ್ರಿ ಹೇಳುತ್ತೆ.  ಆದ್ದರಿಂದ ಗಾಯತ್ರಿ ಪತಿಸುವಾಗ ಸೂರ್ಯಮಂಡಲವನ್ನ consider ಮಾಡು, concentrate on Sooryamandala, not on Narayana ಯಾಕೆಂದರೆ ನಮಗೆ ನಾರಾಯಣ ಹೇಗಿದ್ದಾನೆ ಎಂಬುದು ಗೊತ್ತಿಲ್ಲ ತಾನೆ?  ಗೊತ್ತಿಲ್ಲದ್ದನ್ನ ಹೇಗೆ concentrate ಮಾಡೋದು? ಮತ್ತೇನು ಮಾಡಬೇಕು ಅಂದ್ರೆ ಸೂರ್ಯಮಂಡಲದಲ್ಲಿ ನಾರಾಯಣ ಇದ್ದಾನೆ ಎಂದು ತಿಳಿದು ಧ್ಯಾನ ಮಾಡು ಅಂತಾರೆ ಶಾಸ್ತ್ರಕಾರರು. - ಭಾಗವತ ಹೇಳುತ್ತೆ " ಸ್ಥೂಲೆ ಭಾಗವತೊ ರೂಪೆ" .- ಅಂದ್ರೆ ಕಣ್ಣು ಮುಚ್ಚಿ ಧ್ಯಾನ ಮಾಡು, 'ಭಗವಂತ ಕಾಣೋಲ್ಲ ಸ್ವಾಮಿ'  ಮತ್ತೇನು ಕಾಣುತ್ತೆ? "ನನ್ನ ಮನೆಯೇ ಕಾಣುತ್ತೆ. "ಸರಿ ಮನೆಯನ್ನೇ ಕಣ್ಮುಚ್ಚಿ ನೋಡು, ಆದರೆ ನನ್ನ ಮನೆ ಬರೀ ಇಟ್ಟಿಗೆ ಸಿಮೆಂಟ್‌ನಿಂದ ಆದದ್ದಲ್ಲ, ಅದರ ಗೋಡೆಯೊಳಗೂ ಭಗವಂತ ತುಂಬಿದ್ದಾನೆ ಅಂತ ತಿಳಿದು ಧ್ಯಾನ ಮಾಡು.- ಕಾಣುವುದು ಅದನ್ನೇ ಆದರೆ ಆ aspect ನ್ನ change ಮಾಡು. ಹೀಗೆ ಕ್ರಮೇಣ meditation develop ಮಾಡು ಅಂತಾರೆ .
ಸವಿತಾ ಅಂದ್ರೆ ಸೂರ್ಯ ಯಾಕೆ? - 'ಸೂತೆ ಇತಿ ಸವಿತಃ' . ಯಾರು ಜಗತ್ತನ್ನ ಹೆತ್ತ ಶಕ್ತೀಯೋ ಅದು ಸವಿತಾ. ಅಂದ್ರೆ ಅವನಲ್ಲಿ ತಂದೆಯ aspect ಇದೆ, ತಾಯಿಯ  aspect ಇದೆ. ಪ್ರಳಯ ಕಾಲದಲ್ಲಿ ಜಗತ್ತು ಅವನ ಹೊಟ್ಟೆಯಲ್ಲಿ ಇತ್ತು, ನಂತರ ಹೆತ್ತ , ಆದ್ದರಿಂದ ಅವನೆ ತಾಯಿ, ಅವನೆ ತಂದೆ." ತ್ವಮೇವ ಮತಾಚ ಪೀತಾತ್ವಮೇವ"  ಇದು ಸವಿತಾ ಎಂಬ ಪದದ ಮೂಲ ಅರ್ಥ. ಅವನೆ ಸವಿತು, ಸೂರ್ಯಮಂಡಲದಲ್ಲಿರುವವನು.
