ದೇವರನ್ನ ಏನೂಂತ ಉಪಾಸನೆ ಮಾಡಬೇಕು? ದೇವರು ಅಂದ್ರೆ "ಅ ". ನೇಥಿ ನೇಥಿ ಆತ್ಮಾ ಆದುಷ್ಯಾಹ" ನೀನು ಯಾವುದೆಲ್ಲ ದೇವರು ಅಂತ ತಿಳಿದುಕೊಂಡಿದ್ದಿಯ ಅದು ಯಾವುದೂ ಅಲ್ಲ. ಯಾಕೆಂದರೆ ನಿನ್ನ mind consider ಮಾಡುವ ಎಲ್ಲ ವಸ್ತುಗಳು ಪಂಚಭೂತಗಳ ಒಳಗೆ ಇರತಕ್ಕಂತಹು. ಅಂದ್ರೆ "ಮಣ್ಣು ,ನೀರು, ಬೆಂಕಿ ,ಗಾಳಿ ,ಆಕಾಶ" ಪಂಚಭೂತಗಳಿಂದ ನಿರ್ಮಿತ ಪ್ರಪಂಚ ನಮ್ಮ ಕಾನ್ಸೆಪ್ಟ್. ಅದಕ್ಕಿಂತ ಹೊರಗೆ ನಮ್ಮ ಆಲೋಚನೆ ಹೋಗುವುದೇ ಇಲ್ಲ. ಆದರೆ ದೇವರು ಮಣ್ಣಲ್ಲ, ದೇವರು ನೀರಲ್ಲ, ದೇವರು ಗಾಳಿಯಲ್ಲ, ದೇವರು ಬೆಂಕಿಯಲ್ಲ, ದೇವರು ಆಕಾಶವಲ್ಲ. ನಿನ್ನ ಮೈಂಡ್ಗೆ ಸಿಗುವ ಯಾವ ವಸ್ತುವೂ ಅಲ್ಲ ದೇವರು ಅದನ್ನ ಮೊದಲು ತಿಳುದುಕೋ. ಅದು ಯಾಕೆ ಅಲ್ಲ ಅಂದರೆ ನಿನ್ನ ಅರಿವು ಸಾಂತ ಅದು "ಅನಂತ" . ನಿನ್ನ ಅರಿವು ಸೀಮಿತ, ಹುಟ್ಟು ಸಾವುಗಳ ಮಾತ್ರ ನೀನು ಚಿಂತಿಸಬಲ್ಲೆ ಅದರ ಹೊರಗಿನ ಅನಂತ್ವನ್ನ ನಿನ್ನ mind ಚಿಂತಿಸಲಾರದು. ಮತ್ತು ನಿನಗೆ ಗೊತ್ತಿರುವ ಎಲ್ಲದರಿಲ್ಲ್ಲಿಯೂ ದೋಷಗಳಿವೆ, ಈ ಪ್ರಪಂಚ ನಿರ್ಮಾಣ ಆದದ್ದೇ ಮೂರು ದೋಷಗಳಿಂದ
[ಇದು ಮೂರು ದೋಷಗಳು ಆದರೆ ಹೆಸರು ಗುಣಗಳು]
Creation through..................................ರಜಸ್ಸು
Maintenance through .............................ಸತ್ವ
Destruction through ......................................ತಮಸ್ಸು.-ಸೃಷ್ಟಿ ಸ್ಥಿತಿ ಸಂಹಾರಗಳೆಂಬ ಲೀಲೆ ಮೂರು ಗುಣಗಳ ಮೂಲಕ ಅಥವಾ ಈಮೂರು energy ಗಳ ಮೂಲಕ ನಡೆಯುತ್ತದೆ .