ಓಂಕಾರದ ಮೂರು ಅಕ್ಷರಗಳಿಂದ ಮೂರು ಶಬ್ಧಗಳು ಹುಟ್ಟಿದವು. 'ಅ' ದಿಂದ 'ಭೂ' ಆಯ್ತು, 'ಉ'ದಿಂದ 'ಭುವಸ್' ಆಯ್ತು, 'ಮ' ದಿಂದ 'ಸ್ವ್ಹ’ಆಯ್ತು. - 'ಅ' ದಿಂದ 'ಭೂ' ಆಯ್ತು ಅಂದರೇನು? 'ಅ' ಕ್ಕೆ ಮತ್ತು ಭೂ ಗೆ ಏನು ಸಂಭಂದ? 'ಅ' ಅಂದರೆ ಅನಂತವಾದ ಆನಂದ ಎಂದರ್ಥ. 'ಭೂಹು' ಅಂದರೂ ಅದೇ ಅರ್ಥ. (ಭೂ ಮ ಅಂದರೆ ಅನಂತ , ಆನಂದ) ಯಾವುದು ಅನಂತವೋ, ಯಾವುದು ಪೂರ್ಣವೋ ಅದೇ ಆನಂದಮಯ. ಯಾಕೆಂದರೆ ಅಪೂರ್ಣತೆಯಲ್ಲಿ ಆನಂದವಿಲ್ಲ. {ನಾಲ್ಪೆ ಸುಖಮಸ್ತಿ} ಅಲ್ಪ ಜೀವರಲ್ಲಿ ಅಲ್ಪ ಸುಖವಿದೆ, ಆದರೆ ಪೂರ್ಣ ಆನಂದ ಪೂರ್ಣತೆಯಲ್ಲಿಯೇ ಇರುವುದು. ಅಂದರೆ ಎಚ್ಚರದಲ್ಲಿಯೂ ಅನಂತವಾದ ಆನಂದ ಯಾರಲ್ಲಿದೆಯೋ ಅದು ದೇವರು. ಅದರ ಜೊತೆಗೆ 'ಉ' ಅಂದರೆ 'ಭುವಹ'. - 'ಭೂ' ಅಂದರೆ 'ಭೂತಿ'. 'ವ' ಅಂದರೆ 'ವರ' 'ಭುವಾಹ' ಅಂದರೆ 'ಭೂತಿ ವರಹ'. ಭೂತಿ ಅಂದರೆ ಔನ್ನತ್ಯ, ಎತ್ತರ, ಅಂದರೆ ಎಲ್ಲರಿಗಿಂತಲೂ ಎತ್ತರದಲ್ಲಿರುವವ, ಸರ್ವೋತ್ತಮ ಎಂದರ್ಥ. ('ಉ' ಅಂದರೂ ಅದೇ ಅರ್ಥ ಉನ್ನತ'). ನಂತರ 'ಮ' ಅಂದರೆ 'ಸುವಹ' - ಮ ಅಂದರೆ ಜ್ಞಾನ."ವರೀತಿ ಜ್ಞಾನ ಮುಚ್ಚತೆ". ಸುವಹ ಅಂದರೆ ಪೂರ್ಣ ಜ್ಞಾನ ಸ್ವರೂಪ. ಅಂದರೆ ನಮ್ಮಲ್ಲಿ ಏನೇ ಇದ್ದರೂ ಇದೆ ಎನ್ನುವುದರ ಎಚ್ಚರ ಇಲ್ಲದಿದ್ದರೆ ಅದು ಇದ್ದೂ ಇಲ್ಲದ ಹಾಗೆ, ಅಂದರೆ ಇರುವುದು ಸಂಪತ್ತಲ್ಲ ಇರುವುದು ಗೊತ್ತಿರುವುದು ಸಂಪತ್ತು. 'ಸು' ಅಂದರೆ 'ಸತ್', ಸಮಿಚೀನ, ಸುವಹ ಅಂದರೆ ಸಚ್ಚಿದಾನಂದ. ಆದ್ದರಿಂದ ನಮಗೆ ಏನು ಬೇಕು? ನಮಗೆ ಮೊದಲು ಜ್ಞಾನ ಬೇಕು. ಅದನ್ನೇ ನಾವು ದೇವರಲ್ಲಿ ಕಾಣಬೇಕು. "ಭಗವಂತ ನೀನು ಜ್ಞಾನಾನಂದ ಸ್ವರೋಪ, ನನ್ನ ಜ್ಞಾನಾನಂದವನ್ನ ವಿಕಾಸಗೊಳಿಸು”. - ಇಷ್ಟೇ. ಉಳಿದ ಗುಣಗಳನ್ನು ಉಪಾಸನೆ ಮಾಡದೇ ಇದ್ರೂ ಇವೆರಡು ಸಿಕ್ಕಿದರೆ ಎಲ್ಲ ದುಖಗಳೂ ಅಗೋಚರ. ಅಂದರೆ ನಾವು ಹೇಗೆ ಉಪಾಸನೆ ಮಾಡುತ್ತೇವೆಯೋ ಅದು ನಮ್ಮಲ್ಲಿ Reflect ಆಗುತ್ತೆ. “ತ೦ ಯತ್ ಯತ್ ಉಪಾಸತೆ ತದೇವ ಭವತಿ”. ಓಂಕಾರ ಹೇಳುವುದೂ ಅದನ್ನೇ. ನಮ್ಮಲ್ಲಿ ಜ್ಞಾನವಿದೆ ಆದರೆ ಅದು ಅಜ್ಞಾನದ ಜೊತೆಗೆ ಇದೆ. ನಮ್ಮಲಿ ಆನಂದವಿದೆ ಅದರ ಮರುಕ್ಷಣ ದುಖವಿದೆ pure bless ಅನ್ನುವುದು ನಮ್ಮಲ್ಲಿ ಇಲ್ಲ. ಮನುಷ್ಯ ಸುಖಕ್ಕಾಗಿ ಆನಂದಕ್ಕಾಗಿ ಕಷ್ಟ ಪಡುತ್ತಾನೆ. ಮನುಷ್ಯನಿಗೆ ನಿಜವಾಗಿ ಸುಖಪದಲಿಕ್ಕೆ ಗೊತ್ತಿಲ್ಲ. ಸುಖಕ್ಕೋಸ್ಕರ ಕಷ್ಟಪಡುತ್ತಾನೆ. ಮಾಡಿಡುವುದು, ಕೂಡಿಡುವುದು ಅದೇ ಸುಖ ಅಂತ ತಿಳಿದಿದ್ದಾನೆ - ಪ್ರಾರಬ್ದ ಕರ್ಮ. ಮಾಡಿದ್ದನ್ನ ತಿನ್ನೋ ಯೋಗವಿಲ್ಲ, ಮತ್ತೆ ಯಾರು ಯಾರೋ ನಾರಿ ನಾಯಿಗಳು, ಭಂಧುಗಳು ದೋಚಿಕೊಂಡು ಹೊಗುತ್ತರೆ. ಆದ್ದರಿಂದ ನಮ್ಮಲ್ಲಿ ಆನಂದವಿಲ್ಲ , ಜ್ಞಾನವಿಲ್ಲ. pure existence, pure bless, pure wisdom that is sachhidaananda. ಇದು ‘ಭೂಹು, ಭುವಹ, ಸುವಹ’.
ಅದು ಮಾತ್ರವಲ್ಲ, ಇಡೀ ಬ್ರಾಹಮ್ಮಂಡವನ್ನ ಮೂರು ವಿಭಾಗ ಮಾಡಿದರು. ಚತುರ್ದಶ ಭುವನಗಳು ಅಂತಾರೆ. ಭೂಮಿಯ ತನಕ ಇರುವ ಎಲ್ಲವೂ 'ಭೂ' ಅಂತಾಯ್ತು. ಮೇಲೆ ಇರುವ ದೇವತೆಗಳ sattle world ಯಾವುದೋ ಅದು ‘ಸುವಹ’, ಈ ‘ಭೂ’ ಮತ್ತು ‘ಸುವಹ’ದ ಮದ್ಯೆ ಇರುವ space ಇದೆಯಲ್ಲಾ ಅದು ‘ಭುವಹ’, ಅಥವಾ ಅಂತರಿಕ್ಷ. ಇಂತಹ ಇಡೀ ಬ್ರ್ಹಾಹಮಾಂಡದೊಳಗೆ ಮೂರು ಮುಖದಿಂದ ತುಂಬಿದವ ‘ಭೂ ಭುವ ಸ್ವಹ’. ಅವನೆ "ತ್ರಿಪಾತ್". ಮೂರು aspect. ಅದಕ್ಕೆ ವ್ಯಾಹೃತಿ ಅಂತಾರೆ. ಯಾಕೆ ಭೂಮಿಗೆ ‘ಭೂ’ ಆಕಾಶಕ್ಕೆ ‘ಭುವ’ ಸ್ವರ್ಗಕ್ಕೆ ‘ಸುವಃ’ ಅಂತಾರೆ? ಅಂದ್ರೆ ' ಭೂ' ನಾಮಕ ಭಗವಂತ ಭೂಮಿಯಲ್ಲಿ ತುಂಬಿದ ಆದ್ದರಿಂದ ಭೂಮಿ ‘ಭೂ’, ‘ಭುವಸ್' ನಾಮಕ ಭಗವಂತ ಅಂತರಿಕ್ಷದಲ್ಲಿ ತುಂಬಿದ ಆದ್ದರಿಂದ ‘ಭುವಸ್’, ಸ್ವರ್ ನಾಮಕ ‘ಭಗವಂತ’ ಸ್ವರ್ಗದಲ್ಲಿ ತುಂಬಿದ ಆದ್ದರಿಂದ ‘ಸ್ವಹ’. ನಮ್ಮ ಮಕ್ಕಳಿಗೆ ದೇವರ ಹೆಸರು ಇಡುತ್ತೇವೆಯಲ್ಲಾ ಹಾಗೆಯೇ ಮೂರು ಲೋಕಗಳಿಗೂ ಭಗವಂತನ ಹೆಸರು.