'ವರೆನಿಯಮ್' - "ವರ್ಣೀಯೊ ಗುಣಾನ್ವಥೆ"  ಅಂದ್ರೆ ಅದು ಎಲ್ಲರೂ ಆಶ್ರಯಿಸ ಬೇಕಾದಂತಹ ಬೆಳಕು.  ವರೆನಿಯಮ್ ಅಂದರೆ ದೊಡ್ಡದು ಎಂದರ್ಥ. ಆದ್ದರಿಂದಲೇ ಅದರ ನೆರಳಿನ ಅಡಿಯಲ್ಲಿ ಎಲ್ಲರೂ ಆಶ್ರಯಿಸ ಬೇಕು ಎಂದರ್ಥ. ವರ, ವರಾಹ, ವರೇಣ್ಯಾ ಇವೆಲ್ಲವೂ ಅದೇ ಅರ್ಥ. ಎಲ್ಲಕಿಂತಲೂ ಶ್ರೇಷ್ಟ ಬೆಳಕು. ಅದು ಯಾವ ತರದ ಬೆಳಕು ಅಂದ್ರೆ " ಭರ್ಗಹ" ಅಂದ್ರು. - "ಭ ರತಿ ಜ್ಞಾನ ರೂಪತ್ವ" ಅಂದರೆ ನಮಗೆ ಗೊತ್ತಿರುವುದು ಎರಡು ಬಗೆಯ ಬೆಳಕು. ೧. ಬೆಂಕಿ ಕಡ್ಡಿಯಿಂದ ಬರುವ ಬೆಳಕು. ೨. ವಿದ್ಯುತ್ನಿಂದ ಬರುವ ಬೆಳಕು. ಆದರೆ ಭರ್ಗಹ ಅಂದರೆ ನಾವು ತಿಳ್ಕೊಂಡ ಈ ಬೌತಿಕವಾದ ಬೆಳಕಲ್ಲ,  it is not material light. ಬೌತಿಕವಾದ ಬೆಳಕು ಒಂದು ದಿನ ನಾಶವಾಗಲೇ ಬೇಕು. ಯಾಕೆಂದರೆ ಯಾವುದು meterial , ಅದು ನಾಶವಾಗಲೇ ಬೇಕು. ಆದರೆ ಇದು ಯಾವುದರಿಂದ ಮಾಡಿದ ಬೆಳಕು ಅಂದರೆ 'ಭರ್ಗಹ' ಅಂದರು. ''ಅಂದ್ರೆ ಬೆಳಕು, '' ಅಂದ್ರೆ 'ರತಿ',ಆನಂದ, '' ಅಂದರೆ 'ಜ್ಞಾನ' ಅಂದರೆ ಜ್ಞಾನಾನಂದಮಯ ಬೆಳಕು. ಜ್ಞಾನಂದವೇ ಬೆಳಕಾಗಿ ನಿಂತಿದೆ ಹೊರತು ಬೆಂಕಿ ಕಡ್ಡಿಯಿಂದಾಗಲಿ, ವಿದ್ಯುತ್ತಿನಿಂದಾಗಲಿ, ಸೂರ್ಯ ಚಂದ್ರರಿಂದಾಗಲಿ ಆದ ಬೆಳಕಲ್ಲ. .......ಅಜ್ಞಾನ ಅಂದರೆ ಕತ್ತಲೆ. ಜ್ಞಾನ ಅಂದರೆ ಬೆಳಕು. "ತಮಸೋಮ ಜ್ಯೋತೀರ್ಗಮಯ". ಅದು ಯಾವತ್ತೂ ನಂದದ ದೀಪ. ಜಗತ್ತಿನ ಎಲ್ಲಾ ಬೆಳಕು ಯಾವುದರ ಪ್ರತಿಫಲನವೋ ಅಂತಹ ಬೆಳಕನ್ಣ ಧ್ಯಾನ ಮಾದೊನ.ಯಾಕೆ ಧ್ಯಾನ ಮಾಡಬೇಕು ಅಂದ್ರೆ "ದಿಯೋ ಯೋನ ಪ್ರಚೋದಯಾತ್" ನಮ್ಮ 'ಧೀ' ಶಕ್ತಿಯನ್ನು ಅಂದರೆ ನಮ್ಮ ಎಲ್ಲಾ ಚಿಂತನ ಪ್ರಕಾರಗಳನ್ನು, ಮನೋವೃತ್ತಿಗಳನ್ನು ಅವನು ಒಳ್ಳೆಯದರ ಕಡೆಗೆ ಪ್ರೇರೇಪಿಸಬೇಕು.  ಅಂದರೆ ನಮಗೆಲ್ಲರಿಗೂ ಒಳ್ಳೆಯದನ್ನ ನೋಡುವ, ಒಳ್ಳೆಯದನ್ನ ಕೇಳುವ, ಒಳ್ಳೆಯದನ್ನ ಆಡುವ, ಒಳ್ಳೆಯದನ್ನ ಯೋಚಿಸುವಂತೆ ಅವನು ಪ್ರೇರೇಪಿಸಲಿ- ಇಷ್ಟೇ ನಮ್ಮ ಪ್ರಾರ್ಥನೆ.ಇದುವೆ "ದಿಯೋ ಯೋನ ಪ್ರಚೋದಯಾತ್". 