ಆದ್ದರಿಂದ ನಿನಗೆ ಏನೆಲ್ಲಾ ಗೊತ್ತಿದೆ ಅದು ತ್ರಿಗುಣಾತ್ಮಕ ಪ್ರಪಂಚ. ಯಾವುದು ತ್ರಿಗುಣಾತೀತೆವೂ ಅದನ್ನು ಮನಸ್ಸು ಗ್ರಹಿಸುವುದು ಸಾದ್ಯವಿಲ್ಲ. ನಿನ್ನ ಮನಸ್ಸೇ ತ್ರಿಗುಣಬದ್ದ, ಆದರೆ ಭಗವಂತನಲ್ಲಿ ಈ ಮೂಲಭೂತವಾದ ಈ ಗುಣಗಳಿಲ್ಲ, ಆದ್ದರಿಂದ ದೋಷಗಳೂ ಇಲ್ಲ. ಹಾಗಾದರೆ ನಮಗೆ ಗೊತ್ತಿರುವ ಎಲ್ಲದರಲ್ಲಿಯೂ ದೋಷಗಳಿವೆ, ಅದು ಒಂದು ನಿರ್ದುಷ್ಟವಾದವಸ್ತು. ನಮಗೆ ಗೊತ್ತಿರುವ ಎಲ್ಲವೂ ಸೀಮಿತ, ಅದು ಅನಂತ. ಆದ್ದರಿಂದ ನಮಗೆ ಗೊತ್ತಿಲ್ಲದ ಯಾವುದೂ ಒಂದು ಸಂಗತಿ ದೇವರು.
ಅ" ಅಂದರೆ ಏನು ಎಂದು ತಿಳಿದಾಯಿತು, ದೇವರು " ಅ" ಯಾಕೆ ಎಂಬುದೂ ಗೊತ್ತಾಯಿತು, ಈಗ ಆ negetive ನ್ನ ಸ್ವಲ್ಪ ಪಾಸಿಟಿವ್ ಗೆ ತರುತ್ತಾರೆ ಋಷಿಗಳು - ಯಾಕೆ ನೀನು ತಿಳಿಯಲಿಕ್ಕೆ ಸಾದ್ಯವಿಲ್ಲ ಅಂದರೆ ಅದು "ಉ" ಅಂದ್ರು. "ಉ" ಅಂದ್ರೆ 'ಉಪರಿ' , 'ಉನ್ನತಿ' ಎಂದರ್ಥ.-ನಿನ್ನ ತಿಳುವಳಿಕೆ, ನಿನ್ನ thinking, ನಿನ್ನ mental elevation ಎಷ್ಟು ಎತ್ತರಕ್ಕೆ ಹೋಗಬಹುದೋ ಅದು ಅದಕ್ಕಿಂತಲೂ ಎತ್ತರದಲ್ಲಿದೆ. beyond your mental elevation. ಅದಕ್ಕೆ ಡಿ ವಿ ಜಿಯವರು ಹೇಳ್ತಾರೆ "ತುಂಬು ದಿತ ಜೀವಿತದ ಗಣನೆಗಳ ಮೀರಿದುದು, ಇಂಬುಗಳ ಬಿಂಬಗಳ ಸನ್ನಿಧಾನವದು, ಅಂಬರದ ಆಚೀನದು ತುಂಬಿರುದು ಎತ್ತಲುಮ್ ಶಂಬು ಪರ ಬೊಮ್ಮನದು - ಮಂಕುತಿಮ್ಮ"
ಅದು "ಅಂಬರದ ಆಚೀನದು " -ನಿನ್ನ ಮನಸ್ಸು ಏರಲು ಆಗದ ಎತ್ತರದಲ್ಲಿದೆ. ಯಾಕೆಂದರೆ ಅದು "ಅ" ."