ಇಂಥಾ ವ್ಯಾಹೃತಿಯಿಂದ ಮುಂದಕ್ಕೆ ಹೋಗೋಣ. ಈಗ ‘ಭೂ’ ಎಂಬ ಒಂದಕ್ಷರವಿದ್ದದ್ದು ‘ತತ್ಸ ವಿತುರ್ವರೇಣ್ಯಂ’ ಎಂಬ ಎಂಟು ಅಕ್ಷರವಾಯ್ತು. ‘ಭುವಃ’ ಇದ್ದದ್ದು ‘ಭರ್ಗೋ ದೇವಸ್ಯ ಧೀಮಹಿ’., ‘ಸುಹವ್’ ಇದ್ದದ್ದು ‘ದಿಯೋ ಯೋನ ಪ್ರಚೋದಯಾತ್’ ಎಂಬ ಎಂಟು ಅಕ್ಷರ ಮೂರು ಪಾದವಾಯ್ತು, 24 ಅಕ್ಷರದ ಒಂದು ಗಾಯತ್ರಿಯಾಯ್ತು. ಆದರೆ ಮೊದಲ ಪಾದದಲ್ಲಿ 'ತತ್ಸ ವಿತುರ್ವರೇಣ್ಯಂ' ಇಲ್ಲಿ ಎಂಟು ಅಕ್ಷರವಿಲ್ಲ ಬರೀ ಏಳು ಅಕ್ಷರ ಮಾತ್ರವಿದೆ. [ಅರ್ಧ ಅಕ್ಷರ ಲೆಕ್ಕಕ್ಕಿಲ್ಲ]
ಆದ್ದರಿಂದ ಅದನ್ನು ವರೇಣ್ಯಂ ಅಂತ ಓದಬಾರದು ವರೇಣಿಯಮ್ ಎಂದು ಓದಬೇಕು. ಅದು ಯಾಕೆಂದ್ರೆ ಇದರೆ ಒಂದು ಫಿಲಾಸಫಿ ಇದೆ. ಈ 24 ಅಕ್ಷರಗಳಿಗೂ ಭಗವಂತನ 24 ರೂಪಗಳಿಗೂ ಸಂಭಂದವಿದೆ. ಇದು ಗಾಯತ್ರಿಯ ಇನ್ನೊಂದು ಮುಖ. ಅಂದರೆ ‘ತತ್’ ಅನ್ನುವುದು ‘ಕೇಶವನನ್ಣ’, ‘ಸ’ ಅನ್ನುವುದು ‘ನಾರಾಯಣನನ್ನ್’, ‘ವೀ’ ಅನ್ನುವುದು ‘ಮಾಧವನನ್ನ’, ‘ತು’ ‘ಗೋವಿಂದನನ್ನ’, ‘ವ’ ‘ವಿಷ್ಣುವನ್ನ’, ‘ರೇ’ ‘ಮಧುಸೂಧನನ್ನ’, ‘ಣ್ಯಮ್’ ಅನ್ನುವುದು (ಎರಡಕ್ಷರ) ‘ತ್ರಿವಿಕ್ರಮ / ವಾಮನನನ್ನ’. (ಎರಡು ಅವತಾರ). ವಾಮಾನನೆ ತ್ರಿವಿಕ್ರಮ, ತ್ರಿವಿಕ್ರಮನೇ ವಾಮನ. ಅದಕ್ಕೆ ಒಂದೇ ಅಕ್ಷರ. ಓದುವಾಗ
ನ್ಯಮ್ ಇದ್ದದ್ದು ನಿಯಂ ಆಯಿತು. ಇದು ಅದರ ಹಿನ್ನಲೆ.
ಗಾಯತ್ರಿಚಿಂತನ ಮುಂದುವರಿಯುತ್ತದೆ.................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