ಇಲ್ಲಿಯವರೆಗೆ ಗಾಯತ್ರಿ ಮಂತ್ರದ ಉಪಾಸನೆಯ ಹಲವು ಹಂತಗಳನ್ನು ನಾವು ನೋಡಿದೆವು. ಮೊದಲು ಓಂಕಾರ ಆಮೇಲೆ ವ್ಯಾಹೃತಿ ಆಮೇಲೆ ತಾತ್ಸಾವಿತುರ್ವರೇಣ್ಯಂ........................ಪ್ರಚೋದಯಾತ್. ಇನ್ನೂ ಮುಂದಕ್ಕೆ ಹೋಗೋಣ. ಅದು ಅಲ್ಲದೇ ಭಗವ್ಂತನ ಪರಿಪೂರ್ಣವಾದ ಹತ್ತು ಹಲವು ರೂಪಗಳನ್ನು  ಗಾಯತ್ರಿ ಹೇಳುತ್ತದೆ. ಅದರಲ್ಲಿ ಮುಖ್ಯವಾಗಿ ದಶಾವತಾರ ಮತ್ತು ಭಗವಂತನ ೨೪ ರೂಪ. ಈಗ ಗಾಯತ್ರಿಯಲ್ಲಿ ದಶಾವತಾರದ ಚಿಂತನೆ ಹೇಗೆ ಎಂದು ನೋಡೋಣ- ಗಾಯತ್ರಿಯಲ್ಲಿ ಪದಗಳು ಹತ್ತು,- ತತ್, ಸವಿತುಃ, ವರೆನಿಯಮ್,ಭರ್ಗಹ, ದೇವಸ್ಯ,ಧೀಮಹಿ,ದಿಯ, ಯಹ, ನಹ,ಪ್ರಚೋದಯಾತ್.- ಈ ಹತ್ತು ಪದಗಳಿಗೂ ಭಗವಂತನ ಹತ್ತು ಅವತಾರಗಳಿಗೂ ಸಂಬಂದ ಹೇಗೆ ಅಂದರೆ- ಮೊದಲನೆಯದ್ದು 'ಮತ್ಸ್ಯರೂಪ'. ಮತ್ಸ್ಯರೂಪವನ್ಣ  ತತ್ ಅಂದ್ರು. ತತ್ ಅಂದ್ರೆ ಹಬ್ಬುವುದು. ವೈವ್ವಸುಥ ಮನು ಸೂರ್ಯನಿಗೆ ಅರ್ಘ್ಯ ಕೊಡಲಿಕ್ಕೆ ಅಂತ ಬೊಗಸೆಯಲ್ಲಿ ನೀರೆತ್ತಿದಾಗ ಭಗವಂತ ಒಂದು ಪುಟ್ಟ ಮೀನಾಗಿ ಕಾಣಿಸಿಕೊಂಡ. ಪುಟ್ಟ ಮೀನಾಗಿ ಕಾಣಿಸಿಕೊಂಡವ ಕೈಯಿಂದ ಕೆಳಕ್ಕೆ ಬಿದ್ದು ತತನಾದ, ತತನಾದ, ತತನಾದ, ಬೆಳೆದ, ಬೆಳೆದ ಬಾವಿಯಲ್ಲಿ ತುಂಬಿದ, ಕೆರೆಯಲ್ಲಿ ತುಂಬಿದ, ನದಿಯಲ್ಲಿ ತುಂಬಿದ,ಸಮುದ್ರದಲ್ಲಿ ತುಂಬಿ ವೈವಸುತ ಮನುವನ್ನ ಕರೆದುಕೊಡು ಹೋದ. ಆದ್ದರಿಂದ ಬಹಳ ಸ್ಪಷ್ಟವಾಗಿ ಮತ್ಸ್ಯರೂಪದ ವಿವರಣೆ ಕೊಟ್ಟರು.