ಅ" ಅಂದರೆ "ಅಲ್ಲ" ಎಂಬರ್ಥ ಮಾತ್ರ ಅಲ್ಲ "ಅ" ಅಂದ್ರೆ ವಿರುದ್ದ ಪದವೂ ಹೌದು. ಈಗ ಉದಾ: ಅಸುರ ಅಂತೇವೆ , ಅಸುರರು ಅಂದ್ರೆ ಸುರರು ಅಲ್ಲದವರು ಅಂತ ಅರ್ಥ ಅಲ್ಲ. ಸುರರು ಅಲ್ಲದವರು ಅಸುರರು ಎಂದಾದರೆ ನಾವೆಲ್ಲರೂ ಅಸುರರಾಗಬೇಕು. ಹಾಗಾದರೆ ಅಸುರರು ಅಂದ್ರೆ ಸುರರ ವಿರೊದಿಗಳು ಅಸುರರು. ಭಗವಂತ "ಅ" ಅಂದ್ರೆ ಅವನಲ್ಲಿ ದೋಷವಿಲ್ಲ ಎಂಬುದು ಒನ್ದರ್ಥ ,ದೋಷಕ್ಕೆ ವಿರುದ್ದವಾದುದು ಅಂದ್ರೆ ಗುಣ ಪೂರ್ಣ. ಆದ್ದರಿಂದ ದೇವರು ಸರ್ವಗುಣಪೂರ್ಣ,ಸರ್ವದೋಷವರ್ಜಿತ, ಸರ್ವದೋಷವರ್ಜಿತವಾದ ಒಂದು ವಸ್ತುವೇ ನಿನಗೆ ಅಪರಿಚಿತ, ಸರ್ವಗುಣಪೂರ್ಣ ಎಂಬ concept ನಿನಗೆ ಅಪರಿಚಿತ. ಯಾಕೆಂದರೆ ನೀನು ಯಾವುದನ್ನು ನೋಡುತ್ತೀಯೋ ಅದರಲ್ಲಿ ಎಲ್ಲದರಲ್ಲಿಯೂ ಡೀಫೆಕ್ಟ್ ಇದೆ. ನೀನು ಯೋಚಿಸಿ ತಿಳಿಯುವುದಕ್ಕಿಂತಲೂ ಎತ್ತರದಲ್ಲಿದೆ. ಆದರೂ ನೀನು ನಿರಾಶನಾಗಬೇಡ. ಯಾಕೆಂದರೆ ಭಗವಂತ "ಮ" ಅಂದ್ರು. " ಮ" ಅಂದ್ರೆ is to know, u can understand it. ನೀನು ನಿನ್ನ ಪಾತ್ರೆಯಲ್ಲಿ ತುಂಬಬಹುದಾದಷ್ಟು ಅದನ್ನು ಗ್ರಹಿಸಬಹುದು. ಸಂಪೂರ್ಣವಾಗಿ ತಿಳಿಯಲು ಸಾದ್ಯವಿಲ್ಲವಾದರೂ ನಿನ್ನ ಅರಿವಿಗೆ ತಕ್ಕಂತೆ ಅರಿತುಕೊಳ್ಳಬಹುದು. ಈಗ ಉದಾ: ತಂಬಿಗೆ ಹಿಡ್ಕೊಂಡು ಬಾವಿ ಕಟ್ಟೆಗೆ ಹೋಗುತ್ತೇವೆ, ಬಾವಿಯಲ್ಲಿನ ನೀರು ನೋಡಿ ಅಯ್ಯೋ ಇಷ್ಟೊಂದು ನೀರು ನನ್ನ ತಂಬಿಗೆಯಲ್ಲಿ ತುಂಬುವುದಿಲ್ಲ ಎಂದು ಬರೀ ತಂಬಿಗೆಯಲ್ಲಿ ವಾಪಾಸ್ ಬರೋಲ್ಲ ತಾನೆ?. ತಂಬಿಗೆಯಲ್ಲಿ ಎಷ್ಟು ಹಿಡಿಯುತ್ತದೆಯೋ ಅಷ್ಟು ಹಿಡ್ಕೊಂಡು ಬರುವುದು ತಾನೆ? ಅದುವೇ " ಮ". ಪೂರ್ಣವಾಗಿ ನೀನು ಅದನ್ನ ಗ್ರಹಿಸಲಾರೆ, ಆದರೆ ಎಷ್ಟು ತುಂಬುತ್ತದೆಯೋ ಅಷ್ಟನ್ನಾದರೂ ತುಂಬಿಸು. ಅದು ಅನಂತ.