ನಂತರ ಸವಿತು:- ಸವಿತಾ ಅಂದರೆ 'ಸವನ'- ಯಜ್ಞದಲ್ಲಿ ಸೋಮ ಸವನ ಅಂತಾರೆ. ಸೊಮ ರಸವನ್ನ ಜಜ್ಜಿ ರಸ ತೆಗೆಯುವುದಕ್ಕೆ ಸವನ ಅಂತಾರೆ. ಇಲ್ಲೂ ಅದೇ ಆದದ್ದು. ಮಂದಾರ ಪರ್ವತಕ್ಕೆ ಬೆನ್ನು ಕೊಟ್ಟು ಅಮೃತದ ಸವನವಾಯ್ತು.  ಅಂದರೆ ಅಮೃತದ ರಸದ ಸವನಕ್ಕೆ ಕಾರಣನಾದವನೆ ಸವಿತಾ - ಬಹಳ ಸಹಜವಾಗಿ ಕೂರ್ಮ ರೂಪದ ಕಥೆಯನ್ನ ಹೇಳಿದರು.
ವರೇಣ್ಯಂ :ವರೇಣ್ಯಂ ಅಂದರೆ ದೊಡ್ಡದು ಎಂದರ್ಥ. ವರಾಹ ಅಂದ್ರೂ ಅದೇ ಅರ್ಥ.(ವರಾಹ ಅಂದ್ರೆ ಹಂದಿಯಲ್ಲ.) ವರಾಹ ನಾಮಕ ಭಗವಂತ ಹಂದಿಯ ರೂಪದಲ್ಲಿ ಕಾಣಿಸಿಕೊಂಡನಾದ್ದರಿಂದ ಹಂದಿಗೆ ವರಾಹ ಎಂಬ ಅರ್ಥ ಬಂತು. ವರಾಹ ಎಂಬ ಶಬ್ದಕ್ಕೆ ಹಂದಿ ಎಂಬ ಅರ್ಥವಿಲ್ಲ. ವರ,ವರಾಹ,ವರೇಣ್ಯಂ, ಇವೆಲ್ಲದರ ಅರ್ಥ ಎತ್ತರದಲ್ಲಿರುವವ ಎಂದು. ಅದಕ್ಕೆ ಪ್ರಾಚೀನ ಸಂಸ್ಕೃತದಲ್ಲಿ ವರಾಹ ಅಂದ್ರೆ 'ಮೋಡ' ಎಂಬರ್ಥವೂ ಇದೆ.
ಭರ್ಗಹ : - ಭರ್ಜನೆ, ಸುಟ್ಟು ಬಿಡುವವ ಎಂದರ್ಥ. ನಮ್ಮಲ್ಲಿರತಕ್ಕಂತಹ ದುಖ ದುರಿತಾದಿಗಳನ್ನು ಸುಟ್ಟು ಬಿಡುವಂಥ ಶಕ್ತಿ ಅವನೆ ನರಸಿಂಹಾಗ್ನಿ ಅಂದರು. ಎಲ್ಲವನ್ನೂ ಸುಟ್ಟು ಬಿಡುವಂತಹ ಮಹಾನ್ ಶಕ್ತಿ ನರಸಿಂಹನದು. ಕೆಟ್ಟವರಿಗೆ ಅವನು ಭಯಂಕರ, ಸಜ್ಜನರಿಗೆ ಅವನು ಕರುಣಾ ಮೂರ್ತಿ. That is Narasimha.
ದೇವಸ್ಯ :- ದೇವ ಅಂದರೆ ವಾಮನ. ಯಾಕೆಂದರೆ 'ಬಲಿಯಲ್ಲಿ' ಹೋಗಿ ಮೂರು ಹೆಜ್ಜೆಯ ವ್ಯಾಪಾರ ಮಾಡಿ, 'ಬಲಿ'ಯನ್ನು ಯಾರು ಪಾತಾಳಕ್ಕೆ ತಳ್ಳಿದನೋ ಅವನೇ 'ದೇವಹ'. "ದಿವು ವ್ಯವಹಾರೆ"  ಮೂರು ಹೆಜ್ಜೆಯನ್ನು ಕೇಳಿ 'ಬಲಿ' ಯನ್ನು ಸೋಲಿಸಿದವನು. 'ಬಲಿ' ಹೇಳ್ತಾನೇ " ಮಗು ನಿನಗೆ ಬುದ್ದಿಯಿಲ್ಲ. ಕೇವಲ ಮೂರು ಹೆಜ್ಜೆಯನ್ನಿಟ್ಟು ಕೊಂಡು ಏನು ಮಾಡುತ್ತಿಯಾ? ನನ್ನಲ್ಲಿ ಬೇಕಾದಷ್ಟಿದೆ. ಬೇಕಾದಷ್ಟು ಕೇಳು" ಆಗ ವಾಮನ ಹೇಳ್ತಾನೇ "ನೋಡು ಅಗತ್ಯಕ್ಕಿಂತ ಯಾರೂ ಬಯಸಬಾರದು. ನನಗೆ ಬೇಕಾಗಿರುವುದು ಅಷ್ಟೇ. ಅಷ್ಟು ಕೊಡು ಎಂದು ಹೇಳಿ ಬಲಿಯನ್ನು ಸೋಲಿಸಿದವ ದೇವ.
ಧೀಮಹಿ:-  ಆರನೆ ರೂಪವೇ 'ಪರಶುರಾಮ'. ಧೀ ಅಂದರೆ ಅರಿವು, ಎಚ್ಚರ, ಪುಷ್ಟಿ, ಸಮೃದ್ದಿ. ಮಹಿ ಅಂದರೆ ಭೂಮಿ. ೨೧ ಬಾರಿ ಪ್ರಪಂಚ ಪರ್ಯಟನೆ ಮಾಡಿ ದುಷ್ಟರನ್ನು ಸಂಹಾರ ಮಾಡಿ ದುಷ್ಟರಿಗೆ ಯಾವತ್ತೂ ದೌಸ್ತ್ಯದಿಂದ ಮೆರೆದಾಡುವುದು ಸಾದ್ಯವಿಲ್ಲ, ಸಜ್ಜನಿಕೆ , ಧರ್ಮ,ಮಾತ್ರ ಯಾವತ್ತೂ ಗೆಲ್ಲುವುದು ಎಂದು ಭೂಮಿಗೆ ಎಚ್ಚರ ಕೊಟ್ಟವ ಪರಶುರಾಮ. ಆದ್ದರಿಂದ ಅವನು ಧೀಮಹಿ ಎಂಬ ಶಬ್ದದಿಂದ ವ್ಯಾಚ್ಯನಾಗಿದ್ದಾನೆ.
ಧಿಯಹ: - ಯ೦,ರಂ, ವ೦, ಳ೦,- 'ಯ೦' ಅಂದರೆ ಪ್ರಾಣ ದೇವರು. ವಾಯುಬೀಜ. ಅಂತಹ ವಾಯುಬೀಜವಾಚ್ಯನಾದ, ''ಕಾರವಾಚ್ಯನಾದ ವಾಯುದೇವರಿಗೆ 'ರಂ' ಅಂದ್ರೆ ಜ್ಞಾನರೂಪದಿಂದ ಜ್ಞಾನವನ್ನು ಕರುಣಿಸಿದವ, ಪುಷ್ಟಿ ಕೊಟ್ಟವ. ಆದ್ದರಿಂದ ಅವನೆ 'ಧಿಯಹ', ಅವನೆ ರಾಮ.