ಇದು ಓಂಕಾರ ಕೊಡುವ ಬೇಸಿಕ್ ಭರವಸೆ. ಹೀಗೆ ಹೇಳುತ್ತಾ ಹೇಳುತ್ತಾ ಮುಂದೆ "ಅ" ಅಂದ್ರೆ ಮತ್ತೆ possitiveಗೆ ಬರುತ್ತದೆ. 'ಅ' ಅಂದ್ರೆ ಅಧಿಕ, 'ಉ' ಅಂದ್ರೆ ಉಚ್ಚ ಅಂತ ಎಲ್ಲಾ ಶಾಸ್ತ್ರಗಳಲ್ಲಿಯೂ 'ಮ' ಅಂದ್ರೆ ಹೇಳಲ್ಪಟ್ಟಿದೆ. ಯಾಕೆಂದರೆ ನಮ್ಮ ಬದುಕಿನ ಎಲ್ಲ ಆವಸ್ಥೆಗಳೂ ಅವರ ಅಧೀನ . 'ಅ' ಅಂದ್ರೆ ಆಪ್ತಿ, ಅಂದ್ರೆ ಹೊರಗಿನ ಪ್ರಪಂಚದ ಜೊತೆಗೆ ನಮ್ಮ ವ್ಯಾಪ್ತಿ contact with external world. ಅದು ಮಾತ್ರವಲ್ಲ ಅ ಕಾರದಿಂದ ಪ್ರಾರಂಬವಾಗುವ ಎಲ್ಲಾ quality ಗಳೂ ಅದರಲ್ಲಿವೆ. 'ಅ' ಅಂದ್ರೆ ಅನಂತ, ಆನಂದ ಸ್ವರೂಪ, - ಅಲ್ಲದೇ ನಮ್ಮ ಎಲ್ಲಾ ಚಿಂತನೆಗಳೂ ಕಾಲ ಬದ್ದ. ನಮಗೆ tense ಇಲ್ಲದೇ ಮಾತಾಡೋಕೆ ಬರಲ್ಲ. 'ನಾನು ಹೋದೆ, ನಾನು ಹೋಗುತ್ತೇನೆ, ನಾನು ಹೋಗುವೆ, ಹೀಗೆ ಕಾಲ ಬಿಟ್ಟು ನಾವಿಲ್ಲ. "ತ್ರಿಥ ಭದ್ದೋ ವೃಷಭೋ ರೋರರೀತಿ" ಈ ಮೂರು ಕಾಲಕ್ಕೆ ಕಟ್ಟಿ ಹಾಕಿ ಈ ಶಬ್ದ ಪ್ರಪಂಚ ನಮ್ಮನ್ನು ಮಾತಾದಿಸುತ್ತದೆ. ಆದರೆ ಭಗವಂತ ಇದ್ದಾನೆ ಅಂತ ಹೇಳಬೇಕೋ?, ಇರುತ್ತಾನೆ ಅಂತ ಹೇಳಬೇಕೋ?, ಇದ್ದ ಅಂತ ಹೇಳಬೇಕೋ? - ಅವನು ' ಅ' - ಅತೀತ ಕಾಲವೂ ಅವನೇ {past}, ಅವನು 'ಉ' - ಉತ್ಪನ್ನ ಕಾಲವೂ ಅವನೇ,{present}, ಅವನು 'ಮ'- ಮೆಯ ಅಂದ್ರೆ ಮುಂದೆ ನಿರ್‌ಮೆಯ ಕಾಲವೂ ಅವನೇ {future}. ಅಂದರೆ ಮೂರು ಕಾಲದಲ್ಲಿಯೂ ಯಾರಿದ್ದಾನೋ ಅವನೆ ಕಾಲಾತೀತನಾದ "ಓಂ". ಭೂತ ವರ್ತಮಾನ ಭವಿಷ್ಯ ಈ ಮೂರು ಕಾಲವನ್ನು ಮೀರಿ ನಿಂತ ಒಂದು ಸತ್ಯ ಯಾವುದಿದೆ ಅದನ್ನೇ ದೇವರು ಅಥವಾ ಓಂ ಎಂದು ಕರೆದರು.