ಯಹ:- ಯಹ ಅಂದ್ರೆ "ಯ ಗಥೋ"  ಗತಿ ಅಥವಾ ಅವಗತಿ to go ಅಥವಾ to know ಸಂಸ್ಕೃತದಲ್ಲಿ ಯಾವುದು ಯಾವುದಕ್ಕೆ to go ಎಂಬ ಅರ್ಥವಿದೆಯೋ ಅದೆಲ್ಲಕ್ಕೂ to know ಎಂಬರ್ಥವಿದೆ. ಹೋಗುವುದು ಅಂದ್ರೆ ತಿಳಿಯುವುದು ಅಲ್ವಾ? ಹೋಗುತ್ತಾ ಹೋಗುತ್ತಾ ತಿಳಿಯುವುದು. ನಿಲ್ಲುವುದು ಅಂದರೆ ದಡ್ದನಾಗುವುದು. ಹರಿಯಯಬೇಕು, ನಿಂತಲ್ಲಿ ನಿಂತ ನೀರಾಗಬಾರದು. ಊರುರು ತಿರುಗಬೇಕು. ಆಗ ಜ್ಞಾನ ಬೆಳೆಯುತ್ತೆ. ಹೀಗೆ ಜಗತ್ತಿಗೆ ಜ್ಞಾನದ ಪ್ರವಾಹವನ್ನ, ಅರಿವನ್ನ ಕೊಟ್ಟವ ಕೃಷ್ಣ ರೂಪ. ಗೀತೆಯ ೧೫ನೇ ಅಧ್ಯಾಯದ ೨೦ ಶ್ಲೋಕಗಳು ಭಾರತದ ತತ್ವಜ್ಞಾನದ ಸಾರ ಸಂಗ್ರಹ. ಶಂಕರಾಚಾರ್ಯರು ೧೫ನೇ ಅಧ್ಯಾಯಕ್ಕೆ ವ್ಯಾಖ್ಯಾನ ಬರೆದಾಗ "ನ ಕೇವಲ೦ ಗೀತಾರ್ಥಹ , ಕಿಂತು ಸರ್ವೋಪಿ ಶಾಸ್ತ್ರಹ ಅತ್ರ ಪರಿಸಮಾಪ್ತಿ ಹೇ" – ಇದು ಕೇವಲ ಗೀತೆಯ ಸಾರ ಅಲ್ಲ. 'ಕಿಂತು ಸರ್ವೋಪಿ ಶಾಸ್ತ್ರಹ' ಎಲ್ಲಾ ಶಾಸ್ತ್ರಗಳು (ವೇದಗಳು, ಪುರಾಣಗಳು, ಇತಿಹಾಸಗಳು) ಏನನ್ನು ಹೇಳುತ್ತವೆಯೋ ಅದೆಲ್ಲವೂ ಈ ೨೦ ಶ್ಲೊಕದಲ್ಲಿ ಮುಗಿದು ಹೋಯ್ತು ಅಂತಾರೆ ಶಂಕರಾಚಾಯರು. ಭಾರತ ಒಂದು ಪಾರಿಜಾತ ವೃಕ್ಷವಾದರೇ ಆ ಪಾರಿಜಾತದ ಮಧುರಸವೇ ಈ ಗೀತೆ. ಇಡೀ ಗೀತೆಯಲ್ಲಿ ೧೫ನೇ ಅಧ್ಯಾಯ ಅನ್ನುವುದು ಸಮಸ್ತ ವೇದ ವಾನ್ಗ್ಮಯದ ಸಾರ. ಅದನ್ನ ಈ ಜಗತ್ತಿಗೆ ಕೊಟ್ಟವ ಕೃಷ್ಣ. ಆದ್ದರಿಂದ ಅವನನ್ನ 'ಯಹ' ಅಂದ್ರೂ.
ನಹ:- ಬುದ್ಧ. ನಹ ಅನ್ನುವುದು its a epithet of Budda. ಯಾಕೆ ಅಂದ್ರೆ 'ನಾ' '' ಎಲ್ಲವೂ ಶೂನ್ಯ, ನಹ ನಹ ಅಂದ್ರೆ ಯಾವುದೂ ಇಲ್ಲ ಅಂದವ ಬುದ್ಧ. ನಿಜವಾಗಿಯೂ ಅವನು ಯಾವುದು ಇಲ್ಲ  ಎಂದಲ್ಲ ಹೇಳಿದ್ದು, ನಮಗೆ ಅರ್ಥ ಆದದ್ದು ಹಾಗೆ ಅಷ್ಟೇ. ಸರ್ವಮ್ ಶೂನ್ಯಂ ಎಂದ ಬುದ್ಧ. ಶೂನ್ಯ ಎಂದರೇನು? "ತುಚ್ಛ್ಯೆನ ಭವಿತಂ" - ವೇದದಲ್ಲೂ ಈ ಮಾತು ಬರುತ್ತೆ. ಶೂನ್ಯ ಅಂದರೆ ಏನೂ ಇಲ್ಲ ಎಂದರ್ಥ ಅಲ್ಲ. ಈಗ ನಾವು 'ಸೊನ್ನೆ' ಅಂತೇವೆ ಸೊನ್ನೆಗೆ ಶೂನ್ಯ ಅಂತ ಮಾತ್ರ ಅರ್ಥವಲ್ಲ. ಸ್ವರ್ಣವೂ ಶೂನ್ಯವೇ. ಅದಕ್ಕೆ ಚಿನ್ನದ ಕೆಲಸಗಾರರನ್ನ ಸೊನ್ನೆಗಾರರು ಅಂತ ಕರೆಯುವುದು. ಹಾಗಾದರೆ ಸೊನ್ನೆ ಅಂದ್ರೆ ಅಪ್ಪಟ ಚಿನ್ನ ಅಂತ ಆಯಿತು ಅಲ್ವಾ? ಶೂನ್ಯವನ್ಣ ಸೊನ್ನೆ ಅಂತ ತಿಳಿದದ್ದು ನಮ್ಮ ನಿಮ್ಮ ತಪ್ಪು ಬುದ್ಧನದ್ದಲ್ಲ. ಅದು ಮಾತ್ರ ಅರ್ಥವಲ್ಲ 'ಶೂನ' ಅಂದರೆ -'ಶಂ' ಅಂದರೆ "ಶಂನೋ ಮಿತ್ರಸ್ಯ ವರುಣಹ" ಶಂ ಅಂದ್ರೆ ಆನಂದ, ಸುಖ, inner bless. ಶೂನ ಅಂದರೆ ಅಲ್ಪ ಸುಖಿಗಳು. ದುಖವನ್ನೇ ಸುಖವೆಂದು ಬ್ರಮಿಸುವವರು,ಅಂಥವರನ್ನ  'ಯಮಯತಿ' ನಿಯಂತ್ರಿಸುವವನು ಶೂನ್ಯ. ಹಾಗಾದರೆ ಭಗವಂತ ಇದ್ದೂ ಶೂನ್ಯನಾಗಬಹುದು. ಈ 'ಶೂನ್ಯವಾದ' ವನ್ನ ಪ್ರಶಾಂತ ವಿದ್ಯೆ ಅನ್ನುತ್ತಾರೆ. ಅದನ್ನು ಜಗತ್ತಿಗೆ ಕೊಟ್ಟವ ಬುದ್ಧ.
ಪ್ರಚೋದಯಾತ್: - ಧರ್ಮ ದಾರಿ ತಪ್ಪಿದಾಗ ಯಾರು ಧರ್ಮ ಪ್ರಚೋದನೆ ಮಾಡಲಿಕ್ಕೆ  ಕುದುರೆಯನ್ನು ಪ್ರಚೋದನೆ ಮಾಡಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ಬರುತ್ತಾನೋ ಅವನೆ 'ಕಲ್ಕಿ'.