ನಮ್ಮ ಬದುಕು ಅಂದ್ರೆ ಮೂರು ಆವಸ್ಥೆಗಳು, ಎಚ್ಚ ರ, ಕನಸು, ನಿದ್ದೆ. 'ಅ' ಅಂದರೆ ಆಪ್ತಿ ಅಥವಾ ವ್ಯಾಪ್ತಿ - ನಾವು ನಮ್ಮನ್ನು ಹೊರಗಿನ ಪ್ರಪಂಚದ ಜೊತೆಗೆ ಹಬ್ಬಿಸಿಕೊಳ್ಳುವುದು. contact. ಅದು ಎಚ್ಚರದಲ್ಲಿ ಮಾತ್ರ. 'ಅ' ಈ ಎಚ್ಚರದಲ್ಲಿ ನಾವು ಮಾಡುವ ವ್ಯಾಪಾರಗಳಲ್ಲಿ cocentrate ಮಾಡು ಅಂತಾರೆ ಶಸ್ತ್ರಕಾರರು. ಅದು ಏನು ಅಂದ್ರೆ? - ನಾವು ಹೇಳುತ್ತೇವೆ 'ನನ್ನ ಕಣ್ಣಿನಿಂದ ನೋಡಿದೆ, ನನ್ನ ಕಿವಿಯಿಂದ ಕೇಳಿದೆ, ನನ್ನ ಬಾಯಿಯಿಂದ ಮಾತಾಡಿದೆ ಅಂತೇವೆ, ಆದರೆ ಇದೆಲ್ಲ ಸತ್ಯ ಅಲ್ಲ. ಎಚ್ಚರದಲ್ಲಿ ನೀನು ನೀನಾಗಿ ನಿನ್ನ ಅಧೀನನಾಗಿ ಕೆಲಸ ಮಾಡಿದೆ , ಯಾಕೆಂದರೆ " ಕೆನೇಶಿತಂ ಪತತಿ ಪ್ರೇಷಿತಂ ಮನಹ: " - ಇದು 'ಅ' ಕಾರದ ಅರ್ಥವನ್ನು ಹೇಳತಕ್ಕಂತಹುದು. ನನ್ನ ಕಣ್ಣಿನಿಂದ ನಾನು ನೋಡಿದೆ ದೇವರೇನು ಮಾಡಿದ?-ಸುಳ್ಳು. ಈವಾಗ ಒಂದು ವಿಷಯ - ನೋಡಬೇಕಾದರೆ ಮೂರು ಸಂಗತಿಗಳು ಬೇಕು. ೧. ಎದುರಲ್ಲಿ ಒಂದು ವಸ್ತು ಇರಬೇಕು {ರೂಪ} , ೨. ಅದನ್ನು ನೋಡಲಿಕ್ಕೆ ಕಣ್ಣಿರಬೇಕು. ೩. ರೂಪ ಮತ್ತು ಕಣ್ಣಿದ್ದರೆ ಸಾಲದು ಅದನ್ನು ನೋಡಲು ಬೆಳಕಿರಬೇಕು. -ಇದರಲ್ಲಿ ನನ್ನದು ಯಾವುದು? ಆ ರೂಪ ನಾನು ಸೃಷ್ಟಿ ಮಾಡಿದ್ದಲ್ಲ, ಭಗವಂತ ಯಾವುದೋ ಒಂದು ರೂಪ ನನ್ನ ಕಣ್ಣ ಮುಂದೆ ಇಟ್ಟ, ನಾನು ಕಣ್ಣು ತೆರೆದಾಗ ನೋಡಿದೆ, ಆ ರೂಪ ಬರಲಿ ಎಂದು