ಹೀಗೆ ಸಹಜವಾಗಿ ಏನೂ ಎಳೆಯದೆ ಜಗ್ಗದೆ ಭಗವಂತನ ಹತ್ತು ಅವತಾರಗಳನ್ನ ಹೇಳುತ್ತದೆ ಗಾಯ್‌ತ್ರಿ. ಅದು ಮಾತ್ರವಲ್ಲ, ಭಗವಂತನ ೨೪ ರೂಪಗಳನ್ನೂ ಗಾಯತ್ರಿ ಹೇಳುತ್ತೆ. ಭಗವಂತನನ್ನ ಪ್ರಪಂಚವನ್ಣ, ನಮ್ಮ ಮೂರು ಅವಸ್ಥೆಗಳನ್ನ, ಎಲ್ಲವನ್ನೂ ಹೇಳಿ ಇವೆಲ್ಲವನ್ನೂ ನಿಯಂತ್ರಿಸುವ ಪರಾಶಕ್ತಿಯ ಕಡೆಗೆ ನಮ್ಮನ್ನ ಕೊಂಡೊಯ್ಯುವ ಮಹಾಮಂತ್ರ ಗಾಯತ್ರಿ ಮಂತ್ರ. ಅದಕ್ಕಾಗಿಯೇ ಗಾಯತ್ರಿ ಮಂತ್ರಕ್ಕೆ ಸಾಟಿಯಾದ ಮಂತ್ರ ಬೇರೆ ಇಲ್ಲ. ಹಿಂದೆ ಬ್ರಹ್ಮಾಸ್ತ್ರ ಬಿಡಲಿಕ್ಕೆ ಹೇಳುತ್ತಿದ್ದ ಮಂತ್ರ ಗಾಯತ್ರಿ. ಬ್ರಹ್ಮ ಶಿರೋ ಅಸ್ತ್ರ ಗಾಯತ್ರಿ. ದಿವ್ಯವಾದ ಹೆಚ್ಚಿನ ಮಹಾ ಅಸ್ತ್ರಗಳಿಗೆ ಅವರು ಉಪಯೋಗಿಸುತ್ತಿದ್ದದ್ದು ಇದೆ ಗಾಯತ್ರಿ ಮಂತ್ರವನ್ನ. - ಇಂತಹ ಒಂದು ಸಂಪತ್ತು ಪ್ರಾಚೀನರು ನಮಗೆ ಕೊಟ್ಟು ಹೋಗಿದ್ದಾರೆ. ನಾವೂ ಮುಂದಿನ ತಲೆಮಾರಿಗೆ ಕೊಟ್ಟು ಹೋಗಬೇಕು. ಇಲ್ಲದೇ ಇದ್ದರೆ ನಾವು ಈ ಅಪೂರ್ವ ವಿದ್ಯೆಯನ್ನ , ಈ ಸಂಪತ್ತಿನ ಕೊಂಡಿಯನ್ನ ಕಳಚಿದ, ಈ ದೇಶಕ್ಕೆ ದ್ರೋಹ ಮಾಡಿದ, ಮುಂದಿನ ಪರಂಪರೆಗೆ ಈ ಸಂಪತನ್ನ ಕೊಡರೆ ಹೋದ ಪಾಪಿಗಳಾಗುತ್ತೇವೆ. ಆ ಎಚ್ಚರದಿಂದ ಈ ಸಂಪತನ್ನ ಉಳಿಸೋಣ, ಬೆಳೆಸೋಣ, ಮುಂದಿನ ತಲೆಮಾರಿಗೂ ಹಂಚೋಣ ಎಂದು ಪ್ರಾರ್ಥಿಸಿ - ಈ ಗಾಯತ್ರಿ ಚಿಂತನೆಯನ್ನ  ಇಲ್ಲಿಗೆ ಮುಗಿಸುತ್ತಿದ್ದೇನೆ.
ನಿಮಗೆಲ್ಲರಿಗೂ ಮಂಗಳವಾಗಲಿ
ಧನ್ಯವಾದಗಳು.