ನಾನು ತಂದು ನಿಲ್ಲಿಸಿದ್ದಲ್ಲ , ನನ್ನ ಕಣ್ಣು ನಾನು ಅಂಗಡಿಯಿಂದ ತಂದಿಟ್ಟುಕೊಂಡದ್ದು ಅಲ್ಲ , ಯಾಕೆಂದರೆ ಕೆಲವರಿಗೆ ಹುಟ್ಟುವಾಗಲೇ ಕಣ್ಣು ಇರುವುದಿಲ್ಲ. ಅವರು ಕಣ್ಣಿಲ್ಲ ಸ್ವಾಮೀ ಎಂದು ಹೇಳ್ಬೇಕಷ್ಟೇ. ರೂಪ ಮತ್ತು ಕಣ್ಣಿನ ನಡುವೆ ಬೆಳಕು ನಮ್ಮದಲ್ಲ – so ಇದರಲ್ಲಿ ನಮ್ಮ ಸ್ವಂತಿಕೆ ಏನೂ ಇಲ್ಲ. ಹಾಗೆಯೇ ಕಿವಿ ಕೊಟ್ಟ ಕೇಳುವ ಶಕ್ತಿ ಕೊಟ್ಟ, ಎಂಟು ದಿಕ್ಕಿನಿಂದ ನಾದ ಇಟ್ಟ. ಕೇಳಬೇಕು ಅಂತ ಬಯಸಿದ್ದು ಕೇಳಲಿಕ್ಕಾಗುವುದಿಲ್ಲ. ಮಾಡಬೇಕು ಅಂತ ಬಯಸಿದ್ದು ಮಾಡಲಿಕ್ಕಾಗುವುದಿಲ್ಲ, ನೋಡಬೇಕು ಅಂತ ಬಯಸಿದ್ದು ನೋಡಲಿಕ್ಕಾಗುವುದಿಲ್ಲ.- ಅಂದರೆ ಎಚ್ಚರದಲ್ಲಿ ನಾನು ನನ್ನ ಸ್ವಂತ ಶಕ್ತಿಯಿಂದ ಏನೂ ಮಾಡ್ತಾ ಇಲ್ಲ.. ನನ್ನನ್ನು ಎಚ್ಚರದಲ್ಲಿ ನಿಯಂತ್ರಿಸುವ ಶಕ್ತಿ ಯಾವುದೋ ಅದುವೇ 'ಅ' - ಅದಕ್ಕೆ ಅದನ್ನು "ವಿಶ್ವ" ಅಥವಾ "ವೈಶ್ವಾನರ" ಅಂತಾರೆ ಉಪನಿಷಾತ್ಕಾರರು. ಇದನ್ನು ನಿಯಂತ್ರಿಸುವ ಸ್ವಿಚ್ ಇರುವುದು "ಆಜ್ಞಾಚಕ್ರ" {ನಮ್ಮ ಬಲಗನ್ಣಿನ ಹತ್ತಿರ}ದಲ್ಲಿ. ಆದ್ದರಿಂದಲೇ ನಿದ್ದೆ ಬಂದಾಗ ಕಣ್ಣು ಮುಚ್ಚಿಕೊಳ್ಳುತ್ತೇವೆ.(ಸ್ವಿಚ್ ಆಫ್). ಎಚ್ಚ ರವಾದಾಗ ಕಣ್ಣು ತೆರೆಯಿತು (ಸ್ವಿಚ್ ಆನ್).
ಗಾಯತ್ರಿಚಿಂತನ ಮುಂದುವರಿಯುತ್ತದೆ....................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